- ಕರ್ನಾಟಕ ರಾಜ್ಯ ಅಹಿಂದ ಒಕ್ಕೂಟದ ಚಾಮರಾಜನಗರ ಜಿಲ್ಲಾ ಸಮಿತಿ ರಚನೆ ಪೂರ್ವಭಾವಿ ಸಭೆ
ಚಾಮರಾಜನಗರ : ಶೋಷಿತ ಸಮುದಾಯಗಳ ಹಕ್ಕುಗಳ ರಕ್ಷಣೆ ಮಾಡುವುದು, ಆ ಸಮುದಾಯಗಳಿಗೆ ನ್ಯಾಯ ಕೊಡಿಸುವುದು ಕರ್ನಾಟಕ ರಾಜ್ಯ ಅಹಿಂದ ಒಕ್ಕೂಟದ ಮೂಲ ಉದ್ದೇಶವಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ದ್ಯಾವಪ್ಪನಾಯಕ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ಅಹಿಂದ ಒಕ್ಕೂಟದ ಚಾಮರಾಜನಗರ ಜಿಲ್ಲಾ ಸಮಿತಿ ರಚನೆ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಜಿಲ್ಲಾ ಮುಖಂಡರ ಸಲಹೆಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಸಂಘಟನೆ ಧೈಯೋದ್ದೇಶ ಶೋಷಿತ ಸಮುದಾಯಗಳಿಗೆ ನ್ಯಾಯ ಕೊಡಿಸುವುದಾಗಿ ಹೊರತು ಯಾವುದೇ ರಾಜಕೀಯ ಪಕ್ಷಗಳಿಗೆ ಸಂಬಂಧವಿಲ್ಲ. ಇದು ಪಕ್ಷಾತೀತ ಸಂಘಟನೆಯಾಗಿದೆ ಎಂದರು.
ಕರ್ನಾಟಕ ರಾಜ್ಯ ಅಹಿಂದ ಒಕ್ಕೂಟದ ಉದ್ಧೇಶ ರಾಜ್ಯದಲ್ಲಿ ಶತಶತಮಾನಗಳಿಂದ ಶೋಷಣೆಗೊಳಾಗಿರುವ ನಮ್ಮ ಸಮುದಾಯಗಳು ಸುಮಾರು ಒಂದು ಸಾವಿರಕ್ಕೂ ಹೆಚ್ಚು ನಮುದಾಯಗಳಿವೆ ಎಸ್‌ಸಿ, ಎಸ್‌ಟಿ, ಓಬಿಸಿ ಸಮುದಾಯಗಳಲ್ಲಿ ಸ್ವಾತಂತ್ರ್ಯ
ಬಂದು 78 ವರ್ಷಗಳು ಕಳೆದಿದ್ದರೂ ಕೂಡ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಂದುವರಿದಿಲ್ಲ ಆಗಾಗಿ ಈ ಸಮುದಾಯಗಳ ಹಕ್ಕುಗಳನ್ನು ರಕ್ಷಣೆ ಮಾಡಬೇಕು ಸಮುದಾಯಗಳಿಗೆ ಸರ್ಕಾರಗಳಿಂದ ಸಂವಿಧಾನಬದ್ಧವಾಗಿ ಸಿಗುವ. ಸವಲತ್ತುಗಳನ್ನು ಸಮುದಾಯಕ್ಕೆ ತಲುಪಿಸಿಕೊಡಬೇಕು ಶೋಷಣೆಗೊಳಗಾದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಕೂಡಿಸಿಕೊಡಬೇಕು ಎಂದು ಈ ಸಂಘಟನೆ ಹುಟ್ಟುಹಾಕಲಾಗಿದೆ ಹೊರತು ವಿಸಿಟಿಂಗ್ ಕಾರ್ಡ್ ಗಾಗಿ, ಶೋಕಿಗಾಗಿ ಮಾಡಿಕೊಂಡಿರುವ ಸಂಘಟನೆಯಲ್ಲ ಎಂದರು.
ಕರ್ನಾಟಕ ರಾಜ್ಯ ಅಹಿಂದ ಒಕ್ಕೂಟದ ಗೌರವಾಧ್ಯಕ್ಷ ಎನ್.ಆರ್.ನಾಗೇಶ್ ಮಾತನಾಡಿದರು.
ಕಾರ್ಯಾಧ್ಯಕ್ಷ ನಾಗರಾಜು ಕರಳಪುರ, ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ, ಮೈಸೂರು ಜಿಲ್ಲಾ ಸಲಹೆಗಾರ ಮಹದೇವಪ್ಪ, ಸದಸ್ಯರಾದ ಸುರೇಶ್, ಮುತ್ತು, ಲಕ್ಷ್ಮೀ, ಸರಸ್ವತಿ, ಚಾಮರಾಜನಗರ ಚಿನ್ನಸ್ವಾಮಿ, ಆರ್.ಚೇತನ್ ಕುಮಾರ್, ವಿ.ಹೆಚ್.ಸಿದ್ದರಾಜು, ನಾಗಣ್ಣ, ಉದ್ಬೂರು ಸಿದ್ದರಾಜು, ಚೆನ್ನೇಗೌಡ, ಗುರುಲಿಂಗು, ಮುದ್ದುಮಾಧು, ರಂಗಸ್ವಾಮಿ, ಸೀಗಮಾರನಾಯಕ, ನಾಗರಾಜು, ರೇವಣ್ಣ ಭಾಗವಹಿಸಿದ್ದರು.