ಆಕಾಶವಾಣಿಯ ನಿವೃತ್ತ ನೌಕರರಿಗೆ ಸನ್ಮಾನ

ಮೈಸೂರು ಆಕಾಶವಾಣಿಯಲ್ಲಿ ದೀರ್ಘ ಕಾಲದವರೆಗೆ  ಸೇವೆ ಸಲ್ಲಿಸಿ, ನಿವೃತ್ತರಾದ  ಶ್ರೀಮತಿ ಆರ್ ಪುಷ್ಪಲತಾ, ತಂತ್ರಜ್ಞರು, ತಾಂತ್ರಿಕ ವಿಭಾಗ ಹಾಗೂ ಶ್ರೀ ಮಂಜುನಾಥ್ ಗಿರಿ,  ಎಂ ಟಿ ಎಸ್, ನಿಲಯದ ಆಡಳಿತ ಕಚೇರಿ  ಈ ಇಬ್ಬರು  ನಿಲಯದ ನೌಕರರನ್ನು  ಮೈಸೂರು ಆಕಾಶವಾಣಿಯ  ಸಮುದ್ಯತಾ ಕೇಳುಗರ ಬಳಗದ ಅಧ್ಯಕ್ಷರಾದ ಕಣ್ಣೂರು ವಿ ಗೋವಿಂದಚಾರಿ ರವರು ಕೇಳುಗರೆಲ್ಲರ ಪರವಾಗಿ ಆಕಾಶವಾಣಿಯ ಆವರಣದಲ್ಲಿ ಅಭಿನಂದಿಸಿದರು. 
ಈ ಸಂದರ್ಭದಲ್ಲಿ ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕರಾದ ವಿದ್ಯಾಶಂಕರ್ (ಕಾರ್ಯಕ್ರಮ ವಿಭಾಗ) ಉದ್ಘೋಷಕರಾದ ಡಾ ಮೈಸೂರು ಉಮೇಶ್, ಹಾಗೂ ಕೃಷಿ ರಂಗದ ಕಾರ್ಯಕ್ರಮ ನಿರ್ವಾಹಕರಾದ ಸಿ ಎನ್ ಕೇಶವಮೂರ್ತಿ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *