ಸಾವಿರ ದಿನದ ಸಾಧನೆ ಹುಚ್ಚು ಮದುವೆಯಲ್ಲಿ ಉಂಡವನೇ ಜಾಣ : ಎನ್.ಮಹೇಶ್ ಆರೋಪ

  • ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲ, ಗೃಹ ಇಲಾಖೆ ಹಳ್ಳ ಹಿಡಿದಿದೆ.
  • ಪತ್ನಿಗೆ 2 ಸಾವಿರ ಕೊಟ್ಟು  ಪತಿಯ ಜೇಬಿನಿಂದ 10 ಸಾವಿರ ಕಿತ್ತುಕೊಳ್ಳುತ್ತಿರುವ ರಾಜ್ಯ ಸರ್ಕಾರ ಆರೋಪ.

ಚಾಮರಾಜನಗರ :   ರಾಜ್ಯ ಕಾಂಗ್ರೆಸ್ ಸರ್ಕಾರದ ಸಾವಿರ ದಿನದ ಸಾಧನೆ  ಶೂನ್ಯವಾಗಿದ್ದು, ಹುಚ್ಚು ಮದುವೆಯಲ್ಲಿ ಉಂಡವನೇ ಜಾಣ ಎಂಬಾತಾಗಿದೆ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎ‌ನ್.ಮಹೇಶ್ ಆರೋಪಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಾವಿರ ದಿನಗಳನ್ನು ಪೂರೈಸಿದ್ದು, ಸಾವಿರಾರು ದಿನಗಳ ಆಡಳಿತದಲ್ಲಿ ಸಾವಿರಾರು ಸಮಸ್ಯೆಗಳನ್ನು ಸರ್ಕಾರ ಮಹಾ ಜನತೆಯ ತಲೆಯಮೇಲೆ ಹಾಕಿದೆ. ಅದರೆ ಮುಖ್ಯಮಂತ್ರಿ ಗಳು ತಮ್ಮ ಫೇಸ್‌ಬುಕ್‌ ಪೇಜ್ ನಲ್ಲಿ  ಸಾವಿರ ದಿನಗಳಲ್ಲಿ 1.37 ಸಾವಿರ ಕುಟುಂಬಗಳಿಗೆ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ 1 ಲಕ್ಷದ 13 ಸಾವಿರ ಕೋಟಿ ಹಣವನ್ನು ಜನರಿಗೆ ತಲುಪಿದ್ದೇವೆ ಅದರ ಪರಿಣಾಮದಿಂದ ತಲಾದಾಯ ಜಾಸ್ತಿಯಾಗಿದ್ದು,  ನಮ್ಮ ರಾಜ್ಯ ನಂಬರ್ಒನ್ ಸ್ಥಾನದಲ್ಲಿದೆ.

ಅಲ್ಲದೆ ಒಂದು ಲಕ್ಷ ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಸರ್ಕಾರ ಪತ್ನಿ ಗೆ 2 ಸಾವಿರ ಕೊಟ್ಟು ಪತಿ ಜೇಬಿನಿಂದ, ಕುಟುಂಬದ ಕಡೆಯಿಂದ 10 ಸಾವಿರ ರೂ. ಸಂಗ್ರಹಿಸುವ ಮೂಲಕ ಕೆಟ್ಟ ಆರ್ಥಿಕ ವ್ಯವಸ್ಥೆಯನ್ನು ರಾಜ್ಯದ ಜನರ ಮೇಲೆ ಹೇರಿದ್ದಾರೆ ಎಂದು ಕಿಡಿಕಾರಿದರು.

ಆಸ್ಪತ್ರೆಯಲ್ಲಿ ಚೀಟಿ ಪಡೆಯುವ ಶುಲ್ಕದಿಂದ ಹಿಡಿದು ಆರ್ ಟಿಸಿ ವರೆಗೆ ದರ ದುಪ್ಪಟ್ಟು ಮಾಡಿದ್ದಾರೆ. ಬಡವರು ಕುಡಿಯುವ ಮದ್ಯದ ದರವನ್ನು ಶೇ.20 ರಷ್ಟು ಹೆಚ್ಚು  ಮಾಡಿ ಹಣ ವಸೂಲಿ ಮಾಡುವ ಮೂಲಕ ಗ್ಯಾರಂಟಿ ಯೋಜನೆಗಳ ವೆಚ್ಚವನ್ನು ಸರಿದೂಗಿಸುವ ಕೆಲಸವನ್ನು ಮಾಡಿದ್ದಾರೆ. ಇದು ರಾಜ್ಯಸರ್ಕಾರದ ಸಾವಿರ ದಿನಗಳ ಆಡಳಿತದ ಅಭಿವೃದ್ದಿನಾ ಎಂದು ಮಹೇಶ್ ಖಾರವಾಗಿ ಪ್ರಶ್ನಿಸಿದರು.

ಕಾನೂನು ಸುವ್ಯವಸ್ಥೆ ಹಳ್ಳಹಿಡಿದಿದೆ : ನಾಗರೀಕ ಸರ್ಕಾರ ಆಡಳಿತಕ್ಕೆ ಬಂದ ತಕ್ಷಣವೇ  ಕಾನೂನು ‌ಸುವ್ಯವಸ್ಥೆ ಕಾಪಾಡಬೇಕು. ಆದರೆ ರಾಜ್ಯ ಸರ್ಕಾರ ಹಗರಣ ಸರಮಾಲೆ ಇದ್ದು, ಮೈಸೂರು, ಬೆಂಗಳೂರಿನಲ್ಲಿ ಡ್ರಗ್ಸ್ ಮಾಫೀಯಾವನ್ನು ಮಹಾರಾಷ್ಟ್ರ ಪೊಲೀಸರು ಪತ್ತೆಹಚ್ಚಿದ್ದಾರೆ. ಕರ್ನಾಟಕ ಗೃಹ ಇಲಾಖೆ ವೀಕ್ ಆಗಿದ್ದು ಹಳ್ಳಹಿಡಿದಿದೆ. ಆಗಾಗಿ ಕೇಂದ್ರ ತನಿಖಾ ದಳ, ಪಕ್ಕದ ರಾಜ್ಯದ ಪೊಲೀಸರು ಕರ್ನಾಟಕ ದ ಅವ್ಯವಹಾರಗಳನ್ನು ಪತ್ತೆಹಚ್ಚಿದ್ದಾರೆ ಎಂದರು.

ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಅವರೇ ಸಿಕ್ಕಿಕೊಂಡಿದ್ದರು. ವಿರೋಧ ಪಕ್ಷದವರು ಪ್ರತಿಭಟನೆ ಮಾಡಿದ ಮೇಲೆ 14 ನಿವೇಶನಗಳನ್ನು ವಾಪಸ್ ನೀಡಿದ್ದಾರೆ.ಮೂಡ ಹಗರಣ ಪ್ರಕರಣ .30.500 ಕೋಟಿ ಹಗರಣ ನಡೆದಿದೆ. ಅದು ಮುಖ್ಯಮಂತ್ರಿ ಸಿಕ್ಕಿಕೊಳ್ಳುತ್ತಾರೆ. ಎಸ್ ಸಿ ಎಸ್ ಟಿಯ 40 ಸಾವಿರ ಕೋಟಿ ರೂ ಗ್ಯಾರಂಟಿ ಯೋಜನೆಗಳಿಗೆ ಬಳಸಿ, ದಲಿತರಿಗೆ ಅನ್ಯಾಯ ಮಾಡಿದ್ದಾರೆ.  ವಾಲ್ಮೀಕಿ ನಿಗಮದಲ್ಲಿ 178 ಕೋಟಿಯನ್ನು ಆಂದ್ರಪ್ರದೇಶ, ತೆಲಂಗಾಣ ಚುನಾವಣೆಗೆ ವೆಚ್ಚ ಮಾಡಿದ್ದಾರೆ ‌   ಭೋವಿ ಅಭಿವೃದ್ಧಿ ನಿಗಮದಲ್ಲಿ 11 ಕೋಟಿ ರೂ ಅವ್ಯವಹಾರ ಮಾಡಿದ್ದಾರೆ ದಲಿತರ ಮೇಲಿನ ದೌರ್ಜನ್ಯ ಜಾಸ್ತಿಯಾಗಿದ್ದು2422 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಯುವನಿಧಿ ಕೊಟ್ಟಿಲ್ಲ , ನಿರುದ್ಯೋಗ ಸಮಸ್ಯೆ ನಿವಾರಿಸಿಲ್ಲ  ಇದು ಸಾವಿರ ದಿನದ ಆಡಳಿತ ಅಭಿವೃದ್ಧಿನಾ ? ಸಿದ್ದರಾಮಯ್ಯ ವಿರುದ್ದ ಹರಿಹಾಯ್ದರು.

ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ  ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ,  ಓಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ,  ಜಿ.ಪಂ.ಮಾಜಿ ಸದಸ್ಯ ಸಿ.ಎನ್. ಬಾಲರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹಾದೇವಸ್ವಾಮಿ ಹಾಜರಿದ್ದರು.

Leave a Reply

Your email address will not be published. Required fields are marked *