ಗ್ರಾಮ ಪಂಚಾಯತಿಯಿಂದ ಹಳ್ಳಿಗಳ ಅಭಿವೃದ್ಧಿ ಸಾಧ್ಯ; ಸಿ.ಪುಟ್ಟರಂಗಶೆಟ್ಟಿ

  • ಚಂದಕವಾಡಿಯಲ್ಲಿ ನೂತನ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರ  ಉದ್ಘಾಟನೆ

ಚಾಮರಾಜನಗರ:   ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಗ್ರಾಮ ಪಂಚಾಯಿತಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಎಂಎಸ್ಐಎಲ್ ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
  ತಾಲೂಕಿನ ಚಂದಕವಾಡಿಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ನಿರ್ಮಿಸಿರುವ ನೂತನ ನೂತನ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ,  ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಸುಸಜ್ಜಿತ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಾಣ ಮಾಡಿಕೊಂಡಿರುವುದು ತುಂಬಾ ಸಂತಸವಾಗಿದೆ. ಇದು ಸದ್ಬಳಕೆಯಾಗಲಿ.ಹಳ್ಳಿಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ನಿಜವಾದ ಅಭಿವೃದ್ಧಿ ಸಾಧ್ಯ ಎಂಬುದು ಗಾಂಧೀಜಿಯವರ ದೃಢ ನಂಬಿಕೆಯಾಗಿತ್ತು. ಅವರ ಆಶಯದಂತೆ ಹಳ್ಳಿಗಳ ಅಭಿವೃದ್ಧಿ ಹೊಂದುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ನಲ್ಲೂರು ಸೋಮೇಶ್,
ಜಿ.ಪಂ.ಸಿಇಓ ಮೋನಾರೋತ್ , ಗ್ರಾ.ಪಂ.ಮಾಜಿ ಅಧ್ಯಕ್ಷ  ನಟರಾಜು, ಉಪಾಧ್ಯಕ್ಷೆ  ರಾಜೇಶ್ವರಿ, ಮುಖಂಡ ಕೋಡಿಮೋಳೆ ಗೋವಿಂದಶೆಟ್ಟಿ, ತಾ.ಪಂ.ಇಓ ಎಂ.ಎಸ್.ಗಿರಿಧರ್,
, ಗ್ರಾ.ಪಂ.ಆಡಳಿತ ಅಧಿಕಾರಿ ಕೆಂಪರಾಜು, ಪಿಡಿಓ ಎಂ.ಸಿದ್ದರಾಜು, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಎಸ್.ರಾಜೇಶ್ , ಗ್ರಾ.ಪಂ.ಮಾಜಿ ಸದಸ್ಯರು, ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *