ಶಿಕ್ಷಕರ ಹಿತಕ್ಕಾಗಿ ಸಮರ್ಥ ಶಿಕ್ಷಕರ ತಂಡ ಗೆಲ್ಲಿಸಲು ಮನವಿ ಚಾಮರಾಜನಗರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಸ್ಥಾನಕ್ಕೆ ಏ.19 ರಂದು ನಡೆಯುವ ಚುನಾವಣೆಗೆ ಸಮರ್ಥ ಶಿಕ್ಷಕರ ತಂಡದ ವತಿಯಿಂದ ಚುನಾವಣಾಧಿಕಾರಿಯಾದ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ ಅವರಿಗೆ ನಾಮಪತ್ರ ಸಲ್ಲಿಸಲಾಯಿತು. ನಗರದ ಬಿಇಒ ಕಚೇರಿಯ ಸಮೀಪದಲ್ಲಿರುವ ಸರ್ಕಾರಿ ಉರ್ದು ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಚುನಾವಣೆ ಕೇಂದ್ರದಲ್ಲಿ ಸಮರ್ಥ ಶಿಕ್ಷಕರ ತಂಡದ ಶಿಕ್ಷಕರಾದ ಎನ್.ಭರತಭೂಷಣ, ಮಹಾದೇವಸ್ವಾಮಿ, ಮಾದಪ್ಪ ಕೆ.ಎಸ್, ರಾಮಸ್ವಾಮಿ ಸಿ.ಕೆ, ಕೃಷ್ಣಮೂರ್ತಿ ಬಿ, ಮುರುಗೇಶ್ ಕುಮಾರ್ ಸಿ.ಎಂ, ಹೆಚ್.ಎಂ.ಧನಂಜಯ್ಯ, ಮಹಮದ್ ಸಮಿ ಉಲ್ಲಾ, ಪುಟ್ಟಸ್ವಾಮಿ ಪಿ, ರಾಜು ಎಸ್.ಬಿ, ಸುಧಾ ಎನ್, ಸುಶೀಲ ಎಂ, ಭವಾನಿದೇವಿ ಸಿ.ಎನ್, ಲತಾ ಬಿ.ಎಸ್, ಶ್ವೇತ ಬಿ.ಎನ್ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿ ಹೊರಬಂದ ಸಮರ್ಥ ಶಿಕ್ಷಕರ ತಂಡದ ಮಹಾದೇವಸ್ವಾಮಿ, ಮಾದಪ್ಪ ಕೆ.ಎಸ್, ರಾಮಸ್ವಾಮಿ ಸಿ.ಕೆ ಮಾತನಾಡಿ, ಶಿಕ್ಷಕರ ಸಮಸ್ಯೆ ಗಳಿಗೆ ಸದಾ ಸ್ಪಂದಿಸುವ ನಮ್ಮ ತಂಡ ಶಿಕ್ಷಕರಿಗೆ ಏ.19 ರಂದು ನಡೆಯುವ ಚುನಾವಣೆಯಲ್ಲಿ ತಮ್ಮ ಅಮೂಲ್ಯ ವಾದ ಮತವನ್ನು ನೀಡಿ ಗೆಲ್ಲಿಸಿ ತಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.