- ಚಾಮರಾಜನಗರ ಜಿಲ್ಲಾ ಘಟಕ ನೂತನ ಅಧ್ಯಕ್ಷರಾಗಿ ಮಾದಯ್ಯ ಹಾಗೂ ಪದಾಧಿಕಾರಿಗಳ ನೇಮಕ
ಚಾಮರಾಜನಗರ: ರಾಜ್ಯದಲ್ಲಿ ನೊಂದವರ ಧ್ವನಿಯಾಗಿ ಕರ್ನಾಟಕ ರಾಜ್ಯ ಭೀಮ್ ಸೇನೆ ಕೆಲಸ ಮಾಡುತ್ತದೆ ಎಂದು ಸೇನೆಯ
ರಾಜ್ಯಾಧ್ಯಕ್ಷ ಸರ್ವೇಶ್ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ಕರ್ನಾಟಕ ರಾಜ್ಯ ಭೀಮ್ ಸೇನೆ ವತಿಯಿಂದ ನಡೆದ ಸಭೆಯಲ್ಲಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಅವರಿಗೆ ಸಂಘಟನೆಯ ಶಲ್ಯಹಾಕಿ ಸನ್ಮಾನಿಸಿ ಮಾತನಾಡಿದರು.
ಎಸ್ಸಿ, ಎಸ್ಟಿ ಸಮುದಾಯ ಅಲ್ಲದೇ ಇತರ ಸಮುದಾಯಗಳಲ್ಲಿ ನೊಂದವರಿಗೆ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ತಲುಪಿಸುವುದು ಸೇನೆಯ ಉದ್ದೇಶವಾಗಿದೆ. ರಾಜ್ಯಾದ್ಯಂತ ಬಗರ್ ಹುಕುಂ ಸಾಗುವಳಿ ತೊಂದರೆ ಅನುಭವಿಸುತ್ತಿದ್ದಾರೆ. ದೌರ್ಜನ್ಯಕ್ಕೊಳದವರಿಗೆ ನ್ಯಾಯ ಕೊಡಿಸುವುದು ಸಂಘಟನೆ ಉದ್ದೇಶವಾಗಿದೆ.ಚಾಮರಾಜನಗರ ಜಿಲ್ಲೆಯಲ್ಲಿ ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳ ಒದಗಿಸಲು ಹೋರಾಟ ಮಾಡಲಾಗುತ್ತದೆ ಆಗಾಗಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳು ಸಂಘಟನೆ ಮಾಡಿ ಭೀಮ್ ಸೇನೆ ಸದೃಡಗೊಳಿಸುವಂತೆ ಸಲಹೆ ನೀಡಿದರು.
ಈಗಾಗಲೇ ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಜಿಲ್ಲಾ ಘಟಕ ಸ್ಥಾಪನೆಯಾಗಿದ್ದು, ರಾಜ್ಯದ 31 ಜಿಲ್ಲೆಗಳಲ್ಲೂ ಸಂಘಟನೆ ವಿಸ್ತರಣೆ ಮಾಡಿ ನೊಂದವರ ಧ್ವನಿಯಾಗಿ ಕೆಲಸ ಮಾಡಲಾಗುತ್ತದೆ ಎಂದರು.
ಸಭೆಯಲ್ಲಿ ಮೈಸೂರು ಜಿಲ್ಲಾಧ್ಯಕ್ಷ ರಾಜಣ್ಣ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಮಹೇಶ್, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಶೇಖರ್, ಚಾಮರಾಜನಗರ ಜಿಲ್ಲಾಧ್ಯಕ್ಷ ಎಸ್. ಮಾದಯ್ಯ ತಮ್ಮಡಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ರಘು,
ತಾಲೂಕು ಅಧ್ಯಕ್ಷ ಗುರುಸ್ವಾಮಿ ಕೆರೆಹಳ್ಳಿ, ಉಪಾಧ್ಯಕ್ಷ ಗಿರೀಶ್,ಜಿಲ್ಲಾ ಮಹಿಳಾ ಗೌರವಾಧ್ಯಕ್ಷೆ ಕಮಲ, ಜಿಲ್ಲಾಧ್ಯಕ್ಷೆ ಅಣ್ಣಪೂರ್ಣ ಎಂ.
ಪ್ರಧಾನ ಕಾರ್ಯದರ್ಶಿ ಡಿ.ದೊಡ್ಡತಾಯಮ್ಮ, ಯುವ ಘಟಕ ಅಧ್ಯಕ್ಷೆ ಜ್ಯೋತಿ, ತಾಲೂಕು ಗೌರವಾಧ್ಯಕ್ಷ ಶಿವಕುಮಾರ್ ಚಾಟೀಪುರ, ಸಂತೇಮರಹಳ್ಳಿ ಹೋಬಳಿಯ ಅಧ್ಯಕ್ಷ ಎಂ.ಮಾದೇಶ್, ಉಪಾಧ್ಯಕ್ಷ ರವಿಕುಮಾರ್ ಮಸಣಾಪುರ,ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಎನ್.ಚಾಟೀಪುರ, ಯುವ ಘಟಕದ ಅಧ್ಯಕ್ಷ ಜಿ.ಗುರು, ಕಸಬಾ ಹೋಬಳಿಯ ನಿರ್ದೇಶಕ ಶಶಿಕುಮಾರ್ ಇತರರು ಭಾಗವಹಿಸಿದ್ದರು.