
ಚಾಮರಾಜನಗರ: ಅಖಿಲ ಭಾರತ ಸಂಗೀತ ನೃತ್ಯ ಕಲಾವಿದರ ಒಕ್ಕೂಟ ಮೈಸೂರು ವಿಭಾಗದ ಹೊಸ ಸಮಿತಿ ರಚಿಸಿ ನೂತನ ಪದಾಧಿಕಾರಿಗಳನ್ನು ಅವಿರೋಧ ಆಯ್ಕೆಮಾಡಲಾಯಿತು.
ಇತ್ತೀಚೆಗೆ ಬೆಂಗಳೂರಿನ ಶ್ರೀ ಗುರುರಾಜ ಸಭಾಭವನದಲ್ಲಿ ನಡೆದ ಅಖಿಲ ಭಾರತ ಸಂಗೀತ ನೃತ್ಯ ಕಲಾವಿದರ ಸಂಘದ ಮೊದಲ ವರ್ಷದ ಮಹಾಸಭೆಯು ಸಂಘದ ರಾಷ್ಟ್ರೀಯ ಅಧ್ಯಕ್ಷ ಸಾಯಿನಾರಾಯಣ ಕಲ್ಮಡ್ಕ ಅವರ ನೇತೃತ್ವದಲ್ಲಿ ನಡೆಯಿತು .

ಸಭೆಯಲ್ಲಿ ವಿದುಷಿ ಡಾ.ನಾಗಲಕ್ಷ್ಮಿರವರ ಸಂಚಾಲಕತ್ವದಲ್ಲಿ ಅಖಿಲ ಭಾರತ ಸಂಗೀತ ನೃತ್ಯ ಕಲಾವಿದರ ಒಕ್ಕೂಟ ಮೈಸೂರು ವಿಭಾಗದ ಹೊಸ ಸಮಿತಿ ರಚನೆ ಮಾಡಿದ್ದು ನೂತನ ಅಧ್ಯಕ್ಷರಾಗಿ ವಿದುಷಿ ಡಾ.ಚಿತ್ರಾ ಬಿಳಿಗಿರಿ, ಉಪಾಧ್ಯಕ್ಷರಾಗಿ ವಿದುಷಿ ಗೀತಾ ಎಸ್ , ವಿದುಷಿ ಶೀಲಾ, ಕಾರ್ಯದರ್ಶಿಯಾಗಿ ವಿದ್ವಾನ್ ಗುಣಶಂಕರ್, ಸಹಕಾರ್ಯದರ್ಶಿ ವಿದ್ವಾನ್ ರಜತ್, ನಿರ್ದೇಶಕರಾಗಿ ವಿದುಷಿ ಮೇಘನ, ವಿದ್ವಾನ್ ಮಹೇಶ್, ವಿದುಷಿ ರಮ್ಯ ರಾಘವೇಂದ್ರ, ವಿದುಷಿ ಅದಿತಿ ಭಟ್, ವಿದುಷಿ ಸೌಜನ್ಯ, ವಿದುಷಿ ಸುನಿಧಿ, ಚಂದ್ರಿಕಾ.ಕೆ ಆಶಾ ರಾಣಿ ಕೆ, ಶ್ರಾವಣಿ ಜಿಎಸ್, ಶಶಿಕಲಾ ಕೆ ಎಸ್ ಸಂಗೀತ ನೃತ್ಯ ಕಲಾವಿದರುಗಳು ಅವರನ್ನು ಸಮಿತಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಂಗೀತ ನೃತ್ಯ ಕ್ಷೇತ್ರದಲ್ಲಿ ಹಿರಿಯ ಕಲಾವಿದರ ಸಹಕಾರದೊಂದಿಗೆ ವಿಶ್ವಾಸ ಸಾಮರಸ್ಯದೊಂದಿಗೆ ಕಲಾವಿದರ ಏಳಿಗೆಗಾಗಿ ನಿಸ್ವಾರ್ಥವಾಗಿ ಶ್ರಮಿಸುವುದಾಗಿ ಮಾತೃ ಸಂಸ್ಥಗೆ ವಚನ ನೀಡಲಾಯಿತು. ಹೊಸ ಸಮಿತಿಯನ್ನು ರಾಷ್ಟ್ರೀಯ ಆಡಳಿತ ಮಂಡಳಿಯು ಅಭಿನಂದಿಸಿ ಗೌರವಿಸಿದರು. ಕಲಾವಿದರಿಂದ ಕಲಾವಿದರಿಗೋಸ್ಕರವಿರುವ ಮೈಸೂರು ವಿಭಾಗದ ಒಕ್ಕೂಟಕ್ಕೆ ಸಾಯಿನಾರಾಯಣ ಕಲ್ಮಡ್ಕ ಶುಭ ಕೋರಿದರು.