ಚಾ.ನಗರದಲ್ಲಿ ಯುಗಾದಿ ಪ್ರಯುಕ್ತ ಭಗವಾಧ್ವಜಾರೋಹಣ

  • ಭಗವಾಧ್ವಜವು ಸನಾತನ ಧರ್ಮದ ಪವಿತ್ರ ಸಂಕೇತ ; ಎಂ.ರಾಮಚಂದ್ರ

ಚಾಮರಾಜನಗರ: ಚೈತ್ರ ಮಾಸದ ಶುಕ್ಲ ಪಕ್ಷದ ಮೊದಲ ದಿನವಾದ ಯುಗಾದಿ  ಹಬ್ಬದ ಪ್ರಯುಕ್ತ ಶ್ರೀಮಾರಿಗುಡಿ ಸೇವಾ ಸಮಿತಿ
ವತಿಯಿಂದ ಭಗವಾಧ್ವಜಾರೋಹಣ ಮಾಡಲಾಯಿತು.
    ನಗರದ ಮಾರಿಗುಡಿ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತಮಾತೆ, ಶ್ರೀ ಮಹರ್ಷಿ
ವಾಲ್ಮೀಕಿ, ಶೀರಾಮ,
ಫೋಟೋ ಇಟ್ಟು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು ನಂತರ ಭಗವಾಧ್ವಜಾರೋಹಣ ನೆರವೇರಿಸಲಾಯಿತು. ತದ ನಂತರ ಅನ್ನಸಂತರ್ಪಣೆ ಮಾಡಲಾಯಿತು.
    ನಗರಸಭಾ ಅಧ್ಯಕ್ಷ ಸುರೇಶ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಧ್ವಜಾರೋಹಣ ನೆರವೇರಿಸಿದರು.
ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಯುಗಾದಿ – ಹಿಂದೂಗಳ ಹೊಸ ವರ್ಷಾರಂಭವಾಗಿದ್ದು,
ಯುಗಾದಿ ಅಂದರೆ ಚೈತ್ರ ಶುಕ್ಲ ಪ್ರತಿಪದೆ ಅಂದರೆ ಹಿಂದೂಗಳ ಹೊಸ ವರ್ಷಾರಂಭದ ದಿನವಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಶ್ರೀಮಾರಿಗುಡಿ ಸೇವಾ ಸಮಿತಿ ವತಿಯಿಂದ ಭಗವಾಧ್ವಜಾರೋಹಣವನ್ನು ಮಾಡುತ್ತಿರುವುದು ಒಳ್ಳೆಯ ಕೆಲಸವಾಗಿದೆ.
ಭಗವಾ ಅಥವಾ ಕೇಸರಿ ಧ್ವಜವು ಸನಾತನ ಧರ್ಮದ ಪವಿತ್ರ ಸಂಕೇತವಾಗಿದ್ದು, ಶಕ್ತಿ, ಜ್ಞಾನ ಮತ್ತು ತ್ಯಾಗವನ್ನು ಪ್ರತಿನಿಧಿಸುತ್ತದೆ. ಇದು ಹಿಂದೂ ಸಂಪ್ರದಾಯದಲ್ಲಿ ಭಕ್ತಿ ಮತ್ತು ಗೌರವದ ಸಂಕೇತವಾಗಿದೆ ಎಂದರು.
ಶ್ರೀಮಾರಿಗುಡಿ ಸೇವಾ ಸಮಿತಿಯ ಶಿವುವಿರಾಟ್ ಮಾತನಾಡಿ,ಯುಗಾದಿಯು ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷದ ಆರಂಭವಾಗಿದ್ದು, ಚೈತ್ರ ಮಾಸದ ಶುಕ್ಲ ಪಕ್ಷದ ಮೊದಲ ದಿನದಂದು ಆಚರಿಸಲಾಗುತ್ತದೆ. ಇದು ಬ್ರಹ್ಮನು ಸೃಷ್ಟಿಯನ್ನು ಆರಂಭಿಸಿದ ದಿನವೆಂದು ನಂಬಲಾಗಿದೆ ಬೇವು-ಬೆಲ್ಲ ಸವಿಯುವ ಮೂಲಕ ಜೀವನದ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಪಾಠ, ಹೊಸ ಆಶೆ, ಸಮೃದ್ಧಿ ಮತ್ತು ವಸಂತ ಋತುವಿನ ಆಗಮನವನ್ನು ಈ ಹಬ್ಬವು ಸಂಕೇತಿಸುತ್ತದೆ ಎಂದರು.
   ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಸುರೇಶನಾಯಕ,  ಬಿಜೆಪಿ ಎಸ್ ಟಿ ಮೋರ್ಚಾದ ರಾಜ್ಯ
ಕಾರ್ಯದರ್ಶಿ ಜಯಸುಂದರ್, ಆರ್.ಸುಂದರ್, , ವೆಂಕಟರಾವ್ ಸಾಠೆ, ರಾಮಸಮುದ್ರ ಶಿವು ಮಾತನಾಡಿದರು.
ಮಾರ್ಕೇಟ್ ಕುಮಾರ್, ಚಂದ್ರಶೇಖರ್, ಕಿರಣ್, ವೆಂಕಟೇಶ್ ನಾಯಕ, ಆನಂದ್ ಭಗೀರಥ್, ಭಜರಂಗದಳ ಮುಖಂಡ ರಮೇಶ್, ಸತೀಶ್, ಮಾಜಿ ಶಿವಣ್ಣ, ಬಸವಣ್ಣ, ಕೃಷ್ಣ, ಬಂಗಾರನಾಯಕ, ರಾಹುಲ್ ಪಾಷಿ, ರಮೇಶ್, ರಾಮಣ್ಣ, ಪುಟ್ಟಸ್ವಾಮಿ ನಾಯಕ, ನಾಗೇಂದ್ರ, ಹರೀಶ್, ಎಲ್. ಪೃಥ್ವಿ, ಮಣಿ, ಮಹೇಶ್, ನಾಗೇಂದ್ರ, ಬಂಗಾರನಾಯಕ,  ಶಿವಣ್ಣ, ಪ್ರವೀಣ್, ಪ್ರಸನ್ನ, ಮಹೇಶ್, ಶ್ರೀಕಂಠ, ಅರ್ಜುನ,ಕೃಷ್ಣ, ಅಶ್ವಿನ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *