ಶಾಲಾ ಕಾಲೇಜುಗಳಲ್ಲಿ ನೆಟ್ ಬಾಲ್ ಕ್ರೀಡೆ ಕುರಿತ ಕಾರ್ಯಾಗಾರ ಆಯೋಜನೆಗೆ ಚಿಂತನೆ- ಹಿರಿಯ ಕ್ರೀಡಾಪಟು ವಿ.ಶ್ರೀನಿವಾಸಪ್ರಸಾದ್

ಚಾಮರಾಜನಗರ: ಚಾಮರಾಜನಗರದಲ್ಲಿ ಒಂದೂವರೆ ತಿಂಗಳ ಹಿಂದೆ ನಡೆದ ರಾಜ್ಯಮಟ್ಟದ ನೆಟ್ ಬಾಲ್ ಪಂದ್ಯಾವಳಿ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿಗೆ ಅರಿವು ಮೂಡಿಸುವ ಉದ್ದೇಶದ ಹಿನ್ನೆಲೆ ನೆಟ್ ಬಾಲ್ ಕರ‍್ಯಾ್ಗಾರ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ಕ್ರೀಡಾಸಮಿತಿ ಸದಸ್ಯ, ಜಿಲ್ಲಾ ನೆಟ್ ಬಾಲ್ ಅಸೋಸಿಯೇಷನ್ ಆಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ರಾಜ್ಯಮಟ್ಟದ ನೆಟ್ ಬಾಲ್ ಕ್ರೀಡಾಕೂಟ ಯಶಸ್ವಿಯಾದ ಹಿನ್ನೆಲೆ ಪದಾಧಿಕಾರಿಗಳಿಗೆ ಕೃತಜ್ಞತಾ ಸಭೆ, ಜಿಲ್ಲಾ ಉಪಾಧ್ಯಕ್ಷ, ಆರೋಗ್ಯ ಇಲಾಖೆ ನೌಕರರಾದ ರಾಜೇಂದ್ರ ಅವರಿಗೆ ಬಡ್ತಿ ಪಡೆದ ಸಂಬ0ಧ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಚಾಮರಾಜನಗರ ಹಿಂದಿನಿ0ದಲೂ ಹಲವಾರು ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿರುವ ಕ್ರೀಡಾಪಟುಗಳಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಪ್ರತಿನಿಧಿಸಿರುವ ನೆಟ್ ಬಾಲ್ ಕ್ರೀಡಾಪಟುಗಳು, ಮಂಡ್ಯದ ಗೌತಮ್, ಖೊಖೊ ಕ್ರೀಡಾಪಟು ಕುರುಬೂರು ಚೈತ್ರ, ಅಗ್ನಿವೀರ್ ಯೋಧೆ ದೇಪಾಪುರ ಡಿ.ಸಿ.ಮೌಲ್ಯ ಅವರನ್ನು ಒಂದೆಡೆ ಸೇರಿಸಿ ಸನ್ಮಾನಿಸಿ, ಅಭಿನಂದಿಸಲಾಗುವುದು ಎಂದರು.

ರಾಜ್ಯಮಟ್ಟದ ನೆಟ್ ಬಾಲ್ ಕ್ರೀಡೆ ಯಶಸ್ಸಿಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಿದ್ದು, ಜಿಲ್ಲಾಮಟ್ಟದ ಆಧಿಕಾರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.

ಸಂಘದ ಉಪಾಧ್ಯಕ್ಷ ರಾಜೇಂದ್ರ ಮಾತನಾಡಿ, ಚಾಮರಾಜನಗರದಲ್ಲಿ ಈವರಗೆ ರಾಜ್ಯಮಟ್ಟದ ಯಾವುದೇ ಸಮ್ಮೇಳನ, ಕ್ರೀಡಾಕೂಟಗಳು ಜರುಗಿರಲಿಲ್ಲ. ರಾಜ್ಯಮಟ್ಟದ ಕ್ರೀಡಾಕೂಟ ಇಲ್ಲಿ ಯಶಸ್ವಿಯಾಗುವುದೇ ಎಂಬ ಆತಂಕವಿತ್ತು. ಸ್ಥಳೀಯರ ಸಹಕಾರ, ವಿವಿಧ ಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸಿದ್ದ ೧೨ ತಂಡಗಳು ಎರಡುದಿನಗಳ ಕಾಲ ಅಭೂತಪೂರ್ವ ವಾಗಿ ಆಟವಾಡಿ, ನೆಟ್ ಬಾಲ್ ಯಶಸ್ವಿಯಾಗುವುದಕ್ಕೆ ನೆರವಾದರು. ಇದೇವೇಳೆ ಎಲ್ಲರನ್ನು ಹೃದಯಪೂರ್ವಕವಾಗಿ ಅಭಿನಂದಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಉದ್ಯೋಗದಲ್ಲಿ ಬಡ್ತಿಪಡೆದ ಆರೋಗ್ಯ ಇಲಾಖೆ ನೌಕರರು, ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಹದೇವಪ್ರಸಾದ್, ಸುರೇಶ್ ಕುಮಾರ್, ಮಧು, ಎಂ.ಸಿ.ಮಾಸ್ಟರ್, ಶ್ರೀಧರ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *