ಅನ್ನ, ಬೆಲ್ಲದದೋಣಿ, ಕಬ್ಬಿಣದ ಕುದೆರುಗಳು ಕೃತಿ ಅದ್ಭುತವಾದವು : ವಿ.ಮನೋಹರ್

ಹನೂರು ಚನ್ನಪ್ಪ ಕಥೆ, ನಾಟಕ, ಕಾದಂಬರಿ ಕುರಿತು ವಿಚಾರ ಸಂಕಿರಣ, ಕವಿಗೋಷ್ಠಿ


ಚಾಮರಾಜನಗರ : ಲೇಖಕ ಹನೂರು ಚನ್ನಪ್ಪ ಅವರ ಅನ್ನ, ಬೆಲ್ಲದದೋಣಿ, ಕಬ್ಬಿಣದ ಕುದುರೆಗಳು ಕೃತಿ ಅದ್ಭುತವಾಗಿದ್ದು, ಅವರ ಯೋಚನಾ ಲಹರಿ,  ಚಿಂತನೆಗಳು ಅದ್ಭುತವಾಗಿದೆ ಎಂದು ಖ್ಯಾತ ಸಂಗೀತ ನಿರ್ದೇಶಕಪಪ ವಿ.ಮನೋಹರ್ ಹೇಳಿದರು.
ನಗರದ ವರನಟ ಡಾ.ರಾಜ್‌ ಕುಮಾರ್ ಕಲಾಮಂದಿರದಲ್ಲಿ ಚೇತನ ಕಲಾವಾಹಿನಿ,
ನೆಲೆ ಹಿನ್ನಲೆ, ಜೋಳಿಗೆ ಪ್ರಕಾಶನ ಅವರ ಸಹಯೋಗದಲ್ಲಿ ನಡೆದ ಹನೂರು ಚನ್ನಪ್ಪ ಅವರ ಕಥೆ, ನಾಟಕ, ಕಾದಂಬರಿ ಕುರಿತ ವಿಚಾರಸಂಕಿರಣ ಹಾಗೂ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಅತ್ಯುತ್ತಮ ಕವಿಯಾಗಬೇಕಾದರೆ ಪತ್ರಿಕೆಗಳು, ಪುಸ್ತಕಗಳನ್ನು ಓದಬೇಕು. ಏಕೆಂದರೆ ಹನೂರು ಚನ್ನಪ್ಪ ಅವರು ಚೆನ್ನಾಗಿ ಓದಿದ ಪರಿಣಾಮದಿಂದ ಅವರು ಒಬ್ಬ ಉತ್ತಮ ಕಥೆಗಾರರು, ನಾಟಕಕಾರರು,
ಕಾದಂಬರಿಗಾರ ಹೊರಹೊಮ್ಮಿದ್ದಾರೆ. ಅವರಿಂದ ಮತ್ತಷ್ಟು ನಾಟಕಗಳು, ಕಾದಂಬರಿ ಬರಲಿ ಎಂದು ಆಶಿಸಿದರು.
ಹನೂರು ಚನ್ನಪ್ಪನವರ ಪುಸ್ತಕಗಳನ್ನು ಓದುತ್ತಾ ಅದ್ಭುತ ಕಾದಂಬರಿಕಾರರ, ಕವಿ, ನಾಟಕಾರರನ್ನು ಕಂಡೆ. ತುಂಬಾ ಖುಷಿಯಾಯಿತು. ಚಾಮರಾಜನಗರ ಜಿಲ್ಲೆಯಲ್ಲಿ ಎಲ್ಲ ತರದ ಸಾಹಿತಿಗಳು ಇದ್ದಾರೆ. ಆದರೆ ಇದು ರಾಜ್ಯ ಮಟ್ಟಕ್ಕೆ ತೆರೆದುಕೊಂಡಿಲ್ಲ. ಅದು ಪ್ರಚಾರದ ಕೊರತೆ ಎಂದು ಭಾವಿಸಿದ್ದೇನೆ. ಜಿಲ್ಲೆಯಲ್ಲಿ ಪ್ರತಿಭಾವಂತರು ಇದ್ದಾರೆ. ಚಾಮರಾಜನಗರ ಭಾಷೆಯ ಸೊಗಡು ಬಹಳ ಒಂದು ರೀತಿಯ ಗಟ್ಟಿಯಾದ ಭಾಷೆಯಾಗಿದೆ. ಹನೂರು ಚನ್ನಪ್ಪನವರ ಅನ್ನ, ಬೆಲ್ಲದದೋಣಿ, ಕಬ್ಬಿಣದ ಕುದುರೆಗಳು ಕೃತಿ ಅದ್ಭುತವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮೈಸೂರು ಪತ್ರಕರ್ತ ಅಂಶಿಪ್ರಸನ್ನಕುಮಾರ್ ಬೆಲ್ಲದದೋಣಿ ಕುರಿತು ಮಾತನಾಡಿ ಬೆಲ್ಲದದೋಣಿ 9 ದೃಶ್ಯಗಳಿರುವ ನಾಟಕವಾಗಿದ್ದು, ದಲಿತ ಕುಟುಂಬವೊಂದರಲ್ಲಿ ನಡೆದಿರುವ ಒಂದು ನೈಜ ಘಟನೆಯಾಗಿದೆ. ಅದೊಂದು ಅದ್ಭುತ ಕೃತಿಯಾಗಿದ್ದು, ಚಾಮರಾಜನಗರ, ಕೊಳ್ಳೇಗಾಲ ಭಾಷೆಯನ್ನೊಳಗೊಂಡಿದೆ. ಹನೂರು ಚನ್ನಪ್ಪನವರು ಅದ್ಭುತ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ಅವರು ಮೂರು ಕೃತಿಗಳು ಅದ್ಭುತವಾಗಿದೆ. ಎಂದರು.
ಮೈಸೂರಿನ ವಿಮರ್ಶಕಿ ಕುಸುಮ ಆಯರಹಳ್ಳಿ ಕಬ್ಬಿಣದ ಕುದುರೆಗಳು ನಾಟಕ ಕುರಿತು ಪ್ರತಿಕ್ರಿಯಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಡಾ.ರೇಣುಕಾದೇವಿ, ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಎಂ.ಪುಟ್ಟಸ್ವಾಮಿ, ಉದ್ಯಮಿ ಶ್ರೀನಿಧಿಕುದರ್, ಕವಿ ಹನೂರು ಚನ್ನಪ್ಪ, ಚೇತನ ಕಲಾವಾಹಿನಿ ಅಧ್ಯಕ್ಷ ಜಿ. ರಾಚಪ್ಪ, ಶಿಕ್ಷಕಿ ಲತಾಪುಟ್ಟಸ್ವಾಮಿ, ನೆಲೆ ಹಿನ್ನಲೆಯ ಕೆ.ಆರ್.ಗೋಪಾಲ್, ಅಂತಾರಾಷ್ಟ್ರೀಯ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ಸಾಹಿತಿಗಳಾದ ಎಂ.ಜವರಾಜು, ಬಸವಣ್ಣ ಮೂಕಳ್ಳಿ, ನಂಜನಹಳ್ಳಿ ಮಹದೇವಪ್ಪ, , ಮೂಳ್ಳೂರು ಶಿವಮಲ್ಲು, ಸಿ.ಲಿಂಗಯ್ಯ, ಎಸ್‌.ಜಿ.ಮಹಾಲಿಂಗಸ್ವಾಮಿ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *