ಜಿಲ್ಲೆಯ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ : ಜಿ.ಪಂ.ಸಿಇಓ ಮೋನಾರೋತ್

ಚಾಮರಾಜನಗರ: ಜಿಲ್ಲೆಯ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮೋನಾರೋತ್ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಆಖಿಲ ಕರ್ನಾಟಕ ಕನ್ನಡ ಮಹಾಸಭಾ ರಾಜ್ಯ ಘಟಕ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತು ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಜಿಲ್ಲೆ, ರಾಜ್ಯ ದೇಶ ಅಭಿವೃದ್ಧಿಯಾಗಬೇಕಾದರೆ ಎಲ್ಲರ ಪಾತ್ರ ಅವಶ್ಯಕವಾಗಿದ್ದು, ನಮ್ಮ ಜಿಲ್ಲೆಯ ಅಭಿವೃದ್ಧಿ ನಮ್ಮಗಳ ಪಾತ್ರ ಇರಬೇಕು. ನಮ್ಮ ಜಿಲ್ಲೆಯ ಪ್ರಗತಿಗೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಮೊಬೈಲ್‌ನಲ್ಲಿ ಪಾಸಿಟಿವ್, ನೆಗೆಟಿವ್ ಎರಡು ಇರುತ್ತದೆ. ಅದರಲ್ಲಿ ಒಳ್ಳೆಯದನ್ನು ಆಯ್ಕೆಮಾಡಿಕೊಳ್ಳಬೇಕು. ಗಂಡು, ಹೆಣ್ಣು ಇಬ್ಬರನ್ನು ಸಮಾನತೆಯಿಂದ ನೋಡಿಕೊಳ್ಳಬೇಕು. ಅವರಿಗೆ ಸಮಾನತೆ ಕೊಟ್ಟರೆ ಸಮಾಜಕ್ಕೆ ಕೊಡುಗೆ ನೀಡಬಲ್ಲರು ಎಂದರು.
   ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಪುಷ್ಪಾರ್ಚನೆ ಮಾಡಿ ಮಾತಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿದ್ದು, ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳೆಯರು ಶಿಕ್ಷಣ, ರಾಜಕೀಯ, ವಿಜ್ಞಾನ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ತೋರಿಸುವ ಮೂಲಕ ಅಬಲೆಯಲ್ಲ ಸಬಲೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಮಹಿಳೆಯರ ಹಕ್ಕಿಗಾಗಿ ಹೋರಾಟ ಮಾಡಬೇಕು ಎಂಬ ಕಲ್ಪನೆ ಬಂದದ್ದು 20ನೇ ಶತಮಾನದಲ್ಲಿ ನ್ಯೂಯಾರ್ಕ್‌ನಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಅವರ ವೇತನ ಹೆಚ್ಚಳ, ಕೆಲಸದ ಅವಧಿ ಕಡಿಮೆ ಮಾಡಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು 19ನೇ ಶತಮಾನದಲ್ಲಿ ಹೋರಾಟ ಮಾಡಿದರು. ಅನಂತರ ಅಮೇರಿಕಾದಲ್ಲಿ ಹೋರಾಟ ಶುರುವಾಗುತ್ತದೆ. ರಷ್ಯಾದಲ್ಲಿ ಶಾಂತಿ ಮತ್ತು ಬ್ರೇಡ್ಗಾ
ಗಿ ಹೋರಾಟ ಮಾಡುತ್ತಾರೆ ಅ…
ಪ್ರತಿಭಟನೆ ಮಾ. 8ಕ್ಕೆ ಮುಕ್ತಾಯವಾಗುತ್ತದೆ. ವಿಶ್ವಸಂಸ್ಥೆ ಮಾ. 8 ನ್ನು ವಿಶ್ವ ಮಹಿಳಾ ದಿನಾಚರಣೆಯಾಗಿ ಆಚರಣೆಯಾಗಿ ಘೋಷಣೆ ಮಾಡಿದೆ ಎಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಂಡಂತಹ ಸಂದರ್ಭ. ಆದರೆ ನಮ್ಮ ಭಾರತ ಇತಿಹಾಸ, ಕರ್ನಾಟಕ ಇತಿಹಾಸ ನೋಡಿದಾಗ ನಿಜವಾದ ಮಹಿಳೆಯರ ಹೋರಾಟ, ನಿಜವಾದ ಸ್ತ್ರೀ ಸ್ವಾತಂತ್ರ್ಯ ಚಳುವಳಿ ಹುಟ್ಟಿಕೊಂಡದ್ದೆ 12ನೇ ಶತಮಾನದಲ್ಲಿ ವಿದೇಶಗಳಿಗಿಂತ, ಜಾಗತಿಕ ಮಟ್ಟದಲ್ಲಿ ಮಹಿಳೆಯರ ಹಕ್ಕುಗಳು, ಸ್ಥಾನಮಾನದ ಬಗ್ಗೆ ಅರಿವು ಬರುವ ಮುಂಚೆನೇ ಹುಟ್ಟುಕೊಂಡಿದೆ ಎಂದರು.
12ನೇ ಶತಮಾನ ಬಸವಣ್ಣನವರ ಕಾಲದಲ್ಲಿ ಕೂಡ ಪುರುಷನಿಗೆ ಸರಿಸಮಾನಳು ಧಾರ್ಮಿಕ, ವಿಚಾರಗಳು, ಆಧ್ಯಾತ್ಮಿಕ ವಿಚಾರಗಳಲ್ಲಿ, ಸಾಮಾಜಿಕ ಚಿಂತನೆಯಲ್ಲಿ ಪುರುಷನಿಗೆ ಸಮನವಾಗಿ ಸ್ತ್ರೀಗೆ ಹಕ್ಕುಗಳನ್ನು ಅನುಭವ ಮಂಟಪದಲ್ಲಿ ಕೊಟ್ಟಿದ್ದಾರೆ. ಇಂದು ಮಹಿಳೆಯರು ನಾಲ್ಕು ಗೋಡೆಗೆ ಸೀಮಿತವಾಗದೆ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಇದ್ದಾರೆ. ಎಂದು ಎಲ್ಲರಿಗೂ ಮಹಿಳಾ ದಿನಾಚರಣೆ ಶುಭಾಶಯ ಕೋರಿದರು.
    ಅಧ್ಯಕ್ಷತೆ ವಹಿಸಿದ್ದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಹಂಚಾಲಕಿ ಬಿ.ಕೆ.ದಾನೇಶ್ವರಿ ಮಾತನಾಡಿ, ಒಂದು ಸುಂದರ ಸಮಾಜ, ಒಂದು ಸುಂದರ ಕುಟುಂಬದ ರೂವಾರಿ ಮಹಿಳೆಯಾಗಿದ್ದಾಳೆ. ಮಹಿಳೆಯರು ಸಂಸ್ಕೃತಿಯ ರಕ್ಷಕರು, ಆದಿಕಾಲದಿಂದಲ್ಲೂ ಮಹಿಳೆಯರಿಗೆ ಬಹಳಷ್ಟು ಗೌರವ ಇದೆ ಎಂದರು.
ಚೂಡಾ ಅಧ್ಯಕ್ಷ ಮಹಮ್ಮದ್‌ಅಸ್ಗರ್, ಕನ್ನಡ ಸಾಹಿತ್ಯ ಪರಿಷತು ಜಿಲ್ಲಾಧ್ಯಕ್ಷ ಶೈಲಾಕುಮಾರ್ ಮಾತನಾಡಿದರು. ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸಹಾಯಕ ವಾರ್ತಾಧಿಕಾರಿ ಎ.ರಮೇಶ್, ಸಿಎಸ್‌ಆರ್ ಸಂಯೋಜಕಿ ರಕ್ಷಿತಾನಾಯಕ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ್‌ಋಗ್ವೇ
ದಿ, ಗೌರವಾಧ್ಯಕ್ಷ ಶಾ.ಮುರಳಿ, ಉದ್ಯಮಿ ಶ್ರೀನಿಧಿಕುದರ್‌, ಪಣ್ಯದಹುಂಡಿರಾಜು, ಲೋಕೇಶ್‌ಹೊಮ್ಮ, ನಿಜಧ್ವನಿಗೋವಿಂದರಾಜು, ರವಿಚಂದ್ರಪ್ರಸಾದ್ ಕಹಳೆ ,ಮಹೇಶ್‌ಗೌಡ, ರಾಜಪ್ಪ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *