ಚಾಮರಾಜನಗರ.ಜ.೦೫:- ಹಿರಿಯ ಪತ್ರಕರ್ತ ರಾಜ್‌ಕು ಮಾರ್ ಭಾವಸಾರ್ ನಿಧನದ ಗೌರವಾರ್ಥ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆಯನ್ನು ನಗರದಲ್ಲಿ ನಡೆಸಲಾಯಿತು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ರಾಜ್‌ಕುಮಾರ್ ಭಾವ ಸಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬಳಿಕ ಮೌನಾ ಚರಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಸ್ವಾಮಿ ಮಾತನಾಡಿ, ಹಿರಿಯ ಪತ್ರಕರ್ತ ರಾಜ್‌ಕುಮಾರ್ ಭಾವಸಾರ್ ಅವರು ಕಳೆದ ೩೦ ವರ್ಷಗಳಿಗಿಂತಲೂ ಹೆಚ್ಚು ಕಾಲ ಪತ್ರಿಕಾ ರಂಗದಲ್ಲಿದ್ದು ಹಲವು ಪತ್ರಿಕೆಗಳಲ್ಲಿ ಚಾಮರಾಜನಗರ, ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು ಎಂದು ಸ್ಮರಿಸಿದರು.
ಬಹುಮುಖ ಪ್ರತಿಭೆ ಹೊಂದಿದ್ದ ಭಾವಸಾರ್ ಅವರು ಪತ್ರಿಕಾ ರಂಗದಲ್ಲಿ ಕೆಲಸ ನಿರ್ವಹಿಸಿದ್ದರು. ಅವರ ಸೇವೆ ಪತ್ರಿಕಾರಂಗಕ್ಕೆ ಇನ್ನೂ ಬೇಕಾಗಿತ್ತು. ಆದರೆ, ವಿಧಿಯಾಟಕ್ಕೆ ಎಲ್ಲರೂ ತಲೆಬಾಗಲೇ ಬೇಕು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಹಾಗೆಯೇ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಭಾವಸಾರ್ ಕುಟುಂಬಕ್ಕೆ ಸಂಘ ನೆರವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್, ಖಜಾಂಚಿ ಪುಟ್ಟರಾಜು, ರಾಜ್ಯ ಸಮಿತಿ ಸದಸ್ಯ ಮಹೇಂದ್ರ, ಕಾರ್ಯದರ್ಶಿ ಫಾಲಲೋಚನಾ ಆರಾಧ್ಯ, ಉಪಾಧ್ಯಕ್ಷರಾದ ಪ್ರಸಾದ್ ಬದನಗುಪ್ಪೆ, ಚಂದ್ರಶೇಖರ್, ಮಾಜಿ ಅಧ್ಯಕ್ಷರಾದ ದೇವರಾಜ ಕಪ್ಪಸೋಗೆ, ನಿರ್ದೇಶಕರಾದ ಅಬ್ರಹಾಂ ಡಿ.ಸಿಲ್ವ, ಎಸ್.ಎಂ.ನಂದೀಶ್, ಪ್ರಕಾಶ್ ಬೆಲ್ಲದ್, ವಿಜಯ್‌ಕುಮಾರ್, ಪತ್ರಕರ್ತರಾದ ಬನಶಂಕರ ಆರಾಧ್ಯ, ರಾಜೇಶ್ ಬೆಂಡರವಾಡಿ, ಆರ್.ಎಂ.
ಲಿಂಗಪ್ಪ, ರಾ.ಬಾಬು, ಬಸವಣ್ಣ, ಕಾರ್ತಿಕ್, ಪತ್ರಿಕಾ ವಿತರಕ ಶಿವಲಿಂಗಮೂರ್ತಿ ಹಾಜರಿದ್ದರು.