ಚಾಮರಾಜನಗರ: ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಓದಿನ ಜೊತೆಗೆ ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಮುಂದಾಗುವಂತೆ ಎಂ.ಎಸ್.ಐ.ಎಲ್. ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಲಹೆ ಮಾಡಿದರು.
ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪ್ರಸಕ್ತ ಸಾಲಿನ ಸಾಂಸ್ಕøತಿಕ, ರಾಷ್ಟ್ರೀಯ ಸೇವಾ ಯೋಜನೆ, ರೆಡ್‍ಕ್ರಾಸ್, ರೇಂಜರ್ಸ್ & ರೋವರ್ಸ್ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಾಲಾ ಹಂತದಿಂದಲೇ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ದಿನನಿತ್ಯದ ಪಾಠ, ಪ್ರವಚನಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಸಾಹಿತ್ಯ, ಸಂಗೀತ, ಕಲೆ, ಸಂಸ್ಕøತಿ, ಕ್ರೀಡೆ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳು ಹೊರಹೊಮ್ಮಲು ಶಿಕ್ಷಕರು ನೆರವಾಗಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನ್ನು ಉನ್ನತೀಕರಿಸಲು ಕೇಂದ್ರ ಸರ್ಕಾರದಿಂದ 5 ಹಾಗೂ ರಾಜ್ಯ ಸರ್ಕಾರದಿಂದ 5 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಕಾಲೇಜನ್ನು ಉನ್ನತೀಕರಿಸಿ ಉತ್ತಮ ಕಟ್ಟಡದ ಜೊತೆಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುವುದು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಹೇಳಿದರು.
ಕೊಳ್ಳೇಗಾಲ ಬೌದ್ದವಿಹಾರದ ಬಿಕ್ಕು ಮನೋರೊಹಿತಾ ಬಂತೇಜಿ ಅವರು ಮಾತನಾಡಿ ಭಾರತ ದೇಶವು ಬುದ್ದನಂತಹ ಅನೇಕ ದಾರ್ಶನಿಕರು ಜನಿಸಿದ ಪುಣ್ಯ ಭೂಮಿಯಾಗಿದೆ. ಭಾರತವು ಸರ್ವಧರ್ಮಗಳ ಜಾತ್ಯಾತೀತ ರಾಷ್ಟ್ರವಾಗಿದ್ದು, ವಿದ್ಯಾರ್ಥಿಗಳು ಭವ್ಯಭಾರತದ ಪ್ರಜೆಗಳಾಗಿದ್ದಾರೆ. ರಾಷ್ಟ್ರದ ಏಳಿಗೆಗೆ ವಿದ್ಯಾರ್ಥಿಗಳ ಜೀವನದಲ್ಲಿ ತಂದೆ ತಾಯಿ, ಗುರುವಿನ ಪಾತ್ರ ಪ್ರಮುಖವಾಗಿದೆ. ಭೂಮಿಯನ್ನು ಹದಮಾಡಿ ವ್ಯವಸಾಯ ಮಾಡಿದರೆ ಹೇಗೆ ಉತ್ತಮವಾದ ಬೆಳೆ ಬೆಳೆಯುವುದೋ, ಅದೇ ರೀತಿ ಗುರುವು ವಿದ್ಯಾರ್ಥಿಗಳಲ್ಲಿ ವಿದ್ಯೆಯ ಬೀಜ ಬಿತ್ತಿ ಜ್ಞಾನದ ವ್ಯವಸಾಯ ಮಾಡಿದರೇ ದೇಶಕ್ಕೆ ಉತ್ತಮ ಪ್ರಜೆಗಳಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.
ಮೈಸೂರಿನ ಮಾನಸ ಗಂಗೋತ್ರಿಯ ಬಿ.ಎನ್. ಬಹುದ್ದೂರ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸೈನ್ಸ್‍ನ ಪೆÇ್ರ. ಆನಂದ್ ಅವರು ಮುಖ್ಯಭಾಷಣ ಮಾಡಿ ಇಂದು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಮೌಲ್ಯಗಳನ್ನು ರೂಪಿಸುವ ಬದಲಾಗಿ ಕೇವಲ ಉದ್ಯೋಗಿಗಳಾನ್ನಾಗಿ ಮಾಡುತ್ತಿವೆ. ಈ ಬಗ್ಗೆ ವಿದ್ಯಾರ್ಥಿಗಳು ವಾಸ್ತವವಾಗಿ ಚಿಂತನೆ ನಡೆಸಬೇಕು. ಜ್ಞಾನ ಎಂಬುದು ಒಂದು ಸೈಕಲ್ ಇದ್ದಂತೆ. ಅದನ್ನು ನೀವು ತುಳಿಯದೇ ಇದ್ದರೆ ನಿಂತಲ್ಲೇ ತುಕ್ಕು ಹಿಡಿಯಲಿದೆ. ವಿದ್ಯಾರ್ಥಿ ಜೀವನ ಇಂದು ಕಲ್ಪನೆಯಾಗಿದ್ದು, ನಾಳೆ ಎಂಬುದು ಸತ್ಯವಾಗಿದೆ. ನಾಳೆ ಎಂಬ ಸತ್ಯವನ್ನು ವಿದ್ಯಾರ್ಥಿಗಳು ಜೀವನದ ಇತಿಹಾಸವನ್ನಾಗಿ ಸೃಷ್ಟಿಸಿಕೊಳ್ಳಬೇಕು ಎಂದರು.
ಜ್ಞಾನ ಹಾಗೂ ಮಾಹಿತಿ ಎಂಬುದು ಶಿಕ್ಷಣದ ಎರಡು ಬಳ್ಳಿಯಾಗಿವೆ. ಆಧುನಿಕ ತಂತ್ರಜ್ಞಾನದಲ್ಲಿ ಮಾಹಿತಿ ಎಲ್ಲಿಯಾದರೂ ಸಿಗಬಹುದು ಆದರೆ ಜ್ಞಾನವನ್ನು ಗುರುಗಳಿಂದಲೇ ಪಡೆಯಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನದಲ್ಲಿ ಗುರುವಿನ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿಗಳು ತಾತ್ಸಾರ ಮನೋಭಾವನೆ ತ್ಯಜಿಸಿ ಕುತೂಹಲಕಾರಿಯಾಗಿರಬೇಕು. ದೃಢಸಂಕಲ್ಪದಿಂದ ದೇಶಕ್ಕೆ ಮಾದರಿ ಪ್ರಜೆಗಳಾಗಬೇಕು ಎಂದು ಪೆÇ್ರ. ಆನಂದ್ ಅವರು ಆಶಿಸಿದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ. ಬಿ.ಎಸ್. ಮಹಾದೇವಸ್ವಾಮಿ, ಮೈಸೂರಿನ ನೃತ್ಯಗಾರ್ತಿ, ಗಾಯಕಿ, ಕಲಾವಿದೆ ಕು. ಹರಿಣಾಕ್ಷಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಸಿ. ಶೈಲೇಶ್ ಕುಮಾರ್, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಚಾಲಕರಾದ ಎಸ್.ಆರ್. ದೀಪ, ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಕ್ರೀಡಾ ಸಮಿತಿ ಸಂಚಾಲಕರಾದ ಡಾ. ಶಾಂತರಾಜು ರೆಡ್‍ಕ್ರಾಸ್ ಸಮಿತಿ ಸಂಚಾಲಕರಾದ ಡಾ. ಆರ್. ಪ್ರಸಾದ್, ರೇಂಜರ್ಸ್ ಅಂಡ್ ರೋವರ್ಸ್ ಸಂಚಾಲಕರಾದ ಎಸ್. ಕೃಪಾ, ಪತ್ರಾಂಕಿತ ವ್ಯವಸ್ಥಾಪಕರಾದ ಜಿ.ಎನ್. ಸಾಕಮ್ಮ. ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕು. ಹೆಚ್.ಎಂ. ಅಂಜಲಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತದ್ದರು.