ಛಲವಾದಿ ಮಹಾಸಭಾದಿಂದ ಮತದಾನ ಜಾಗೃತಿ ಕಾರ್ಯಕ್ರಮ

ವಾಣಿ ಕೆ. ಶಿವರಾಂಗೆ ಟಿಕೆಟ್ ನಿರಾಕರಣೆ : ಛಲವಾದಿ ಮಹಾಸಭಾ ರಾಷ್ಟ್ರೀಯ ಪಕ್ಷಗಳ ವಿರುದ್ದ ಆಕ್ರೋಶ

ಚಾಮರಾಜನಗರ: ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷರಾಗಿದ್ದ ದಿ. ಕೆ. ಶಿವರಾಂ ಅವರ ಸ್ಮರಣಾರ್ಥ ನಗರದಲ್ಲಿ ಛಲವಾದಿ ಮಹಾಸಭಾದ ಜಿಲ್ಲಾ ಘಟಕದಿಂದ ಮತದಾನ ಜಾಗೃತಿ ಕಾರ್ಯಕ್ರಮವ ನಡಯಿತು.

ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದ ರಾಜ್ಯ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು, ರಾಜ್ಯ ಸಂಚಾಲಕ ಹಂಸರಾಜ್ ನೇತೃತ್ವದಲ್ಲಿ ಸಮಾವೇಶಗೊಂಡ ಛಲವಾದಿ ಮಹಾಸಭಾದ ಪದಾಧಿಕಾರಿಗಳು ಅಲ್ಲಿಂದ ಮೆರವಣಿಗೆ ಹೊರಟರು. ಪ್ರತಿಯೊಬ್ಬರು ಮತದಾನ ಮಾಡಿ, ಸಂವಿಧಾನ ಉಳಿಸಿ, ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಕೆ. ಶಿವರಾಂ ಪರ ಘೋಷಣೆ ಕೂಗಿದರು. ಭುವನೇಶ್ವರಿ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು.

ಕಾರ್ಯಕ್ರಮ ನೇತೃತ್ವದ ವಹಿಸಿದ್ದ ಅಣಗಳ್ಳಿ ಬಸವರಾಜು ಮಾತನಾಡಿ, ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷರಾಗಿದ್ದ ಕೆ. ಶಿವರಾಂ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಶ್ರೀನಿವಾಸಪ್ರಸಾದ್ ಅವರಿಗೆ ಟಿಕೆಟ್ ಘೋಷಣೆಯಾದ ಕಾರಣದಿಂದ ಅವರು ಸ್ಪರ್ಧಿಯಿಂದ ಹಿಂದೆ ಸಂಪೂರ್ಣ ಬೆಂಬಲ ನೀಡಿದ್ದರು. ಈ ಬಾರಿ ಅವರಿಗೆ ಬಿಜೆಪಿ ಟಿಕೆಟ್ ನೀಡುವ ನಿರೀಕ್ಷೆಯಲ್ಲಿದ್ದರು.

ಈ ಹಿನ್ನೆಲೆಯಲ್ಲಿ ಕ್ಷೇತ್ರಾದ್ಯಂತ ಪ್ರವಾಸಕೈಗೊಂಡು 1500 ಹಳ್ಳಿಗಳಲ್ಲಿಯು ಛಲವಾದಿ ಮಹಾಸಭಾವನ್ನು ಸಂಘಟನೆ ಮಾಡುವ ಜೊತೆಗೆ ಎಲ್ಲಾ ವರ್ಗಗಳ ಮತದಾರರ ವಿಶ್ವಾಸವನ್ನು ಗಳಿಸಿಕೊಂಡಿದ್ದರು. ಅಷ್ಟರಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ. ಅವರ ಸ್ಥಾನವನ್ನು ತುಂಬುವ ಸಲುವಾಗಿ ಅವರ ಪತ್ನಿ ವಾಣಿ ಕೆ.ಶಿವರಾಂ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೊಟ್ಟು ಕಣಕ್ಕಿಳಿಸುವಂತೆ ಒತ್ತಾಯ ಮಾಡಿದ್ದೇವು.

ಆದರೆ, ಬಿಜೆಪಿ ಎಸ್. ಬಾಲರಾಜು ಅವರಿಗೆ ನೀಡಿದೆ.ಕಾಂಗ್ರೆಸ್ ಪಕ್ಷದಲ್ಲಾದರು ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಅಲ್ಲೂ ಕೈ ತಪ್ಪಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಷ್ಟ್ರಿಯ ಪಕ್ಷಗಳ ವಿರುದ್ದ ಛಲವಾದಿ ಮಹಾಸಭಾ ನಿರ್ಣಯ ಮಾಡುತ್ತೇವೆ. ಇನ್ನು ಮೂರು ದಿನಗಳ ಒಳಗೆ ರಾಷ್ಟ್ರಿಯ ಪಕ್ಷಗಳು ಸೂಕ್ತ ಮಾನದವನ್ನು ಕಲ್ಪಿಸಿದ್ದರೆ ಛಲವಾದಿ ಮಹಾಸಭಾದಿಂದ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ರಾಜ್ಯ ಸಂಚಾಲಕ ಹಂಸರಾಜು ಮಾತನಾಡಿ, ರಾಜ್ಯಾಧ್ಯಂತ ಛಲವಾಧಿ ತಾಕತ್ತು ಪ್ರದರ್ಶನ ಮಾಡಬೇಕಾಗಿದೆ.ರಾಷ್ಟ್ರೀಯ ಪಕ್ಷಗಳು ಕೆ. ಶಿವರಾಂಣ್ಣ ಅವರ ಸಂಘಟನೆಯನ್ನು ಗುರುತಿಸಲು ವಿಫಲವಾಗಿವೆ. ಈ ಎರಡು ಪಕ್ಷಗಳು ವಾಣಿ ಶಿವರಾಂ ಅವರಿಗೆ ಶಿವರಾಂ ಅವರ ಸಂಘಟನೆಯನ್ನು ನೋಡಿ ಸೂಕ್ತ ಸ್ಥಾನಮಾನವನ್ನು ಕಲ್ಪಿಸಿದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ರಮೇಶ್, ಮಾಜಿ ಅಧ್ಯಕ್ಷ ನಾರಾಯಣ್, ನಂದೀಶ್, ರಮೇಶ್, ಮಂಟೇಸ್ವಾಮಿ, ರಂಗಸ್ವಾಮಿ, ನಾಗೇಶ್, ಗುರುಸ್ವಾಮಿ, ಅಭಿ, ಸತೀಶ್, ಮೊದಲಾಧವರು ಇದ್ದರು.

Leave a Reply

Your email address will not be published. Required fields are marked *