ರಾಮಸಮುದ್ರದಲ್ಲಿ ನೂತನ ಜಯಚಾಮರಾಜ ಇವಿ ಮೋಟಾರ್ ಶೋರೂಂ ಉದ್ಘಾಟನೆ
ಚಾಮರಾಜನಗರ : ವ್ಯಾಪಾರ, ವಹಿವಾಟು ಚೆನ್ನಾಗಿದ್ದರೆ ಮಾತ್ರ ಯಾವುದೇ ನಗರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಎಂಎಸ್‌ಐಎಲ್ ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ರಾಮಸಮುದ್ರ ಬಸ್ ನಿಲ್ದಾಣದಲ್ಲಿ ನೂತನವಾಗಿ ಆರಂಭವಾದ ಜಯಚಾಮರಾಜ ಇವಿ ಮೋಟಾರ್ ಶೋರೂಂನ್ನು ಉದ್ಘಾಟಿಸಿ ಮಾತನಾಡಿದರು.
ಚಾಮರಾಜನಗರ ಬೆಳೆಯುತ್ತಿರುವ ನಗರವಾಗಿದ್ದು, ಇಂತಹ ಅನೇಕ ಮಾರಾಟ ಮಳಿಗೆಗಳು ಅಗತ್ಯವಾಗಿದ್ದು, ವ್ಯಾಪಾರ, ವಹಿವಾಟು ಚೆನ್ನಾಗಿ ನಡೆದರೆ ಮಾತ್ರ ನಗರ ಬೆಳೆಯಲು, ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಂಪನಿಗಳು ಕಾರ್ಯನಿರ್ವಹಿಸುತಿದ್ದು ಅನೇಕರಿಗೆ ಉದ್ಯೋಗ ಕಲ್ಪಿಸಲಾಗಿದೆ. ವ್ಯಾಪಾರ, ವಹಿವಾಟು ನಗರಪ್ರದೇಶ ಅಭಿವೃದ್ಧಿ ಪೂರಕವಾಗಿದ್ದು, ಈ ನಿಟ್ಟಿನಲ್ಲಿ ಎಲೆಕ್ನಿಕಲ್ ವಾಹನಗಳಿಂದ ಪರಿಸರ ಮಾಲಿನ್ಯ ತಡೆಯಬಹುದು. ವಿದೇಶಕ್ಕೆ ಹೋಗುವ ಕೋಟ್ಯಾಂತರ ರೂಪಾಯಿಗಳು ಉಳಿಸುವ ಮೂಲಕ ದೇಶದ ಅಭಿವೃದ್ಧಿಗೆ ಬಳಬಹುದು ಎಂದು ತಿಳಿಸಿ ಶುಭ ಕೋರಿದರು.
ಶ್ರೀ ಸಿದ್ಧಮಲ್ಲೇಶ್ವರ ವಿರಕ್ತಮಠದ ಚನ್ನಬಸವಸ್ವಾಮೀಜಿ ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು,
ನಗರಸಭಾ ಮಾಜಿ ಅಧ್ಯಕ್ಷೆ ಚಿನ್ನಮ್ಮ,
ಉದ್ಯಮಿ ಶ್ರೀನಿಧಿಕುದರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಇವಿ ಮೋಟಾರ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಜಿತ್‌ಕುಮಾರ್, ನ್ಯಾಷಿನಲ್ ಪ್ರಮೋಟರ್ ಸಿದ್ದೇಗೌಡ, ಸೌತ್ ಇಂಡಿಯನ್ ಪ್ರಮೋಟರ್ ವಸಂತ್, ಶೋರೂಂ ಮಾಲೀಕ ಸುರೇಶ್‌ಗೌಡ, ಜೆಡಿಎಸ್ ಮುಖಂಡ ಆಲೂರುಮಲ್ಲು, ಎಸ್‌ಪಿ ಬಾಲಸುಬ್ರಹ್ಮಣ್ಯಂ ಸಾ ತಿಕ ಕಲಾ ವೇದಿಕೆ ಅಧ್ಯಕ್ಷ ಮಂಗಲ ಹೊಸೂರು ಶಿವಣ್ಣ, ಕರವೇ ತಾಲೂಕು ಅಧ್ಯಕ್ಷ ಸತೀಶ್ ಉಮ್ಮತ್ತೂರು ಬಸವರಾಜು, ಇತರರು ಹಾಜರಿದ್ದರು.