- ಬಂಜಾರ ಇಂಡಿಯನ್ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ
ಚಾಮರಾಜನಗರ: ವಿದ್ಯಾರ್ಥಿಗಳು ದೊಡ್ಡ ಗುರಿಯನ್ನಿಟ್ಟುಕೊಂಡು ಓದಬೇಕು ಆಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಡಿವೈಎಸ್ ಪಿ ಸ್ನೇಹರಾಜ್ ಹೇಳಿದರು.
ನಗರದ ಬೈಪಾಸ್ ರಸ್ತೆಯ ಸಮೀಪದಲ್ಲಿರುವ ಬಂಜಾರ ಗಂಗೋತ್ರಿ ಕ್ಯಾಂಪಸ್ ನಲ್ಲಿ ನಡೆದ ಬಂಜಾರ ಶಿಕ್ಷಣ ಸಂಸ್ಥೆ ಯ2025-26ನೇ ಶೈಕ್ಷಣಿಕ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ನಮ್ಮಿಂದ ಏನು ಆಗಲ್ಲ ಎಂದು ಎಂದಿಗೂ ಅಂದುಕೊಳ್ಳದೇ ದೊಡ್ಡ ಸಾಧನೆ ಮಾಡುತ್ತೇನೆ ಎಂದು ನಿರಂತರ ಪ್ರಯತ್ನ ಮಾಡಿದರೆ ಯಾವುದು ಅಸಾಧ್ಯವಿಲ್ಲ. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಎಲ್ಲವನ್ನೂ ಸಾಧಿಸಲು ಸಾಧ್ಯ .ಮಕ್ಕಳಿಗೆ ಶಿಕ್ಷಣವನ್ನು ಸರಿಯಾಗಿ ಕೊಟ್ಟರೆ ಉನ್ನತ ಹುದ್ದೆ, ಉನ್ನತ ಶಿಕ್ಷಣ ಪಡೆಯಲು ಸಾಧ್ಯ.ಮೋಹನ್ ಮೆಘಾವತ್ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ ಎಂದರು.
ಮೋಹನ್ ಮೇಘಾವತ್ ಅವರು ಶಿಕ್ಷಣ ಸಂಸ್ಥೆ ತೆರೆದು ಜಿಲ್ಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಜಿಲ್ಲೆಯನ್ನು ಮುಂದೆ ತೆಗೆದುಕೊಂಡು ಹೋಗಬೇಕು ಎನ್ನುವ ನಿಲುವು, ದೂರದೃಷ್ಟಿ ಎಲ್ಲರಿಗೂ ಬರುವುದಿಲ್ಲ. ಎಲ್ಲರಿಗೂ ಇದು ನಮ್ಮ ಜಿಲ್ಲೆ ಇದನ್ನು ಉದ್ದಾರ ಮಾಡಬೇಕು. ಎಂಬ ಪ್ರೀತಿ ಬರಬೇಕು ಅದು ಎಲ್ಲರಿಗೂ ಬರುವುದಿಲ್ಲ. ಮೋಹನ್ ಮೆಘಾವತ್ ಅವರು ಕಾಲವಾದ ನಂತರವೂ ಈ ಸಂಸ್ಥೆಯನ್ನು ಅವರ ಕುಟುಂಬದವರು ಮುಂದುವರಿಸಿಕೊಂಡು ಹೋಗುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ ಆಗಿದೆ ಎಂದರು.
ಬಹುಮಾನ ವಿತರಣೆ:ಭಾರತ ಸಂವಿಧಾನ ಮೂಲಭೂತ ತತ್ವಗಳ ವಿಷಯ ಕುರಿತು2025-26ನೇ ಸಾಲಿನ ಸ್ಪರ್ಧಾತ್ಮಕ ಪರೀಕ್ಷೆ ಯಲ್ಲಿ ಉನ್ನತ ಶ್ರೇಣಿಯನ್ನು ತೇರ್ಗಡೆ ಯಾದ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ 5 ಸಾವಿರ, ಪದಕ, ದ್ವಿತೀಯ ಬಹುಮಾನ 3 ಸಾವಿರ, ಪದಕ, ಸಮಾಧಾನಕರ ಬಹುಮಾನ 10 ವಿದ್ಯಾರ್ಥಿಗಳಿಗೆ ತಲಾ 1 ಸಾವಿರ,ಪದಕ, ಪರೀಕ್ಷೆ ಬರೆದ 400 ಕ್ಕೂ ಹೆಚ್ಚು ಮಕ್ಕಳಿಗೆ 200 ರೂ. ಪದಕ ವಿತರಿಸಲಾಯಿತು ಹಾಗೂ
ಶಾಲಾ ವಾರ್ಷಿಕೋತ್ಸವ ಅಂಗವಾಗಿ ವಿದ್ಯಾರ್ಥಿಗಳು, ಪೋಷಕರಿಗೆ ಆಯೋಜಿಸಿದ್ದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ವರಿಗೆ ಗಣ್ಯರು ಬಹುಮಾನ, ಪ್ರಮಾಣಪತ್ರ ವಿತರಿಸಿದರು.
ಟ್ರಸ್ಟ್ ಅಧ್ಯಕ್ಷ ಶಿವಾಜಿ ಮೆಘಾವತ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಚಾಮುಲ್ ಮಾಜಿ ಅಧ್ಯಕ್ಷ ವೈ.ಸಿ.ನಾಗೇಂದ್ರ, ಅರಕಲವಾಡಿ ನಾಗೇಂದ್ರ,
ಉಪಾಧ್ಯಕ್ಷ ವೀಣಾ ಎಂ.ಎಸ್. ಟ್ರಸ್ಟಿ ಗಳಾದ ಜಗದೀಶ್ ನಾಯಕ್ , ಕಾವೇರಿ ಬಾಯಿ, ಚಿತ್ರ, ಪುರುಷೋತ್ತಮ, ತಾ.ಪಂ.ಮಾಜಿ ಸದಸ್ಯ ಕುಮಾರ್ ನಾಯಕ್,ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ನಿವೃತ್ತ ಪ್ರಾಂಶುಪಾಲ ಕೃಷ್ಣನಾಯಕ ಸ್ವಾಗತ ಭಾಷಣ ಮಾಡಿದರು. ನಂತರ ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಮುದನೀಡಿತು.