ಪಾಲಿಟೆಕ್ನಿಕ್ ಕಾಲೇಜು ಗ್ರಂಥಾಲಯ ಕಟ್ಟಡ ಕಾಮಗಾರಿ, ಪ್ರಥಮ ದರ್ಜೆ ಕಾಲೇಜು ಕೊಠಡಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ
ಚಾಮರಾಜನಗರ: ನಗರದ ಸರ್ಕಾರಿ ಪಾಲಿಟೆಕ್ನಿಕ್‍ಕಾಲೇಜಿನಲ್ಲಿಎಸ್‍ಟಿಪಿ, ಟಿಎಸ್‍ಪಿ ಯೋಜನೆಅನುದಾನ 1.12 ಕೋಟಿರೂ.ವೆಚ್ಚದಲ್ಲಿ ನೂತನಗ್ರಂಥಾಲಯ ಹಾಗೂ ನಗರದ ಸರ್ಕಾರಿ ಪ್ರಥಮದರ್ಜೆಕಾಲೇಜಿನಲ್ಲಿ 68 ಲಕ್ಷರೂ.ವೆಚ್ಚದಲ್ಲಿಹೆಚ್ಚುವರಿನೂತನ ಕೊಠಡಿಗಳ ಅಭಿವೃದ್ದಿಕಾಮಗಾರಿಗೆಎಂಎಸ್‍ಐಎಲ್‍ಅಧ್ಯಕ್ಷರು, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿಅವರುಅವರು ಮಾತನಾಡಿ, ಚಾಮರಾಜನಗರಜಿಲ್ಲೆಯಲ್ಲಿ ಪ್ರಥಮದರ್ಜೆ ಕಾಲೇಜುಗಳು, ಎಂಜಿನಿಯರಿಂಗ್, ಪಾಲಿಟೆಕ್ನಿಕ್, ವೈದ್ಯಕೀಯಕಾಲೇಜು, ಕೃಷಿವಿಜ್ಞಾನಕಾಲೇಜು, ಕೇಂದ್ರಿಯ ವಿದ್ಯಾಲಯ, ಸರ್ಕಾರಿಆದರ್ಶ ವಿದ್ಯಾಲಯ, ಚಾಮರಾಜನಗರಕ್ಕೆ ಪ್ರತ್ಯೇಕ ವಿಶ್ವವಿದ್ಯಾನಿಲಯವನ್ನು ಸರ್ಕಾರ ಮಂಜೂರು ಮಾಡಿದ್ದು, ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಯಾವುದೇಕೊರತೆಯೂಇಲ್ಲ. ಶೈಕ್ಷಣಿಕ ಚಟುವಟಿಕೆಗಳು ಹಿಂದೆ ಬಿದ್ದಿಲ್ಲ. ಶಾಲಾಕಾಲೇಜಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಲೇ ಬರಲಾಗಿದೆ.ಜಿಲ್ಲೆಯ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು, ಉನ್ನತಶಿಕ್ಷಣಪಡೆದು, ಸಮಾಜದ ಉತ್ತಮಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.
ನಗರಸಭೆ ಸದಸ್ಯ ಎಂ.ಮಹೇಶ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕಅವಧಿಯಲ್ಲಿ ಸಮಯಪ್ರಜ್ಞೆ ರೂಡಿಸಿಕೊಳ್ಳಬೇಕು ಎಂದರು.
ಜಿಲ್ಲಾಕೇಂದ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆತರಬೇತಿ ಕೇಂದ್ರಗಳನ್ನು ಆರಂಭಿಸಲು ಶಾಸಕರು ಸರ್ಕಾರದ ಗಮನಸೆಳೆಯಬೇಕು ಎಂದುಇದೇಸಂದರ್ಭದಲ್ಲಿ ಮನವಿ ಮಾಡಿದರು.
ಕಾಲೇಜುಅಭಿವೃದ್ದಿ ಸಮಿತಿಸದಸ್ಯ ಶ್ರೀನಿಧಿ, ಸರ್ಕಾರಿ ಪ್ರಥಮದರ್ಜೆಕಾಲೇಜು ಪ್ರಾಂಶುಪಾಲೆಚಂದ್ರಮ್ಮ, ಭೋಗಾಪುರ ವಸತಿಯುಕ್ತ ಪ್ರಥಮದರ್ಜೆಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜು, ಸರ್ಕಾರಿ ಪಾಲಿಟೆಕ್ನಿಕ್‍ಕಾಲೇಜು ಪ್ರಾಂಶುಪಾಲ ಲೋಕೇಶ್, ಕೆಎಚ್‍ಬಿ ಎಇಇ ಮಹೇಶ್, ಇಂಜಿನಿಯರ್ ಕುಸುಮ, ಉಪನ್ಯಾಸಕರು ಹಾಜರಿದ್ದರು.