ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು: ಕುಲಪತಿ ಪ್ರೊ ಎಂ ಆರ್ ಗಂಗಾಧರ್

ಚಾಮರಾಜನಗರ: ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ ಎಂ ಆರ್ ಗಂಗಾಧರ್ ತಿಳಿಸಿದರು.
ನಗರದ ಜೋಡಿ ರಸ್ತೆಯಲ್ಲಿರುವ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಮಧ್ಯಾಹ್ನ ಏರ್ಪಡಿಸಿದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಭಾರತ ದೇಶ ಅಭಿವೃದ್ಧಿಯಾಗಬೇಕಾದರೆ ವಿಜ್ಞಾನ ಅಭಿವೃದ್ಧಿ ಆಗಬೇಕು ಈ ನಿಟ್ಟಿನಲ್ಲಿ ಹೆಚ್ಚಾಗಿ ಸಂಶೋಧನೆಗಳ ಮುಖಾಂತರ ಯುವ ವಿಜ್ಞಾನಿಗಳು ಹೆಚ್ಚಾಗಿ ಆಸಕ್ತಿ ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು
ವಿಶ್ವದ ಯಾವುದೇ ಭಾಗದಲ್ಲಿ ಘಟನೆ ನಡೆದ ಕೇವಲ ನಿಮಿಷಗಳಲ್ಲಿ ಮಾಹಿತಿ ನಮಗೆ ಸಿಗಲಿದೆ ನಮ್ಮ ಭಾರತದಲ್ಲಿ ದೇಶ ಬಲಿಷ್ಠವಾಗಿದೆ. ಆದ್ದರಿಂದ ಎಲ್ಲರೂ ಕೈಜೋಡಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಚಾಮರಾಜನಗರ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲ ಸಚಿವ ಕೆಎಂ ಮಹಾದೇವನ್ ವಿಜ್ಞಾನ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದವರು ನೆನಪು ಜ್ಞಾನಶಕ್ತಿ ಅತಿ ಮುಖ್ಯ ವಿದ್ಯಾರ್ಥಿಗಳ ಪ್ರತಿಭೆಗಳು ಹೊರ ಚೆಲ್ಲಲು ಇಂತಹ ಸೂಕ್ತ ವಿಜ್ಞಾನ ತಂತ್ರಜ್ಞಾನ ಕಾರ್ಯಕ್ರಮ ಭಾಗವಹಿಸುವ ಅಭಿರುಚಿ ಬೆಳೆಸಿಕೊಳ್ಳಬೇಕು.
ಗುರು ಹಿರಿಯರು ಹಾಗೂ ಪೋಷಕರ ಮಾರ್ಗದರ್ಶನದಲ್ಲಿ ಹೆಚ್ಚಾಗಿ ಶಿಕ್ಷಣ ಕಲಿತರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್, ಶಿಕ್ಷಣ ಮಹಾವಿದ್ಯಾಲಯ ಬಿಎಡ್ ಕಾಲೇಜಿನ ಪ್ರಾಂಶುಪಾಲ ಡಾ ಕೆ ಸಿ ಬಸವಣ್ಣ ಮಾತನಾಡಿ. ವಿಜ್ಞಾನ ಕ್ಷೇತ್ರದಲ್ಲಿ ಜೆಎಸ್ಎಸ್ ಶಿಕ್ಷಣ ಸಂಸ್ಥೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಇಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಜಿಲ್ಲೆ ರಾಜ್ಯ ಹೊರ ರಾಜ್ಯ ದೇಶ ವಿದೇಶಗಳಲ್ಲಿ ವಿಜ್ಞಾನಿಗಳು ಆಗೋ ಜೊತೆಗೆ. ಉನ್ನತ ಮಠದ ಅಧಿಕಾರಿಗಳಾಗಿ ಸೇವೆ ಮಾಡುತ್ತಿದ್ದಾರೆ ತಿಳಿಸಿದರು.
ಗ್ರಾನೈಟಿ ಸಂಸ್ಥೆ ಪ್ರೌಡೇಶನ್ ಕಾರ್ಯದರ್ಶಿ ಎನ್ಎಸ್ ಅಭಿಷೇಕ್. ಕಾಲೇಜಿನ ಉಪನ್ಯಾಸಕರಾದ. ಎಸ್ ಎನ್ ರಾಜು, ಯೋಗೇಶ್, ಸುರೇಶ್, ಸಿದ್ದರಾಜು, ಶಿವಕುಮಾರ್. ಶಿವಶಂಕರ್ ರಾಜ್. ಶ್ರೀಧರ್. ಸೇರಿದಂತೆ ವಿಜ್ಞಾನ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ವಿದ್ಯಾರ್ಥಿಗಳು ಹಾಜರಿದ್ದರು

Leave a Reply

Your email address will not be published. Required fields are marked *