- ವಿಶ್ವರಂಗಭೂಮಿ ದಿನಾಚರಣೆ ಸಮಾರಂಭ ಉದ್ಘಾಟಿಸಿ ನುಡಿ
ಚಾಮರಾಜನಗರ : ಭಾರತೀಯ ಸಂಸ್ಕೃತಿ ಬೆಳವಣಿಗೆ ಸೇರಿದಂತೆ ಎಲ್ಲದಕ್ಕೂ ತಾಯಿಬೇರು ರಂಗಭೂಮಿ ಆಗಿದ್ದು, ಜೀವಂತ ಕಲಾ ಪ್ರಕಾರಗಳಲ್ಲಿ ಒಂದಾಗಿದ್ದು, ಜಿಲ್ಲೆಯಲ್ಲಿ ರಂಗಭೂಮಿ ಕಲೆ, ಕಲಾವಿದರು ಇಂದಿಗೂ ಜೀವಂತವಾಗಿದ್ದು, ಅತ್ಯಂತ ಕ್ರಿಯಾಶೀಲವಾಗಿದೆ ಎಂದು ಸಾಹಿತಿ ಮಹದೇವಶಂಕನಪುರ ಹೇಳಿದರು.
ನಗರದ ರೋಟರಿ ಭವನದಲ್ಲಿ ಚೇತನ ಕಲಾವಾಹಿನಿ, ರೋಟರಿ ಸಂಸ್ಥೆ, ಶ್ರೀಮಹದೇಶ್ವರ ಕಲಾ ಸಂಘ, ಶ್ರೀಬೀರೇಶ್ವರ ಕಲಾ ಸಂಘ, ಶ್ರೀ ಸಿದ್ಧಮಲ್ಲೇಶ್ವರ ಕಲಾ ಸಂಘ ಇವರು ಸಹಯೋಗದಲ್ಲಿ ನಡೆದ ವಿಶ್ವರಂಗಭೂಮಿ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಇಲ್ಲಿ ಕುಳಿತು ಕಾರ್ಯಕ್ರಮದ ರಂಗಗೀತೆ ಗಾಯನವನ್ನು ಕೇಳಿದಾಗ ನಿಜವಾಗಲೂ ಬಹಳ ಹೆಮ್ಮೆ ಎನ್ನಿಸಿತು. ಖುಷಿ ಅನ್ನಿಸಿತು. ನಿಜಕ್ಕೂ ಕೂಡ ರಂಗಭೂಮಿ ಕಲೆ ಮತ್ತು ಕಲಾವಿದರು ಚಾಮರಾಜನಗರದಲ್ಲಿ ಹೇಗೆ ಸಂವೃದ್ಧಿಯಾಗಿ ತಮ್ಮ ಕಲಾಸೇವೆಯನ್ನು ಮಾಡುತ್ತಿದ್ದಾರೆ ಮತ್ತೆ ಅದನ್ನು ಉಳಿಸಿ- ಬೆಳೆಸುವಲ್ಲಿ ಕಾರ್ಯಪ್ರವೃತ್ತರಾಗಿರುವುದು ನನಗೆ ಹೆಮ್ಮೆ ಎನಿಸಿದೆ ಎಂದರು.
ಮೊಟ್ಟಮೊದಲು 1961 ರಲ್ಲಿ ಅಂತರಾಷ್ಟ್ರೀಯ ರಂಗಭೂಮಿ ಸಂಸ್ಥೆಯು ವಿಶ್ವ ರಂಗಭೂಮಿ ದಿನವನ್ನು ಆಚರಣೆ ಮಾಡುವುದನ್ನು ಚಾಲನೆ ಮಾಡಿತು. ಮಾ. 27 ನ್ನು ವಿಶ್ವ ರಂಗಭೂಮಿ ದಿನವನ್ನಾಗಿ ಆಚರಣೆ ಮಾಡಲಾಗುತಿದೆ. ನಾವು ಇತಿಹಾಸ ನೋಡಿದರೆ ಸುಮಾರು 25 ಸಾವಿರ ವರ್ಷಗಳ ಇತಿಹಾಸ ರಂಗಭೂಮಿಗೆ ಇದೆ. ಗ್ರೀಕ್ ದೇಶದಲ್ಲಿ ರಂಗಭೂಮಿ ಬಹಳ ಪ್ರಾಚೀನವಾಗಿ ಆರಂಭವಾಯಿತು. ಎಂದು ನಾವು ಚರಿತ್ರೆಯಲ್ಲಿ ನೋಡುತ್ತೇವೆ. ಜಿಲ್ಲೆಯಲ್ಲಿ ರಂಗಭೂಮಿ ಕಲೆಯು, ಕಲಾವಿದರು ಇಂದಿಗೂ ಜೀವಂತವಾಗಿದ್ದು, ಅತ್ಯಂತ ಕ್ರಿಯಾಶೀಲವಾಗಿದೆ ಎಂದರು.
ಸಿನಿಮಾ ಮಾಧ್ಯಮ ಬಹಳ ಪ್ರಬುದ್ಧವಾಗಿ ಪ್ರಭಾವ ಬೀರುತ್ತಿದೆ. ಹಾಗೆಯೇ ಕಿರುತೆರೆಪ್ರತಿಮನೆಮನೆಯಲ್ಲೂ ಟಿವಿ ಸಿರಿಯಲ್‌ಗಳು ಲಗ್ಗೆಯಿಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ನಾವೆಲ್ಲರೂ ಸಕ್ರಿಯವಾಗಿದ್ದೇವೆ. ಈ ಎಲ್ಲದರ ನಡುವೆ ವಿಶಿಷ್ಟವಾದ ರಂಗಭೂಮಿ ವಿಶಿಷ್ಟವಾದ ಪ್ರಕಾರ, ಕಲೆಯು ಯಾವುದೇ ತರಬೇತಿ ಇಲ್ಲದೆ ನಿಜವಾದ ರಂಗಭೂಮಿ, ಕಲೆ, ಕಲಾವಿದರು ನಿಜವಾದಂತಹ ವೇದಿಕೆಗಳು ಮುಖ್ಯವಾಹಿನಿ ಬರಬೇಕಾದವರು. ದೊಡ್ಡದೊಡ್ಡ ಚಲನಚಿತ್ರಗಳಿಗೇನು ರಂಗಭೂಮಿ ಸಾಹಿತ್ಯ, ಸಂಗೀತ ಕಡಿಮೆ ಇಲ್ಲ. ಎಲ್ಲದಕ್ಕೂ ತಾಯಿಬೇರು ರಂಗಭೂಮಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಚೂಡಾ ಅಧ್ಯಕ್ಷ ಮಹಮ್ಮದ್‌ಅನ್ಸರ್ ಮಾತನಾಡಿ, ಚಾಮರಾಜನಗರ ಜಾನಪರ ತವರೂರಾಗಿದ್ದು, ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಂಗಭೂಮಿಯನ್ನು ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತಿದ್ದಾರೆ. ಎಲ್ಲರಿಗೂ ವಿಶ್ವರಂಗಭೂಮಿ ದಿನಾಚರಣೆ ಶುಭಾಯಶ ಕೋರಿದರು.
ರಂಗ ಸನ್ಮಾನ: ರಂಗಭೂಮಿ ಕಲಾವಿದರಾದ ಡಾ.ರಾಜಶೇಖರಪಂಡಿತ್, ಗೌಡಿಕೆ
ಮಹದೇವಸ್ವಾಮಿ, ಆರ್. ಶ್ರೀಕಂಠಸ್ವಾಮಿ, ಸುಬ್ಬೇಗೌಡ, ಟಿ.ಎಸ್.ಶಿವಕುಮಾರ್, ಮಂಡ್ಯ ಪವಿತ್ರಗೌಡ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡ್ರಾಮಾ ಮಾಸ್ಟರ್ ಆರ್ .ಶಿವಣ್ಣ ಮಂಗಲ, ಕ್ಯಾಷಿಯು ವಿಶ್ವಮಂಡ್ಯ, ತಬಲ ನಿತೀಶ್ ಬಸವಟ್ಟಿ,ಎಂ.ಎನ್.ಮಹದೇವು, ಚೇತನ ಕಲಾವಾಹಿನಿ ಅಧ್ಯಕ್ಷ ಜಿ.ರಾಜಪ್ಪ , ಸುರೇಂದ್ರ, ಗೋವಿಂದರಾಜು, ಶಿವಸ್ವಾಮಿ, ಬೀರೇಗೌಡ, ಸಂಪತ್ ಕುಮಾರ್, ಮಂಜು, ಹುರೇಶ್, ಮಹದೇವಸ್ವಾಮಿ, , ರಾಮಣ್ಣ, ರಾಜೇಶ್, ವೆಂಕಟರಮಣ, ರಾಮಣ್ಣ, ಕೃಷ್ಣ, ನಾಗರಾಜು.. ಮಲ್ಲಿಕಾರ್ಜುನಸ್ವಾಮಿ, ಎಂ.ಎನ್.ರಮೇಶ್, ಇತರರು ಹಾಜರಿದ್ದರು. ಎಲ್ಲ ಕಲಾವಿದರು ರಂಗಗೀತೆ ಸಾದರಪಡಿಸಿದರು.