ವೀರಮಹಾಸತಿ ಕಾದಂಬರಿ ಒಂದು ಅದ್ಭುತ ಕೃತಿ : ರೇಚಂಬಳ್ಳಿ ದುಂಡುಮಾದಯ್ಯ

  • ವೀರಮಹಾಸತಿ ಕಾದಂಬರಿ ಲೋಕಾರ್ಪಣೆ

ಚಾಮರಾಜನಗರ : ವೀರಮಹಾಸತಿ ಕಾದಂಬರಿ ಒಂದು ವಿಶೇಷತೆ ಹೊಂದಿದ್ದು ಒಂದು ಅದ್ಭುತ ಕೃತಿಯಾಗಿದೆ ಎಂದು ಸಾಹಿತಿ ರೇಚಂಬಳ್ಳಿ ದುಂಡುಮಾದಯ್ಯ ಹೇಳಿದರು.
ತಾಲೂಕಿನ ಕಾಗಲವಾಡಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಹಾಗೂ ಆಸರೆ ಪ್ರಕಾಶನ ಹೊರತಂದಿರುವ ಡಾ.ಶಿವಕುಮಾರ್ ಎಂ.ನಂಜಾಮೇಸ್ತ್ರಿ ರಚಿತ ವೀರಮಹಾಸತಿ ಕಾದಂಬರಿಯ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
    ವೀರಮಹಾಸತಿ ಕಾಗಲವಾಡಿ ಗ್ರಾಮದ ದಲಿತ ಸಮುದಾಯದ ವೀರ ಮಹಿಳೆಯಾಗಿದ್ದರು. ಅವರು ಇತಿಹಾಸ ಕುರಿತು ವೀರಮಹಾಸತಿ ಕಾದಂಬರಿ ಬರೆದಿರುವವರು ಕೂಡ ಇದೆ ಗ್ರಾಮದ ಡಾ. ಶಿವಕುಮಾರ್ ರವರು. ಇದು ಹೆಮ್ಮೆ ತರುವಂತಹ ವಿಚಾರವಾಗಿದೆ. ಅಲ್ಲದೆ ಈ ಕೃತಿಯನ್ನು ಗ್ರಾಮದ ಆಸರೆ ಪ್ರಕಾಶನದ ಬಸವಣ್ಣ ಅವರು ಮುದ್ರಣ ಮಾಡಿರುವುದು  ಒಂದು ವಿಶೇಷವಾಗಿದ್ದು,  ಈ ಪುಸ್ತಕದಲ್ಲಿ ಒಂದು ವಿಶೇಷ ಅರ್ಥ ಅಡಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆಯ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ,
ಶಿವಕುಮಾ‌ರ್ ಎಂ.ನಂಜಾಮೇ ಅವರು ಬರೆದಿರುವ ವೀರಮಹಾಸತಿ ಕಾದಂಬರಿ ಕಾಗಲವಾಡಿ ಗ್ರಾಮದ ಇತಿಹಾಸ ಒಳಗೊಂಡಿರುವ ಒಂದು ಅದ್ಭುತ ಕಾದಂಬರಿ ಆಗಿದೆ ಎಂದರು.
   ಕಾಗಲವಾಡಿ ಗ್ರಾಮದಲ್ಲಿ ನಾವು ಚಿಕ್ಕವರಾಗಿದ್ದಾಗ, ನಮ್ಮ ಹಿರಿಯರು ಮೇಲ್ಪಾತಿಯ ಮಾಸ್ತಿಗುಡಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿದ್ದರು ಆ ಸಂದರ್ಭದಲ್ಲಿ ಏಕೆ ಎಂಬ ಪ್ರಶ್ನೆ ಕಾಡುತ್ತಿರಲಿಲ್ಲ ಆದರೆ ಈ ಐತಿಹಾಸಿಕ ಸಂಗತಿಗಳನ್ನು ತಿಳಿದಾಗ ಮೇಲ್ಪಾತಿಯ ದೇವಸ್ಥಾನಕ್ಕೆ ನಮ್ಮನ್ನ ಬಿಡುತ್ತಿದ್ದ ಸಂದರ್ಭ ಪ್ರಸ್ತುತ ಅರ್ಥವಾಗುವ ರೀತಿಯಲ್ಲಿ ಈ ಗ್ರಂಥವನ್ನು ರಚಿಸಿದ್ದಾರೆ ಎಂದರು.
ಕೃತಿಕಾರ ನುಡಿ : ಡಾ.ಶಿವಕುಮಾರ್ ಎಂ.ನಂಜಾಮೇಸ್ತ್ರಿ
ಮಾತನಾಡಿ, ವೀರ ಮಹಾಸತಿ ಕಾದಂಬರಿ ಪ್ರಾಸ್ತಾವಿಕವಾಗಿ ಶತಶತಮಾನಗಳ ವಸ್ತುಸ್ಥಿತಿಯ
ವಿಚಾರವಾಗಿದೆ. ನನಗೆ ನಮ್ಮ ಅಜ್ಜಿ ಹೇಳುತ್ತಿದ್ದರು. ಅ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತಿದ್ದೆವು. ಅದು ತಲೆಮಾರಿನಿಂದ ತಲೆಮಾರಿಗೆ ನಶಿಸಿ ಹೋಗುತ್ತಿತ್ತು. ವಸ್ತುಸ್ಥಿತಿ ವಿಷಯವನ್ನು ಆಧರಿಸಿ ವೀರಮಹಾತಿ ಕಾದಂಬರಿ ಬರೆಯಲಾಗಿದೆ ಎಂದರು.
       2020ರಲ್ಲಿ ಇಂಡಿಯಾ ಬುಕ್ ಆಫ್ ರೇಕಾರ್ಡ್ ಕಲಾಂಸ್ ವಲ್ಡ್ ರೇಕಾರ್ಡ್ ತೇಜಸ್ ಚಕ್ರವರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಬಸವರಾಜು, ಪತ್ರಕರ್ತ ಕಾಗಲವಾಡಿ ಬಸವಣ್ಣ, ವೀರಮಹಾಸತಿ ಗುಡಿಯ ಮಹದೇವಸ್ವಾಮಿ,ಸಾಹಿತಿ ಪ್ರಸಾದ್ ಅರಳೀಮರ, ಯಜಮಾನರು, ಗ್ರಾ.ಪಂ.ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *