ಚಾಮರಾಜನಗರ: ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರವರ ತತ್ವ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಚಾಮರಾಜನಗರ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಹಮದ್ ಆಸ್ಕರ್ ಮುನ್ನ ಕರೆ ನೀಡಿದರು.
ನಗರದ ಜೋಡಿ ರಸ್ತೆಯಲ್ಲಿರುವ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ಭಾರತ ಸರ್ಕಾರದ ಮೈ ಭಾರತ್ ಕೇಂದ್ರ. ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ. ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ ಬಿಎಡ್ ಕಾಲೇಜ್ ಸಂಯುಕ್ತ ಆಶ್ರಯದಲ್ಲಿ ನಡೆದ 1 63ನೇ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ. ಹೇಳಿ ಎದ್ದೇಳಿ ಗುರಿ ಮುಟ್ಟು ತನಕ ನಿಲ್ಲದಿರಿ ಎಂಬ ವಾಕ್ಯ ಸಂದೇಶದಿಂದ ಯುವಜನರಲ್ಲಿ ಜಾಗೃತಿ ಮೂಡಿಸಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರವರು ಅವರ ತತ್ವಸಿದ್ದಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದವರು. ರಾಜ್ಯ ಸರ್ಕಾರ ಯೋಜನೆ ಮಾಡಿರುವ ಜನಪರ ಯೋಜನೆಗಳನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಂಡು ಮುಖ್ಯ ವಾಹಿನಿಗೆ ಬರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮುಖ್ಯ ಭಾಷಣ ಮಾಡಿದ ಚಾಮರಾಜನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿಕೆ ರವಿಕುಮಾರ್ ಮಾತನಾಡಿ ಕಠಿಣಶ್ರಮ ನಿರಂತರ ಅಧ್ಯಯನದಿಂದ. ವಿದ್ಯಾರ್ಥಿಗಳು ಮುಖ್ಯ ವಾಹಿನಿಗೆ ಬರಲು ಸಾಧ್ಯ. ಎಂದು ಹೇಳಿದವರು ಸ್ವಾಮಿ ವಿವೇಕಾನಂದರು 1863 ಜನವರಿ 12ರಂದು ಜನಿಸಿ. ಬಾಲ್ಯದಿಂದಲೇ ಸಮಾಜ ಸೇವೆ. ವಿಶ್ವದ್ಯದಂತಹ ಪ್ರಯಾಣ ಮಾಡಿ. ಲಕ್ಷಾಂತರ ಮಂದಿಗೆ ದಾರಿದೀಪವಾಗಿದ್ದರು. ಭಾರತದ ಪ್ರಭಾವಿಶಾಲಿ ತತ್ವ ಜ್ಞಾನಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದವರು.. ಸರ್ವ ಧರ್ಮಗಳ ಸಮ್ಮೇಳನದಲ್ಲಿ. ಮಾತನಾಡಿದ ಅವರು ಜಗತ್ತಿನ ನಾಗರಿಕರು ತಮ್ಮ ಭಾಷಣ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಾಗೂ ಹಲವಾರು ಕೃತಿಗಳನ್ನು ಬರೆದು ಬಿಡುಗಡೆ ಮಾಡಿದರು ಪ್ರಮುಖವಾಗಿ ರಾಜಯೋಗ. ಕರ್ಮಯೋಗ. ಭಕ್ತಿ ಯೋಗ. ಜ್ಞಾನ ಯೋಗ. ಕೃತಿಗಳನ್ನು ರಚನೆ ಮಾಡಿದರು. ಬಿಡುವಿನ ಸಂದರ್ಭ ದಲ್ಲಿ ವಿದ್ಯಾರ್ಥಿಗಳು ಹಾಗೂ ನಾಗರಿಕರು ದೇಶದ ಮಹಾನ್ ನಾಯಕರ ಗ್ರಂಥಗಳನ್ನು ಅಧ್ಯಯನ ಮಾಡಿ ತಮ್ಮ ಜ್ಞಾನ ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ ಬಂಗಾರು ಸ್ವಾಮಿ ವಿವೇಕಾನಂದರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೌರವ ನಮನ ಸಲ್ಲಿಸಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಯುವಜನರಿಗೆ ಹೆಚ್ಚಿನ ಸೌಲಭ್ಯ ಕಲಿಸಿದ್ದಾರೆ ಎಂದು ತಿಳಿಸಿದರು.
ಭಾರತ ಸರ್ಕಾರದ. ಮೈ ಭಾರತ್ ಕೇಂದ್ರ. ಕು.ಸಹನ ಮಾತನಾಡಿ.ರಾಷ್ಟ್ರೀಯ ಯುವ ದಿನವನ್ನು ಪ್ರತಿ ವರ್ಷ ಜನವರಿ 12ರಂದು ಆಚರಿಸಲಾಗುತ್ತದೆ. ಈ ದಿನವನ್ನು ಸ್ವಾಮಿ ವಿವೇಕಾನಂದರ ಜನ್ಮದಿನದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಯುವಜನತೆಯಲ್ಲಿ ಆತ್ಮವಿಶ್ವಾಸ, ಶಿಸ್ತು, ದೇಶಭಕ್ತಿ ಮತ್ತು ಸೇವಾಭಾವನೆ ಬೆಳೆಸುವುದೇ ಇದರ ಮುಖ್ಯ ಉದ್ದೇಶ.
ಸ್ವಾಮಿ ವಿವೇಕಾನಂದರು ಯುವಕರಿಗೆ “ಎದ್ದೇಳು, ಜಾಗರೂಕರಾಗು, ಗುರಿ ತಲುಪುವವರೆಗೆ ನಿಲ್ಲಬೇಡ” ಎಂಬ ಪ್ರೇರಣಾದಾಯಕ ಸಂದೇಶವನ್ನು ನೀಡಿದರು. ಯುವಕರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದು ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರವನ್ನು ಅರಿವಿಗೆ ತರುವುದು ಉತ್ತಮ ಚಿಂತನೆ ಮತ್ತು ನೈತಿಕ ಮೌಲ್ಯಗಳನ್ನು ಉತ್ತೇಜಿಸುವುದು ಮಾನವನು ತನ್ನೊಳಗಿನ ಶಕ್ತಿಯನ್ನು ಅರಿತು, ಧೈರ್ಯದಿಂದ, ಸತ್ಯ ಮತ್ತು ಸೇವೆಯ ಮಾರ್ಗದಲ್ಲಿ ನಡೆಯಬೇಕು ಎಂಬುದೇ ಸ್ವಾಮಿ ವಿವೇಕಾನಂದರ ಮುಖ್ಯ ಸಂದೇಶ.
ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ ಬಿಎಡ್ ಕಾಲೇಜಿನ ಪ್ರಾಂಶುಪಾಲ ಪೂ, ಕೆ ಸಿ ಬಸವಣ್ಣ ಮಾತನಾಡಿ. ಜೆಎಸ್ಎಸ್ ಶಿಕ್ಷಣ ಸಂಸ್ಥೆ. ವಿದ್ಯಾಭ್ಯಾಸ ಮಾಡಿದ ಲಕ್ಷಾಂತರ ಮಂದಿ ರಾಜ್ಯ ಹಾಗೂ ರಾಜ್ಯಗಳಲ್ಲಿ ಉನ್ನತ ಮಠದ ಅಧಿಕಾರಿಗಳಾಗಿ ಸೇವೆ ಮಾಡುತ್ತಿದ್ದಾರೆ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ 30 ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದರು.
ವಿವಿಧ ರಸಪ್ರಶ್ನೆಯಲ್ಲಿ ವಿಜೇತರರಾದ ವಿದ್ಯಾರ್ಥಿಗಳಿಗೆ ಜೆಎಸ್ಎಸ್ ಬಿಎಡ್ ಕಾಲೇಜಿನ ಉಪನ್ಯಾಸಕ. ಯೋಗೇಶ್. ಶಿವಶಂಕರ ರಾಜ ಅರಸ್. ಸಿದ್ದರಾಜು. ಶ್ರೀಧರ್. ಶಿವಕುಮಾರ್ ಬಹುಮಾನ ವಿತರಿಸಿದರು. ಕಾಲೇಜಿನ ವಿದ್ಯಾರ್ಥಿ ಸಂಘದ ಶಿವಪ್ರಸಾದ್ ,ಅಂಜಲಿ, ಬಿಂದು. ಶಿಲ್ಪ ಸೇರಿದಂತೆ. ಕಾಲೇಜಿನ ಎಲ್ಲ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.