ಅಗರ, ಮದ್ದೂರು ಕೆರೆಗಳಿಂದ ಚಿಕ್ಕಬಳ್ಳಾಪುರ ಕೈಗಾರಿಕಾ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಯೋಜನೆ ಅವೈಜ್ಞಾನಿಕ : ಶಾಸಕ ಎ.ಆರ್.ಕೃಷ್ಣಮೂರ್ತಿ

ಜಿಲ್ಲೆಯ ರೈತರಿಗೆ ನೀರಿಗೆ ತೊಂದರೆ; ಇನ್ನು ಅನೇಕ ಕುಡಿಯುವ ನೀರು ಯೋಜನೆ ಕಾರ್ಯಗತವಾಗಿಲ್ಲ; ಈ ಹಂತದಲ್ಲಿ ಕೈಗಾರಿಕೆಗಳಿಗೆ ೧೭೫ ಕಿ.ಮೀ. ನಿಂದ ಲಿಪ್ಟ್ ಮಾಡುವುದು ಅವೈಜ್ಞಾನಿಕ

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಅಗರ ಮತ್ತು ಮದ್ದೂರು ಕೆರೆಗಳಿಂದ ಬೆಂಗಳೂರು ನಗರದ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ನೀರು ಒದಗಿಸಲು ರೂಪಿಸಿರುವ ಯೋಜನೆ ಅವೈಜ್ಞಾನಿಕವಾಗಿದ್ದು, ಕೂಡಲೇ ಈ ಯೋಜನೆಯನ್ನು ಕೈಬಿಡಬೇಕೇಂದು ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಆಗ್ರಹಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಳ್ಳೇಗಾಲ ತಾಲೂಕಿನ ಸರಗೂರು ಗ್ರಾಮದ ಬಳಿ ಕಾವೇರಿ ನದಿಯಿಂದ ನೀರನ್ನು ಎತ್ತಿ ಆಗರ, ಮದ್ದೂರು ಕೆರೆಗಳನ್ನು ತುಂಬಿಸಿ ನಂತರ ಈ ಕೆರೆಗಳಿಂದ ಸಂಗ್ರಹವಾಗುವ ನೀರನ್ನು ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿರುವ ಕೈಗಾರಿಕಾ ಪ್ರದೇಶಗಳಿಗೆ ನೀರು ಕೊಡುವ ಯೋಜನೆ ಅನುಷ್ಠಾನಗೊಂಡಿದೆ. ಈ ಸಂಬAಧ ಅಧಿಕಾರಿಗಳ ತಂಡ ಸರ್ವೆ ಮಾಡುವ ಕ್ಷೇತ್ರಕ್ಕೆ ಬರುತ್ತಿರುವ ಬಗ್ಗೆ ಮಾಹಿತಿ ಇದೆ. ಇದೊಂದು ಅವೈಜ್ಞಾನಿಕ ಯೋಜನೆಯಾಗಿದ್ದು, ಸಾವಿರಾರು ಕೋಟಿ ರೂ. ವೆಚ್ಚ ಮಾಡಿ ಇಲ್ಲಿಂದ ನೀರು ತೆಗೆದುಕೊಂಡುವುದು ಅನವಶ್ಯಕವಾಗಿದೆ ಎಂದರು.

ಈ ಯೋಜನೆಯ ಬಗ್ಗೆ ಸ್ಥಳೀಯ ಶಾಸಕನಾದ ನನ್ನ ಗಮನಕ್ಕೆ ಬಂದಿಲ್ಲ. ನಾನು ವಿಧಾನಸಭೆಯಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದ್ದೆನೆ. ಸಮಂಜಸವಾದ ಉತ್ತರ ಬಂದಿಲ್ಲ. ಅಲ್ಲದೇ ಈ ಯೋಜನೆಯಿಂದ ಕೆರೆಗಳ ಅಚ್ಚಕಟ್ಟು ಪ್ರದೇಶದ ಕೊಳವೆ ಮಾರ್ಗದ ಮೂಲಕ ರೈತರು ಫಸಲು ಬೆಳೆಯಲು ತೊಂದರೆಯಾಗಲಿದೆ. ಬೆಂಗಳೂರು ನಗರದ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ನೀರು ಒದಗಿಸಲು ಯೋಜನೆ ರೂಪಿಸಿರುವುದು ಸರಿಯಲ್ಲ ಕಾವೇರಿ ನೀರಾವರಿ ನಿಗಮದ ಇಇ. ಎಇಇ, ಸೂಪರಿಡೆಂಟ್ ಇಂಜಿನಿಯರ್ ಅವರು ಈ ಯೋಜನೆ ಅವೈಜ್ಞಾನಿಕವಾಗಿದೆ ಎಂದು ವರದಿ ನೀಡಿದ್ದಾರೆ. ಅಲ್ಲದೇ ಈ ಯೋಜನೆ ಸಂಬAಧ ನನ್ನ ಗಮನಕ್ಕೆ ತಂದಿಲ್ಲ. ಸರ್ಕಾರ ಗಂಭೀರವಾಗಿ ಪರಿಗಣಿಸಿ ಯೋಜನೆಯನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಈ ಯೋಜನೆಗೆ ೧೫೦೦ ಕೋಟಿ ಖರ್ಚಾಗಲಿದ್ದು, ಇದೊಂದು ದುಬಾರಿ ಯೋಜನೆಯಾಗಿದೆ. ಅಲ್ಲದೇ ಈ ಯೋಜನೆಯಿಂದ ಕೆರೆಗಳ ಸುತ್ತಮುತ್ತಲಿನ ಜಮೀನುಗಳು ಮುಳುಗಡೆಯಾಗಲಿವೆ. ಇದರ ಬದಲು ಕಾವೇರಿ ನದಿಗೆ ಸೂಕ್ತ ಸ್ಥಳದಲ್ಲಿ ಬ್ರಿಡ್ಜ್ ನಿರ್ಮಿಸಿ ಅಲ್ಲಿಂದ ನೀರನ್ನು ಕೊಂಡೊಯ್ಯಬಹುದು ಎಂದು ಸಲಹೆ ನೀಡಿದರು. ನೀರಾವರಿ ಉದ್ದೇಶ ಹೊಂದಿರುವ ಈ ಕೆರೆಗಳು ಜಲಸಂಪನ್ಮೂಲ ಇಲಾಖೆಯ ಸುಪರ್ದಿಯಲ್ಲಿದ್ದು ಸದರಿ ಯೋಜನೆಯನ್ನು ಕೈಗೊಳ್ಳುವುದರಿಂದ ಆಗಬಹುದಾದ ಸಾಧಕ-ಭಾದಕಗಳ ಬಗ್ಗೆ ಚರ್ಚೆಯಾಗಲಿ ಎಂದು ಕೃಷ್ಣಮುರ್ತಿ ಸಲಹೆ ನೀಡಿದರು.

ಅಲ್ಲದೇ ದಿವಾನ್ ಪೂರ್ಣಯ್ಯ ಅವರ ಕಾಲದಲ್ಲಿ ಅಗರ ಮತ್ತು ಮದ್ದೂರು ಕೆರೆಗಳು ಸೇರಿದಂತೆ ೩೩ ಹಳ್ಳಿಗಳಿಗೆ ೩೩ ಕೆರೆಗಳನ್ನು ನಿರ್ಮಾಣ ಮಾಡಿ, ಈ ಕೆರೆಗಳು ನದಿ ಮೂಲಗಳಿಂದ ತುಂಬಲು ಲಿಂಗ್ ಮಾಡಲಾಗಿದೆ. ಇದರಿಂದ ಈ ಭಾಗ ಸಂಪೂರ್ಣ ನೀರಾವರಿ ಪ್ರದೇಶವಾಗಿದೆ. ಈ ಪೈಕಿ ಎರಡು ಕೆರೆಗಳನ್ನು ಪ್ರಾಜೆಕ್ಟ್ಗೆ ಒಳಪಡಿಸಿ, ಕೆರಗಳನ್ನು ಅವೈಜ್ಞಾನಿಕವಾಗಿ ಎತ್ತರ ಮಾಡಿ, ಹೆಚ್ಚು ನೀರು ತುಂಬುವAತೆ ಮಾಡಿ, ಅಲ್ಲಿಂದ ನೀರು ಲಿಫ್ಟ್ ಮಾಡುವುದು ಕೆರೆಗಳಿ ಸಂರಕ್ಷಣಗೆ ಧಕ್ಕೆಯಾಗುತ್ತದೆ. ಅಲ್ಲಿಂದ ಇದರಿಂದ ಈ ಭಾಗರ ರೈತರ ಜಮೀನುಗಳು ಮುಳುಗಡೆಯಾಗುತ್ತವೆ. ಅವರಿಗೆ ಅಗುವ ನಷ್ಟವನ್ನು ತುಂಬವವರು ಯಾರು. ಕೆರೆಗಳ ಏರಿಯನ್ನು ಹೆಚ್ಚಿಸುವುದು ಸರಿಯಾದ ಕ್ರಮವಲ್ಲ. ಮುಖ್ಯಮಂತ್ರಿಗಳ ಈ ಯೋಜನೆ ನಿಲ್ಲಿಸಿ, ಹತ್ತಿರದ ಮೇಕೆದಾಟು, ಸತ್ತೇಗಾಲ ಸೇತುವೆ, ಇತರವೇ ನದಿ ಮೂಲಗಳಿಂದ ನೀರು ತೆಗೆದುಕೊಂಡು ಹೋಗುವುದು ಒಳಿತು ಎಂದು ಎ.ಆರ್. ಕೃಷ್ಣಮುರ್ತಿ ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಹೊಂಗನೂರು ಚಂದ್ರು. ಯಳಂದೂರು ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್.ಮಹದೇವ್, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಇದ್ದರು.

Leave a Reply

Your email address will not be published. Required fields are marked *