ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ರವರಿಗೆ ಶ್ರದ್ಧಾಂಜಲಿ

ಚಾಮರಾಜನಗರ: ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ರವರಿಗೆ ಶ್ರೀ ಸಂಜೀವಿನಿ ಟ್ರಸ್ಟ್, ಹಸಿರು ಪಡೆ. ಸದಸ್ಯರು ಶ್ರೀ ಚಾಮರಾಜೇಶ್ವರ ಉದ್ಯಾನವನದಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು.

ಸಾಲು ಮರದ ತಿಮ್ಮಕ್ಕ ಅವರ ಭಾವಚಿತ್ರಕ್ಕೆ ಪುಷ್ಪಅರ್ಪಿಸಿ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ಮಾತನಾಡಿ ಸಾಲುಮರದ ತಿಮ್ಮಕ್ಕ ಆದರ್ಶ ಗುರಿಯೊಂದಿಗೆ ಸರ್ವರಿಗೂ ಮಾದರಿಯಾಗಿದ್ದಾರೆ. ಪ್ರಕೃತಿ ರಕ್ಷಣೆ ಹಾಗೂ ಪ್ರಾಣಿ, ಮರ ಗಿಡ,ಮಾನವ ಕಲ್ಯಾಣಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು. ಸರಳ ಜೀವನದ ಮೂಲಕ ಶ್ರೇಷ್ಠ ಬದುಕು ನಡೆಸಿ, ಪ್ರಕೃತಿಯನ್ನು ಪ್ರೀತಿಸಿ, ಸಮಾಜಕ್ಕೆ ಮಾದರಿಯಾದ ತಿಮ್ಮಕ್ಕನವರಿಗೆ ಸಾವಿಲ್ಲ. ಅವರ ಕಾರ್ಯಗಳು ಸದಾಕಾಲ ಜೀವಂತಿಕೆಯ ಆತ್ಮವಾಗಿ ಸರ್ವರಲ್ಲಿಯೂ ಸದಾಕಾಲ ಸ್ಮರಣೆಯಲ್ಲಿ ಇರುತ್ತದೆ ಎಂದು ತಿಳಿಸಿದರು.

ಸಮಾಜ ಸೇವಕ ಶಿವು ವಿರಾಟ್ ಮಾತನಾಡಿ ಹಸಿರು ಪಡೆ ಟ್ರಸ್ಟ್ ಮೂಲಕ ಸಾಲುಮರದ ತಿಮ್ಮಕ್ಕ ರವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಗೌರವ ಭಾವನೆಯನ್ನು ಮೂಡಿಸಿದೆ. ತಿಮ್ಮಕ್ಕನವರು ನಮ್ಮೆಲ್ಲರಿಗೂ ಪ್ರೇರಣೆ ಎಂದು ತಿಳಿಸಿದರು.

ಹಸಿರುಪಡೆ ಸಂಸ್ಥೆಯ ಸಂಚಾಲಕರಾದ ಸತೀಶ್ ಅವರು ಮಾತನಾಡಿ 8,000ಕ್ಕೂ ಅಧಿಕ ಮರ ಗಿಡಗಳನ್ನು ನೆಟ್ಟು ಸಂರಕ್ಷಿಸಿದ ಸಾಲುಮರದ ತಿಮ್ಮಕ್ಕ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. ಪ್ರಾಣಿ-ಪಕ್ಷ ಗಿಡ ಮರ ಪರಿಸರ ಸಂರಕ್ಷಣೆಗೆ ಆದರ್ಶವಾಗಿದ್ದಾರೆ. ಅವರ ನೆನಪಿನಲ್ಲಿ ಪ್ಲಾಸ್ಟಿಕ್ ಮುಕ್ತ ಸಮಾಜವನ್ನು ಹಾಗೂ ಪ್ರತಿಯೊಬ್ಬರು ಪರಿಸರ ಜಾಗೃತಿಯ ಕಾರ್ಯವನ್ನು ಮಾಡಲು ಪ್ರೇರಣದಾಯಕ ರಾಗಿದ್ದಾರೆ ಎಂದರು.

ಸಂಜೀವಿನಿ ಟ್ರಸ್ಟ್ ಹಾಗೂ ಹಸಿರುಪಡೆಯ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಬಟ್ಟೆಯ ಕೈಚೀಲವನ್ನು ನೀಡುವ ಮೂಲಕ ಶ್ರದ್ದಾಂಜಲಿ ಅನ್ನು ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಪ್ರಕಾಶ್, ಶಿಕ್ಷಕಿ ಭಾಗ್ಯಲಕ್ಷ್ಮಿ ,ನೇತ್ರಾವತಿ ,ಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *