ಮರಿಯಾಲ ಶಾಲೆಯಲ್ಲಿ ಪೋಷಕರಿಗೆ ವಚನ ಗಾಯನ ಸ್ಪರ್ಧೆ

ಉತ್ಸಾಹದಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳ ಪೋಷಕರು1


ಚಾಮರಾಜನಗರ: ಸಮೀಪದ ಮರಿಯಾಲ ಶ್ರೀ ಮುರುಘರಾಜೇಂದ್ರ ಸ್ವಾಮಿ ವಿದ್ಯಾಸಂಸ್ಥೆ (ಸಿಬಿಎಸ್‍ಇ) ಶಾಲೆಯಲ್ಲಿ ಶನಿವಾರ ಪೆÇೀಷಕರಿಗೆ ವಚನ ಗಾಯನ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.
ಮರಿಯಾಲದ ಶಾಲೆಯ ಸಭಾಂಗಣದಲ್ಲಿ ನಡೆದ ಪೋಷಕರು ವಚನ ಗಾಯನ ಸ್ಪರ್ಧೆಗೆ ಕಾಲೇಜಿನ ಪ್ರಾಂಶುಪಾಲ ಗಿರೀಶ್ ಚಾಲನೆ ನೀಡಿದರು. ಬಳಿಕ ಮಾತನಾಡಿದ, ಶಾಲೆಯಲ್ಲಿ ವಚನ ಗಾಯನ ಸ್ಪರ್ಧೆಯನ್ನು ಆಯೋಜನೆ ಮಾಡುವ ಮೂಲಕ ಪೋಷಕರು ಹಾಗೂ ಶಾಲೆಯ ನಡುವೆ ಉತ್ತಮ ಬಾಂಧವ್ಯ ವೃದ್ಧಿಸುವಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಕಲಿಕೆ ಹಾಗೂ ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಉತ್ತೇಜನ ನೀಡುವ ಸಲುವಾಗಿ ಪ್ರಮುಖ ಪಾತ್ರ ವಹಿಸುತ್ತದೆ ಎಂ ದರು.
ಶರಣರ ಸಂದೇಶಗಳಲ್ಲಿ ವಚನಗಳ ಮೂಲಕ ಪ್ರಸ್ತುತ ಪಡಿಸುವ ಜೊತೆಗೆ 12ನೇ ಶತಮಾನದಲ್ಲಿ ಬಸವಾಧಿ ಶರಣರು ವಚನಗಳನ್ನು ರಚನೆ ಮಾಡಿ, ಹಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಅವರ ವಚನಗಳು ಸಮಾಜದಲ್ಲಿ ಅಂಕುಡೋಕುಗಳನ್ನು ತಿದ್ದುವ ಜೊತೆಗೆ ಸಮ ಸಮಾಜ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದವು. ಮೌಢ್ಯ, ಜಾತಿ ಪದ್ದತಿ, ಕಂದಾಚಾರ ಹಾಗೂ ಇತರೇ ಅನಿಷ್ಟ ಪದ್ದತಿಗಳ ವಿರುದ್ದ ವಚನಾಕಾರರು ತಮ್ಮ ವಚನಗಳ ಮೂಲಕ ಬೆಳಕು ಚೆಲ್ಲಿದ್ದರು. ಈಗಾಗಿ ವಚನಗಳು ಈಗಾಲು ಹೆಚ್ಚು ಪ್ರಸ್ತುತವಾಗಿವೆ ಎಂದು ಗಿರೀಶ್ ತಿಳಿಸಿದರು.
ನಂತರ ನಡೆದ ವಚನ ಗಾಯನ ಸ್ಪರ್ಧೆಯಲ್ಲಿ ಪೆÇೀಷಕರಾದ ಮಹದೇವಪ್ರಸಾದ್ ಪ್ರಥಮ ಬಹುಮಾನ, ಶಿವರಾಮ್ ದ್ವಿತೀಯ ಹಾಗೂ ನಂದಿನಿ ತೃತೀಯ ಬಹುಮಾನ ಪಡೆದುಕೊಂಡರು.
ತೀರ್ಪುಗಾರರಾಗಿ ಶಿಕ್ಷಕರಾದ ಮಲ್ಲೇಶ್, ನಾಗಸುಂದ್ರಪ್ಪ ಹಾಗೂ ಉಪಪ್ರಾಂಶುಪಾಲೆÀ ಶಿರಿನ್ ಬಾನು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಪ್ರೇಕ್ಷಕರಾಗಿ ನೆರೆದಿದ್ದರು.

  1. ↩︎

Leave a Reply

Your email address will not be published. Required fields are marked *