ಸರ್ಕಾರ ವಿಶ್ವಕರ್ಮ ಅಭಿವೃದ್ಧಿ ನಿಮಗಕ್ಕೆ 50 ಕೋಟಿ ನೀಡಿದ್ದೆ: ಹುಜ್ಞಾನಮೂರ್ತಿ ಕಾಳಿಕಾಂಬ ದೇವಸ್ಥಾನಕ್ಕೆ ಭೇಟಿ, ವಿಶ್ವಕರ್ಮ ಸಮಾಜದಿಂದ ಸನ್ಮಾನ

ವಿದೇಶದಲ್ಲಿ ವ್ಯಾಸಂಗ ಮಾಡುವಂತಹ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ..
ಬಡ್ಡಿರಹಿತ 50 ಲಕ್ಷ ರೂ. ಸಾಲ
ಚಾಮರಾಜನಗರ : ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ನಾನು ಅಧ್ಯಕ್ಷ ರಾದ ಮೇಲೆ ಸರ್ಕಾರ 50 ಕೋಟಿ ರೂ. ನೀಡಿದೆ ಎಂದು ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಹೇಳಿದರು.
ನಗರದ ಕಾಳಿಂಕಾಂಬ ದೇವಸ್ಥಾನಕ್ಕೆ ಭೇಟಿ, ಪೂಜೆ ಸಲ್ಲಿಸಿ ದೇವರದರ್ಶನ ಪಡೆದು ಸಮುದಾಯದ ವತಿಯಿಂದ ಮನವಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರ ವಿಶ್ವಕರ್ಮ ನಿಗಮಕ್ಕೆ ನೀಡಿರುವ 50 ಕೋಟಿ ರೂ. ಸಾಲುವುದಿಲ್ಲ. ಮತಷ್ಟು ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೇಡಿಕೆಯಿಟ್ಟಿದ್ದೇನೆ. ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವುದಾಗಿ ಅಶ್ವಾಸನೆ ಕೊಟ್ಟಿದ್ದಾರೆ ಎಂದರು.
ವಿಶ್ವಕರ್ಮ ನಿಗಮದಲ್ಲಿ ಒಂದು ಪುಟಕಾಟ್ ಹೊಸ ಯೋಜನೆ ಇದ್ದು. ಅರ್ಜಿ ಸಲ್ಲಿಸಲು ಮಾ. 1ಕ್ಕೆ ಕೊನೆ ದಿನವಾಗಿದೆ. ಗ್ರಾಮ ಒನ್, ಕರ್ನಾಟಕ ಒನ್ ಸೆಂಟರ್‌ನಲ್ಲಿ ಅರ್ಜಿ ಸಲ್ಲಿಸಿದರೆ ಪುತ್‌ಬಾತ್‌ನಲ್ಲಿ ವ್ಯಾಪಾರ ಮಾಡುವವರಿಗೆ ಒಂದು ವಾಹನ ಖರೀದಿಸಲು 3 ಲಕ್ಷ ಸಬ್ಸಿಡಿ ಇದೆ. ಸಂಪ್ರಾದಾಯಿಕ ಕುಲಕಸುಬಿಗೆ ಸ್ವ ಉದ್ಯೋಗ ಯೋಜನೆಯಡಿಯಲ್ಲಿ 2 ಸಾಲವಿದ್ದು 30 ಸಾವಿರ ಸಬ್ಸಿಡಿ ದೊರೆಯುತ್ತದೆ. ಅಲ್ಲದೇಪ್ರಮುಖವಾಗಿ ನಮ್ಮಲ್ಲಿ ವಿದ್ಯಾಭ್ಯಾಸದ ಸಾಲ ಅರಿವು ಯೋಜನೆಗೆ ಈಗಾಗಲೂ ಅರ್ಜಿ ಸಲ್ಲಿಸಬಹದು ಸಿಇಟಿ,ನೀಟ್ ನಲ್ಲಿ ಆಯ್ಕೆಯಾಗಿರುವವರಿಗೆ ನಿಗಮದಿಂದ ಶೇ. 2 ರಷ್ಟು ಬಡ್ಡಿ ದರದಲ್ಲಿ 1 ಲಕ್ಷ ರೂ. ಸಾಲಸೌಲಭ್ಯ ನೀಡಲಾಗುತ್ತದೆ.ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ ಮೇಲೆ ಕಾಲೇಜು ಶುಲ್ಕ ಹೆಚ್ಚಾಗಿದೆ ಸಾಲಸೌಲಭ್ಯ ಹೆಚ್ಚು ಮಾಡುವಂತೆ ಪೋಷಕರು, ವಿದ್ಯಾರ್ಥಿಗಳ ಮನವಿ ಮಾಡಿದರು ಅವರ ಮನವಿಗೆ ಸ್ಪಂದಿಸಿ ಮುಂದಿನ ವರ್ಷದಿಂದ ಇಂಜಿನಿಯರ್ ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ಮೆಡಿಕಲ್ ಓದುವ ವಿದ್ಯಾರ್ಥಿಗಳಿಗೆ 10 ಲಕ್ಷ ರೂ ಸಾಲಸೌಲಭ್ಯ ಮಾಡಿಸಿದ್ದೇನೆ. ಅಲ್ಲದೆ ವಿದೇಶದಲ್ಲಿ ವ್ಯಾಸಂಗ ಮಾಡುವ ಸಮುದಾಯದ ವಿದ್ಯಾರ್ಥಿಗಳಿಗೆ ಬಡ್ಡಿರಹಿತ 50 ಲಕ್ಷ ಸಾಲವನ್ನು ನಿಗಮದಿಂದ ನೀಡಲಾಗುವುದು, ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಸೌಲಭ್ಯಕ್ಕೆ ಪ್ರಮುಖ ಆದ್ಯತೆ ನೀಡಿದ್ದೇನೆ. ಇಂತಹ ಅವಕಾಶವನ್ನು ಸಮುದಾಯದವರು ಪಡೆದುಕೊಳ್ಳಬೇಕು ಎಂದರು.
ಸಮುದಾಯವು ಪಂಚಕಸುಬು ಜೊತೆಗೆ ಜಿಲ್ಲೆಯಲ್ಲಿ ಕಲೆ, ಜಾನಪದಕಲೆ ತುಂಬಾ ಒತ್ತು ನೀಡಿದ್ದಾರೆ. ನಿಮಗೆಲ್ಲ ಅಭಿನಂದನೆ ಸಲ್ಲಿಸುತ್ತೇನೆ ಕಲೆಯು ಸಮುದಾಯದ ಅವಿಭಾಜ್ಯ ಅಂಗವಾಗಿದೆ. ಅದು ರಕ್ತಗತವಾಗಿ ಬಂದಿದೆ ಎಂದರು.
ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಮನವಿ : ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಕೊಡಿಸಿಕೊಡಬೇಕು ಎಂದು ಜಿಲ್ಲಾ ವಿಶ್ವಕರ್ಮ ಸಮಾಜದ ವತಿಯಿಂದ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಕನ್ನಡ ಸೋಮು,ವಿಶ್ವಕರ್ಮ ಸಮಾಜ ಮುಖಂಡರಾದ ಬಿ.ಮುರುಗೇಶ್,
ವಿಶ್ವಕರ್ಮ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಶ್ರೀನಿವಾಸಪ್ರಸಾದ್,
  ಮಾಜಿ ಅಧ್ಯಕ್ಷ
ನಾಗೇಂದ್ರ ಬಾಬು, ನಂದೀಶ್ ವಿಶ್ವಕರ್ಮ, ಪ್ರಕಾಶ್ ಕೊತ್ತಲವಾಡಿ,ಚಿಕ್ಕ ಯಜಮಾನ ರಮೇಶ್, ಸೋಮಶೇಖರಶ್ರೀಕಂಠ, ಸೌಮ್ಯಬಾಬು, ಸೋಮಣ್ಣಚಾರ್, ಶಂಭು ಹಂಡ್ರಕಳ್ಳಿ,
ನಾಗರಾಜು ಕಲ್ಲಹಳ್ಳಿ, ನಾಗರಾಜು ಹರವೆ, ಮಧು ಭೋಗಾಪುರ, ಸ್ವಾಮಿ ಪೋಟೋ ಸ್ಟುಡಿಯೋ, ಶಶಿರೇಖಾ, ಎಸ್. ರೂಪ, ಜ್ಯೋತಿ, ಲಕ್ಷ್ಮೀ, ವನಜಾಕ್ಷಿ, ಲತಾ ಮಹೇಶ್, ಸೋಮಣ್ಣ, ಸುರೇಶ್ ಜಿ, ದುಂದುವೀರಚಾರ್, ಪ್ರಭಕರ್, ಮಹೇಶ್ ಭೋಗಾಪುರ, ಸುರೇಶ್ ಎನ್,ಮಿತ್ರೇಶ್,
ಇತರರು ಹಾಜರಿದ್ದರು.

Leave a Reply

Your email address will not be published. Required fields are marked *