ಸರ್ಕಾರಿ ಶಾಲಾಮಕ್ಕಳಿಗೆ 30 ಸಾವಿರ ಸ್ಪೆಟರ್ ವಿತರಣೆಗೆಕ್ರಮ-ಶಾಸಕ ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ: ಶಾಲೆಗಳಿಗೆ ಕುಡಿಯುವ ನೀರು, ಶೌಚಾಲಯ, ಕಟ್ಟಡಸೇರಿದಂತೆಇತರೇ ಮೂಲಸೌಕರ್ಯಗಳನ್ನು ಒದಗಿಸಲುತಾವು ಬದ್ದವಾಗಿರುವುದಾಗಿ ಎಂಎಸ್‍ಐಎಲ್‍ಅಧ್ಯಕ್ಷ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕಉಪ್ಪಾರ ಬೀದಿ ಶಾಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್‍ಯೋಜನೆಯಡಿ ಸಹಯೋಗದಲ್ಲಿ ನಡೆದ ಒಂದರಿಂದ 10ನೇ ತರಗತಿವರೆಗಿನ ಶಾಲಾವಿದ್ಯಾರ್ಥಿಗಳಿಗೆ ಸ್ಪೆಟರ್‍ವಿತರಣೆ ಕಾರ್ಯಕ್ರಮದಲ್ಲಿ ಸ್ಪೆಟರ್‍ವಿತರಿಸಿ ಮಾತನಾಡಿದರು.

ಚಾಮರಾಜನಗರಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರಗೆ ಓದುವಅವಕಾಶವನ್ನು ಸರ್ಕಾರ ಒದಗಿಸಿದ್ದು. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸ್ಪೆಟರ್ ವಿತರಣೆಗೆಇಂದು ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ.

1ರಿಂದ 10 ನೇ ತರಗತಿ ಸರ್ಕಾರಿ ಶಾಲಾಮಕ್ಕಳಿಗೆ 30 ಸಾವಿರ ಸ್ಪೆಟರ್ ವಿತರಿಸುವಉದ್ದೇಶ ಹೊಂದಲಾಗಿದೆ.ಎಂಎಸ್‍ಐಎಲ್ ನಿಂದಚಾಮರಾಜನಗರತಾಲ್ಲೂಕಿನ ಸರ್ಕಾರಿ ಶಾಲಾಮಕ್ಕಳಿಗೆ 52 ಸಾವಿರ ಪುಸ್ತಕ ವಿತರಣೆ ಮಾಡಲಾಗಿದೆ. ಉಳಿದ ತಾಲೂಕುಗಳಾದ ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು, ಯಳಂದೂರು ತಾಲ್ಲೂಕುಗಳ ಶಾಲಾವಿದ್ಯಾರ್ಥಿಗಳಿಗೂ ಪುಸ್ತಕ ವಿತರಿಸಲಾಗುವುದುಎಂದರು.
ಕ್ಷೇತ್ರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲಾಕಟ್ಟಡಗಳ ದುರಸ್ತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕರು’
ಶಾಲೆಗಳ ದುರಸ್ತಿಗಿಂತ ಹೊಸದಾಗಿ ಶಾಲೆನಿರ್ಮಿಸಿಕೊಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆಎಂದರು.

ಶಾಲಾಮಕ್ಕಳು ¸ರ್ಕಾರದಿಂದದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು, ವಿದ್ಯಾವಂತರಾಗಬೇಕುಎಂದು ಸಲಹೆ ನೀಡಿದರು.
ನಗರಸಭೆ ಸದಸ್ಯ ಬಸವಣ್ಣ, ಸ್ವಾಮಿಕರಿನಂಜನಪುರ, ನಗರ ಪ್ರಾಧಿಕಾರ ಸದಸ್ಯದೂರಕಿ, ಡಿಡಿಪಿಐರಾಮಚಂದ್ರರಾಜೇಅರಸ್, ಬಿಇಒ ಹನುಮóಶೆಟ್ಟಿ, ಅಕ್ಷರದಾಸೋಹಅಧಿಕಾರಿದೇವಣ್ಣ, ಪ್ರಾಥಮಿಕ ಶಾಲಾಶಿಕ್ಷಕರ ಸಂಘದತಾಲೂಕುಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಕಾರ್ಯದರ್ಶಿ ಮಹದೇವಸ್ವಾಮಿ, ಪೌಢಶಾಲೆ ಶಿಕ್ಷಕರ ಸಂಘದ ಕಾರ್ಯದರ್ಶಿ ನೇಮಿನಾಥ್, ದೈಹಿಕ ಶಿಕ್ಷಕ ಜೋಸೆಫ್, ಚಿಕ್ಕಬಸವಯ್ಯ, ಎಸ್,ಪ್ರಕಾಶ್, ಮುಖ್ಯಶಿಕ್ಷಕರು, ಸಹಶಿಕ್ಷಕರು ಹಾಜರಿದ್ದರು.

Leave a Reply

Your email address will not be published. Required fields are marked *