ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಆಟೋಟ ಸ್ಪರ್ಧೆಗಳಿಗೂ ಒತ್ತು ನೀಡಿ : ಪ್ರೊ. ಎಂ.ಆರ್.ಗಂಗಾಧರ್

ಚಾಮರಾಜನಗರ: ಸ್ಪರ್ಧಿಗಳು ಉತ್ತಮ ಅಭ್ಯಾಸ ಮಾಡಿದರೆ ಗೆಲುವು ನಿಮ್ಮದಾಗಲಿದ್ದು, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ನೀಡುವುದರ ಜೊತೆಗೆ ಆಟೋಟ ಸ್ಪರ್ಧೆಗಳಿಗೂ ಹೆಚ್ಚಿನ ಒತ್ತು ನೀಡಬೇಕು ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಆರ್ ಗಂಗಾಧರ್ ಅವರು ತಿಳಿಸಿದರು.

ನಗರದ ಸÀರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿಂದು ಚಾಮರಾಜನಗರ ವಿಶ್ವವಿದ್ಯಾನಿಲಯ ಸುವರ್ಣ ಗಂಗೋತ್ರಿಯ ದೈಹಿಕ ಶಿಕ್ಷಣ ವಿಭಾಗ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಅಂತರ ಕಾಲೇಜುಗಳ ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟ’ ಕ್ಕೆ ಚಾಲನೆ ನೀಡಿ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಚಾಮರಾಜನಗರ ವಿಶ್ವವಿದ್ಯಾಲಯ ಸ್ಥಾಪನೆ ನಂತರ ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಉಜ್ವಲ ಭವಿಷ್ಯಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ದೈಹಿಕ ಶಿಕ್ಷಣ ವಿಭಾಗದಿಂದ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರನ್ನು ಮುಂದಿನ ಹಂತಕ್ಕೆ ಕಳುಹಿಸಲಾಗುತ್ತಿದೆ. ದೇಶದ ಎಲ್ಲ ವಿಶ್ವವಿದ್ಯಾಲಯಗಳ ಮಾನದಂಡಗಳನ್ನು ಒಳಗೊಂಡಂತೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಆಟೋಟಗಳಲ್ಲಿ ಪಾಲ್ಗೊಳ್ಳಲು ಸ್ಪರ್ಧಾಳುಗಳನ್ನು ನಿಯೋಜಿಸಲಾಗುತ್ತದೆ ಎಂದರು.
ಅಂತರ ಕಾಲೇಜುಗಳ ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟದಲ್ಲಿ ವಿಜೇತರಾದ ತಲಾ ಮೂವರು ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳಲ್ಲಿ ಪುರುಷ ವಿಜೇತರನ್ನು ಹರಿಯಾಣಕ್ಕೆ ಹಾಗೂ ಮಂಗಳೂರಿಗೆ ಮಹಿಳಾ ವಿಜೇತರನ್ನು ಮುಂದಿನ ಹಂತದ ಕ್ರೀಡೆಗಳಿಗಾಗಿ ಕಳುಹಿಸಲಾಗುತ್ತದೆ. ಅÀಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ಕಾಲೇಜು, ವಿಶ್ವವಿದ್ಯಾಲಯಕ್ಕೆ ಕೀರ್ತಿ ತರುವಂತೆ ಎಂ.ಆರ್. ಗಂಗಾಧರ್ ಅವರು ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ. ಬಿ.ಎಸ್. ಮಹದೇವಸ್ವಾಮಿ ಅವರು ಮಾತನಾಡಿ ಕನಕದಾಸರ ಚಿಂತನೆಯಂತೆ ಭಕ್ತಿಯ ಪರಕಾಷ್ಠೆ ಇದ್ದರೆ ಶ್ರಮಕ್ಕೆ ತಕ್ಕ ಪ್ರತಿಫಲ ಕ್ರೀಡೆಗಳಲ್ಲಿ ದೊರೆಯುತ್ತದೆ. ನಿರಂತರ ಶ್ರಮದಿಂದ ಯಾರು ಬೇಕಾದರೂ ಸಾಧನೆ ಮಾಡಬಹುದು. ದೀರ್ಘಕಾಲದ ಶ್ರಮದಿಂದ ಸ್ಪರ್ಧಿಗಳು ಗುರಿ ತಲುಪಬಹುದು. ಶ್ರಮ ಎಂದಿಗೂ ನಮ್ಮನ್ನು ಕೈ ಬಿಡುವುದಿಲ್ಲ. ನಿರಂತರ ಶ್ರಮದಿಂದ ಗೆಲುವು ನಿಮ್ಮದಾಗುತ್ತದೆ ಎಂದರು. 

ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಶಾಂತರಾಜು ಅವರು ಮಾತನಾಡಿ ಕ್ರೀಡಾಪಟುಗಳು ಅಂತರರಾಜ್ಯ ಕ್ರೀಡೆಗಳನ್ನು ಗುರಿಯಾಗಿಸಿಕೊಂಡು ಪ್ರಯತ್ನಿಸಬೇಕು. ಪ್ರಯತ್ನಗಳನ್ನು ಉತ್ತಮವಾಗಿದ್ದರೆ ಮುಂಬರುವ ಕ್ರೀಡೆಗಳಲ್ಲಿ ಗೆಲುವು ಸಾಧಿಸಬಹುದು ಎಂದು ತಿಳಿಸಿದರು.

ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ವಿಜೇತರಾದ ಸ್ಫರ್ದಿಗಳಾದ ನವೀನ್ ಕುಮಾರ್, ಆರ್.ಮಧುಸೂದನ್, ಎಸ್ ಮಹದೇವಸ್ವಾಮಿ, ಆರ್. ಲಕ್ಷ್ಮಣ್, ಎಂ ದೊಡ್ಡರಾಜು, ನವೀನ್ ಕುಮಾರ್, ಎಸ್ ಮಧು, ಸುಧಾಕರ್ ಮತ್ತು ಕಾರ್ತಿಕ್ ಹಾಗೂ ಮಹಿಳೆಯರ ವಿಭಾಗದಲ್ಲಿ ಹೇಮ, ಗೌರಮ್ಮ ಪೂಜಾ, ಎಂ. ಚೈತ್ರ, ಜಿ. ಸೌಂದರ್ಯ, ಪಾರ್ವತಿ, ಐಶ್ವರ್ಯ, ಶಶಿಕಲಾ ಮತ್ತು ಗಂಗಮ್ಮ ಅವರಿಗೆ ಬಹುಮಾನ ವಿತರಣೆ ನೀಡಲಾಯಿತು.

ಸಮಗ್ರ ಪ್ರಶಸ್ತಿಯನ್ನು ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಯಳಂದೂರಿನ ಎಸ್.ವೈ.ಎಂ.ಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದ್ವಿತೀಯ ಕೊಳ್ಳೇಗಾಲ ಎನ್.ಸಿ.ಎಂ. ಕಾಲೇಜು ಮತ್ತು ಗುಂಡ್ಲುಪೇಟೆಯ ಪ್ರಥಮ ದರ್ಜೆ ಕಾಲೇಜಿಗೆ ತೃತೀಯ ಬಹುಮಾನ ವಿತರಿಸಲಾಯಿತು. ಮಹಿಳೆಯರ ವಿಭಾಗದಲ್ಲಿ ಚಾಮರಾಜನಗರ ಜೆ.ಎಸ್.ಎಸ್. ಮಹಿಳಾ ಕಾಲೇಜು ಪ್ರಥಮ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಚಾಮರಾಜನಗರ ದ್ವಿತೀಯ, ಕೊಳ್ಳೇಗಾಲ ಶ್ರೀ ವಾಸವಿ ಪ್ರಥಮ ದರ್ಜೆ ಕಾಲೇಜು ತೃತೀಯ ಬಹುಮಾನ ನೀಡಲಾಯಿತು.

ಹಿರಿಯ ದೈಹಿಕ ಶಿಕ್ಷಕರಾದ ಮಲ್ಲುಸ್ವಾಮಿ, ಕ್ರೀಡಾ ಸಮಿತಿಯ ಸದಸ್ಯರಾದ ಜಿ. ಬಂಗಾರು, ಕೊಳ್ಳೇಗಾಲ ಶ್ರೀ ಮಹದೇಶ್ವರ  ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜಯಶಂಕರ್ ಹಾಗೂ ಶಿಕ್ಷಕ ವೃಂದ ಕ್ರೀಡಾಪಟುಗಳು ಕಾರ್ಯಕ್ರಮದಲ್ಲಿ ಇದ್ದರು.

Leave a Reply

Your email address will not be published. Required fields are marked *