ರೋಟರಿ ಸಿಲ್ಕ್ ಸಿಟಿಯಿಂದ ಶ್ರಮದಾನದ ಮೂಲಕ ದೇವಸ್ಥಾನ ಸ್ವಚ್ಚತೆ

ಉತ್ತಮ ಆರೋಗ್ಯಕ್ಕಾಗಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಎಚ್.ಬಿ. ಶಮಿತ್‍ಕುಮಾರ್


ಚಾಮರಾಜನಗರ: ನಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಧಾರ್ಮಿಕ ಕ್ಷೇತ್ರಗಳು ಸ್ವಚ್ವವಾಗಿದ್ದಷ್ಟು ನಮ್ಮ ಆರೋಗ್ಯವು ಸಹ ಉತ್ತಮವಾಗಿರುತ್ತದೆ. ಈ ನಿಟ್ಟಿನಲ್ಲಿ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಪ್ರಾಂಗಣವನ್ನು ಸ್ವಚ್ಚವಾಗಿಡಲು ಎಲ್ಲರು ಶ್ರಮಿಸೋಣ ಂದು ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಎಚ್.ಬಿ. ಶಮಿತ್ ಕುಮಾರ್ ತಿಳಿಸಿದರು.
ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ರೋಟರಿ ಸಿಲ್ಕ್ ಸಿಟಿ, ಸಂಜೀವಿನಿ ಟ್ರಸ್ಟ್ ಹಾಗೂ ಶ್ರೀ ಪಂಜತಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಶ್ರಮದಾನ ಮೂಲಕ ಸ್ವಚ್ಚಗೊಳಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆಷಾಢ ಮಾಸದಲ್ಲಿ ರಾಜ್ಯದಲ್ಲಿಯೇ ವಿಶಿಷ್ಟವಾಗಿ ನಡೆಯುವ ಶ್ರೀ ಚಾಮರಾಜೇಶ್ವರ ರಥೋತ್ಸವ ಮತ್ತು ಆಷಾಢ ಶುಕ್ರವಾರದ ವಿಶೇಷ ಪೂಜಾ ಕಾರ್ಯಕ್ರಮವ ನಡೆದಿದ್ದರು, ಲಕ್ಷಾಂತರ ಭಕ್ತರು ಹಾಗೂ ಸಾರ್ವಜನಿಕರು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ಹೋಗಿದ್ದಾರೆ. ಹಾಗೆಯೇ ದೇವಸ್ಥಾನದ ಪ್ರಾಂಗಣದಲ್ಲಿ ಪೂಜಾ ಸಾಮಾಗ್ರಿಗಳ ತ್ಯಾಜ್ಯ ಹಾಗೂ ಇತರೇ ತ್ಯಾಜ್ಯಗಳು ಉತ್ಪತ್ತಿಯಾಗಿವೆ. ಇದನ್ನು ತೆಗೆದು ದೇವಸ್ಥಾನದ ಪರಿಸರವನ್ನು ಸುಂದರವಾಗಿಡಲು ಎಲ್ಲರು ಕೈಜೋಡಿದ್ದಾರೆ ಎಂದರು.
ರೋಟರಿ ಸಹಾಯಕಗೌರ್ನರ್ ದೊಡ್ಡರಾಯಪೇಟೆ ಗಿರೀಶ್ ಮಾತನಾಡಿ, ರೋಟರಿ ಹಾಗೂ ಇತರೇ ಸಂಘ ಸಂಸ್ಥೆಯ ಸಹಯೋಗದಲ್ಲಿ ಸ್ವಚ್ಚತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ಸಹ ಭಾಗವಹಿಸಿ ಶ್ರಮದಿಂದ ದೇವಸ್ಥಾನದ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.

ದೇವಸ್ಥಾನದ ಅವರಣದಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ಸಂಗ್ರಹಿಸಿ ಬೇರೆಡೆ ಸ್ಥಳಾಂತರ ಮಾಡುವ ಜೊತೆಗೆ ಸುಂದರ ಪರಿಸರ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದೆ. ಸಾರ್ವಜನಿಕರು ಸಹ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಭೇಕು. ಎಲ್ಲೆಂದರದಲ್ಲಿ ಕಸ ಹಾಗೂ ತ್ಯಾಜ್ಯಗಳನ್ನು ಎಸೆಯಬಾರದು. ವಿಶೇಷವಾಗಿ ಧಾರ್ಮಿಕ ಕ್ಷೇತ್ರಗಳ ಸ್ವಚ್ಚತೆ ಮತ್ತು ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಬೇಕು, ರೋಟರಿ ಸೇವಾ ಕಾರ್ಯಕ್ರಮಗಳ ಜೊತೆಗೆ ಪರಿಸರ ಸಂರಕ್ಷಣೆ ಒಂದು ಭಾಗವಾಗಿದೆ ಎಂದು ತಿಳಿಸಿದರು.

ಶ್ರಮದಾನದಲ್ಲಿ ರೋಟರಿ ಸಿಲ್ಕ್ ಸಿಟಿ ಕಾರ್ಯದರ್ಶಿ ಸಂತೋಷ್‍ಕುಮಾರ್, ಸಂಜೀವಿನಿ ಟ್ರಸ್ಟ್‍ನ ಅಧ್ಯಕ್ಷ ಸತೀಶ್‍ಕುಮರ್, ಪಂತಜಲಿ ಯೋಗ ಶಿಕ್ಷಣ ಸಮಿತಿಯ ಸಂಚಾಲಕರಾದ ಯೋಗಪ್ರಕಾಶ್, ಸಂತೇಮರಹಳ್ಲಿ ಪ್ರಕಾಶ್, ಸಮಾಜ ಸೇವಕ ಕಾವುದವಾಡಿ ಗುರು ಮೊದಲಾಧವರು ಇದ್ದರು.

Leave a Reply

Your email address will not be published. Required fields are marked *