ಚಾಮರಾಜನಗರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಸ್ಥಾನಕ್ಕೆ ಏ.19 ರಂದು ನಡೆಯುವ ಚುನಾವಣೆಗೆ ಸಮಾನ ಮನಸ್ಕ ಶಿಕ್ಷಕರ ಒಕ್ಕೂಟದ ವತಿಯಿಂದ ಚುನಾವಣಾಧಿಕಾರಿಯಾದ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ ಅವರಿಗೆ ನಾಮಪತ್ರ ಸಲ್ಲಿಸಲಾಯಿತು.
ನಗರದ ಬಿಇಒ ಕಚೇರಿಯ ಸಮೀಪದಲ್ಲಿರುವ ಸರ್ಕಾರಿ ಉರ್ದು ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಚುನಾವಣೆ ಕೇಂದ್ರದಲ್ಲಿ ಸಮಾನ ಮನಸ್ಕ ಶಿಕ್ಷಕರ ಒಕ್ಕೂಟದ ಶಿಕ್ಷಕರಾದ ಆನಂದ್ ಕುಮಾರ್ ಎಸ್, ಚಿಕ್ಕಬಸವಯ್ಯ,ಕೆಂಪರಾಜು ಜಿ, ಮಲ್ಲಿಕಾರ್ಜುನ ಸಿ, ಮಹಾದೇವಸ್ವಾಮಿ, ಮಹಾದೇವಸ್ವಾಮಿ, ಮಹಾದೇವಸ್ವಾಮಿ, ಮಂಜುನಾಥಸ್ವಾಮಿ ಎಂ.ಬಿ, ನಟರಾಜು ಎಸ್, ರಘುಕುಮಾರ ಪಿ, ಗೀತಾ ಎನ್, ನೇತ್ರಾವತಿ ಎಸ್, ಶಶಿಕಲಾ ಎಸ್, ಶೀಲಾದೇವಿ ವಿ.ಎನ್, ಸುಶೀಲಾ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ
ಶಿಕ್ಷಕಿ ನೇತ್ರಾವತಿ ಎಸ್ ಮಾತನಾಡಿ,
ನಮ್ಮ ತಂಡ ಶಿಕ್ಷಕರಿಗೆ ಏ.19 ರಂದು ನಡೆಯುವ ಚುನಾವಣೆಯಲ್ಲಿ ತಮ್ಮ ಅಮೂಲ್ಯ ವಾದ ಮತಗಳನ್ನು ಹಾಕುವ ಮೂಲಕ ನಮ್ಮ ತಂಡವನ್ನು
ಗೆಲ್ಲಿಸಿ ತಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಶಿಕ್ಷಕ ಸಿ.ಎಂ.ಶಿವಕುಮಾರ್ ಮಾತನಾಡಿ, ಕಳೆದ 10 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸಂಘ ನಿಷ್ಕ್ರಿಯ ವಾಗಿದ್ದು ಶಿಕ್ಷಕರಿಗೆ ಯಾವುದೇ ಅನುಕೂಲ ಆಗುತ್ತಿಲ್ಲ. ಆಗಾಗಿ ಏ.19 ರಂದು ನಡೆಯುವ ಚುನಾವಣೆಯಲ್ಲಿ ಸಮಾನ ಮನಸ್ಕ ಶಿಕ್ಷಕರ ಒಕ್ಕೂಟದಿಂದ ಸ್ಪರ್ಧಿಸಿರುವ ಎಲ್ಲರಿಗೂ ಶಿಕ್ಷಕರು ತಮ್ಮ ಮತಗಳನ್ನು ನೀಡಿ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.