* ದೇವನೂರು ವಿದ್ಯಾರ್ಥಿಗಳು ಮುತ್ತುಗಳಾಗಿ ಬೆಳೆಯಬೇಕೆಂಬುವುದು ನಮ್ಮ ಆಶಯ.
* ದೇವನೂರಿನಲ್ಲಿ ಪ್ರೇರಣದಾಯಕ ಉಪನ್ಯಾಸ ಮಾಲಿಕೆ ಉದ್ಘಾಟನೆ
ಚಾಮರಾಜನಗರ : ವಿದ್ಯಾರ್ಥಿ ಜೀವನ ತಪಸ್ಸು ಇದ್ದಂತೆ ಆಗಾಗಿ ವಿದ್ಯಾರ್ಥಿಗಳು ನಿರಂತರವಾಗಿ ಓದಬೇಕು ಎಂದು ನಾಡಿನ ಹಿರಿಯ ಸಾಹಿತಿ ದೇವನೂರು ಮಹದೇವು ಅವರ ಸಹೋದರ ಸಂಸ್ಕ್ರತಿ ಚಿಂತಕ ಶಂಕರ ದೇವನೂರು ಹೇಳಿದರು.
ನಂಜನಗೂಡು ತಾಲೂಕಿನ ದೇವನೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಪ್ರೇರಣದಾಯಕ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣ ಹಂತದಲ್ಲಿ ಶ್ರಮಪಟ್ಟುಓದಿಬಿಟ್ಟರೆ ಜೀವನಪೂರ್ತಿ ನೆಮ್ಮದಿಯಾಗಿಬಹುದು. ಒಂದೊಂದು ವಚನ ಜೀವನವನ್ನೇ ಬದಲಾಯಿಸಿ ಬಿಡುತ್ತದೆ. ಅದಕ್ಕಾಗಿ ವಚನಗಳನ್ನು ಓದಬೇಕು. ವಿದ್ಯಾ ಅಭ್ಯಾಸಿಗನ ಕೈ ವಶ. ಅಭಿವೃದ್ಧಿ ಸರ್ವರ ವಶ. ವಿದ್ಯಾಯನ್ನು ವಶಪಡಿಸಿಕೊಳ್ಳಬೇಕಾದರೆ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು. ನಿರಂತರ ಓದಬೇಕು ಎಂದರು.
ಜನರು ಇದ್ದ ಮಾತ್ರಕ್ಕೆ ದೇವನೂರು ಅಲ್ಲ ದೇವನು ಇದ್ದ ಮಾತ್ರಕ್ಕೆ ದೇವನೂರು ಇದು ದಾಸೋಹ ಸಂಸ್ಕೃತಿಗೆ ಹೆಸರುವಾಸಿಯಾದದ್ದು, 200 ವರ್ಷದ ಹಿಂದೆ ಆರಂಭವಾದ ಬೆಂಕಿ ಇನ್ನೂ ಹಾರಿಲ್ಲ. ಇಂತಹ ಪವಿತ್ರ ನೆಲದಲ್ಲಿ ಜ್ಞಾನಕ್ಕೆ ದಾಸರಾಗಬೇಕು ಅ ಮೂಲಕ ದೇವನೂರು ಮಕ್ಕಳು ಮುತ್ತುಗಳಾಗಬೇಕೆಂಬುವುದು ನಮ್ಮ ಆಶಯವಾಗಿದ್ದು ನಾವು ಕಲಿತಿರುವ ವಿದ್ಯೆಯನ್ನು ಇತರಿಗೆ ಧಾರೆ ಬರೆಯಬೇಕು ಎಂದು.ಪ್ರೇರಣದಾಯಕ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಪಿ.ನಾಗಮ್ಮ ಮಾತನಾಡಿ, ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗ ಪಡಿಸಿಕೊಂಡರೆ ಜ್ಞಾನಿಗಳು ಇಲ್ಲದಿದ್ದರೆ ಅಜ್ಞಾನಿಯಾಗಬೇಕಾಗುತ್ತದೆ.
ನಾವು ಓದುವ ಸಂದರ್ಭದಲ್ಲಿ ಪುಸ್ತಕವೇ ಮೊಬೈಲ್ ಆಗಿತು ಎಂದರು.
ಇನ್ನು ಪಿಯು ವಿದ್ಯಾರ್ಥಿಗಳಿಗೆ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಂದ ಅಗತ್ಯಕ್ಕೆ ತಕ್ಕಂತೆ ಕೋಚಿಂಗ್ ಕೂಡ ನಡೆಸಲು ಮುಂದಾಗುವ ಮೂಲಕ ಹುಟ್ಟಿದ ಗ್ರಾಮಕ್ಕೆ ಕೈಯಲಾಗುವಷ್ಟು ವಿದ್ಯಾ ದಾನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮವಾದ ಗುರಿ ಮಟ್ಟಲು ಸಹಾಯಕರಾಗಿ ನಿಂತ್ತಿದ್ದಾರೆ ಶಂಕರ ದೇವನೂರು ಅವರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶಿವಕುಮಾರ್ ಕಾಸನೂರು, ಕಬಿನಿ ಡ್ಯಾಂ ಸುಭಾಷ್ ಕಬಿನಿ ಪವರ್ ಕಾರ್ಪೋರೇಷನ್ ವ್ಯವಸ್ಥಾಪಕ ವಿ.ಸೆಂದಿಲ್‌ಕುಮಾರ್, ಡಾ.ಅರ್ಚನಾ, ಗ್ರಾ.ಪಂ.ಅಧ್ಯಕ್ಷ ಕೆ.ಎಸ್.ಅವಿನಾಶ್, ಕಾಲೇಜು ಪ್ರಾಂಶುಪಾಲ ಚನ್ನಬಸಪ್ಪ, ಡಾ.ಉಮೇಶ್‌ಬೇವಿನಹಳ್ಳಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಪಿ.ಮಹದೇವಸ್ವಾಮಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್. ಗುರುಸ್ವಾಮಿ ಮುಖ್ಯ ಶಿಕ್ಷಕಿ ಪೂರ್ಣಿಮ ನಾಯಕ ಇತರರು ಹಾಜರಿದ್ದರು.