ವಿಶ್ವಕರ್ಮರು ದೇಶಕ್ಕೆ ಕೊಡುಗೆ ನೀಡುವ ಮೂಲಕ ಸಮಾಜಕ್ಕೆ ಮಾದರಿ : ವಿ.ಶ್ರೀನಿವಾಸ್ ಪ್ರಸಾದ್

ಚಾಮರಾಜನಗರ: ವಿಶ್ವಕರ್ಮರು ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾ ವಿಶ್ವಕರ್ಮ ಸಮಾಜದ ಮುಖಂಡರಾದ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

ನಗರದ ಮಂಟೇಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ದಿನಾಚರಣೆಯಲ್ಲಿ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದ ಅವರು, ವಿಶ್ವ ಕರ್ಮರು ದೇಶದ ಸ್ವಾಭಿಮಾನದ ಸಂಕೇತವಾಗಿದ್ದು ಶಿಲ್ಪಕಲೆ, ಗಣಿತ, ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮ ಸಾಧನೆ ಮಾಡುವ ಮೂಲಕ ತಮ್ಮದೆ ಆದ ಛಾಪುಮೂಡಿಸಿ ವಿಶ್ವಮಾನ್ಯತೆಗೆ ಕಾರಣರಾಗಿದ್ದಾರೆ ಎಂದರು.

ತೇತ್ರಾಯುಗ, ದ್ವಾಪರಯುಗದಿಂದ ಇಲ್ಲಿಯವರೆಗೂ ಸಹ ನಮ್ಮ ಸಮಾಜದಲ್ಲಿ ಹಲವಾರು ಸುಂದರವಾದ ಕಲಾಕೃತಿಗಳು, ಅರಮನೆಗಳು, ದೇವಸ್ಥಾನಗಳನ್ನು ಉತ್ತಮವಾಗಿ ನಿರ್ಮಾಣ ಮಾಡುತ್ತಾ ಬಂದಿರುವುದು ಸಂತಸದ ವಿಷಯವಾಗಿದೆ.

ನಮ್ಮ ಸಮಾಜ ಶತಮಾನಗಳಿಂದ ಅಪಾರ ಸಾಧನೆ ಮಾಡಿದ್ದರು ಈವರೆಗೆ ದೊರೆಯಬೇಕಾದ ಮೂಲ ಸೌಲಭ್ಯಗಳು ಇಂದಿಗೂ ದೊರೆಯದೆ ನಾವು ಹಿಂದುಳಿದಿರುವುದು ಬೇಸರದ ಸಂಗತಿ ತಂದು ತಿಳಿಸಿದರು.

ನಮ್ಮಲ್ಲಿರುವ ಶಿಕ್ಷಣದ ಕೊರತೆಯಿಂದ ನಾವು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ವಿಶ್ವಕರ್ಮ ಸಮಾಜನ ಪ್ರತಿಯೊಬ್ಬ ಪೋಷಕರೂ ಸಹ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸಿ, ಉನ್ನತ ಹುದ್ದೆಗಳನ್ನು ಅಲಂಕರಿಸುವುದರ ಜೊತೆಗೆ ಮುಖ್ಯವಾಹಿನಿಗೆ ಬರಬೇಕು ಎಂದರು.

ಸರ್ಕಾರ ನಮ್ಮ ಸಮಾಜವನ್ನು ಗುರುತಿಸುವ ಮೂಲಕ ಸಮುದಾಯವನ್ನು ಮೇಲೆತ್ತುವ ಕೆಲಸವನ್ನು ಮಾಡಬೇಕು. ಎಂದರು.
ನಮಗೆ ನಮ್ಮ ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಬಿಂಬಿಸುವ ಜೊತೆಗೆ ಸಮಾಜದಲ್ಲಿ ಉತ್ತಮ ಹೆಸರನ್ನು ಗಳಿಸಬೇಕು ಎಂದರು.

ಈ ಸಂದರ್ಭದಲ್ಲಿ ರಮೇಶ್ ಆಚಾರ್, ರೇಣುಕೇಶ್, ಆರ್.ಸಿ.ನಾಗರಾಜ್ ಆಚಾರ್, ಟೈಲರ್ ನಾಗರಾಜಾಚಾರ್, ಬಾಬು ನಾಗೇಂದ್ರ ಪ್ರಸಾದ್, ಕಾಶಿ ನಾಗೇಂದ್ರ ಪ್ರಸಾದ್, ಶ್ರೀಕಂಠ ಆಚಾರ್, ಪ್ರಭು, ನಟರಾಜು, ಆಟೋ ನಟರಾಜ್, ಪ್ರಭು ಆಚಾರ್, ರುದ್ರಸ್ವಾಮಿ.ವಿ., ಗಿರೀಶ್, ಸೋಮಶೇಖರ್, ಸ್ಟುಡಿಯೋ ಸ್ವಾಮಿ, ನಂದೀಶ್, ಮಲ್ಲಣ್ಣ ಆಚಾರ್, ಶಶಿರೇಖಾ, ರೂಪಾ, ನಂದಿತಾ ಮತ್ತಿತರರಿದ್ದರು.

Leave a Reply

Your email address will not be published. Required fields are marked *