- ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ, ವೈಯಕ್ತಿಕ ಪರಿಹಾರ ವಿತರಣೆ, ಹೊಸ ಮನೆ ಭರವಸೆ
ಚಾಮರಾಜನಗರ: ಬುಧವಾರ ಸಂಜೆ ಬಿದ್ದ ಗಾಳಿಮಳೆಗೆ ತಾಲೂಕಿನ ಕಟ್ನವಾಡಿ ಗ್ರಾಮದಲ್ಲಿ ಮರ, ವಿದ್ಯುತ್ ಕಂಬ ಬಿದ್ದ 2 ಮನೆಗಳಿಗೆ ಹಾನಿಯಾಗಿದೆ.
ಗ್ರಾಮದ ಚೆಲುವರಾಜು ಮನೆಗೆ ಮರವೊಂದು ಬುಡಸಮೇತ ಬಿದ್ದು ಹಾನಿ ಮಾಡಿದ್ದು. ಪಕ್ಕದಲ್ಲೇ ಅಂಬಿಕಾ ಅವರ ಮಳೆ ಗೆ ವಿದ್ಯುತ್ ಕಂಬ ಮುರಿದು ಬಿದ್ದು ಹಾನಿ ಉಂಟು ಮಾಡಿದೆ ಯಾವುದೇ ತೊಂದರೆ ಯಾಗಿಲ್ಲ.
ಶಾಸಕ ಭೇಟಿ,: ವಿಷಯ ತಿಳಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಗ್ರಾಮಕ್ಕೆ ಭೇಟಿ ಪರಿಶೀಲಿಸಿ , ಮನೆ ಹಾನಿಗೊಳಗಾದ ಚೆಲುವರಾಜು ಅವರಿಗೆ 10 ಸಾವಿರ, ಅಂಬಿಕಾ ಅವರಿಗೆ 5 ಸಾವಿರ ರೂ. ವೈಯುಕ್ತಿಕ
ಪರಿಹಾರ ವಿತರಿಸಿದರು. ಅಧಿಕಾರಿಗಳೊಂದಿಗೆ ಮಾತನಾಡಿ, ಸರ್ಕಾರದಿಂದ ಸಿಗುವ ಸವಲತ್ತುಗಳು, ಒಳ್ಳೆಯ ಮನೆ ಕೊಡಿಸಿಕೊಡಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಡಿಗಾಲ ನಂಜಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷ ಕೆಕೆ ಹುಂಡಿ ಕುಮಾರ್, ಗ್ರಾ.ಪಂ.ಮಾಜಿ ಸದಸ್ಯ ದೊರೆಸ್ವಾಮಿ, ಗುರುಸ್ವಾಮಿ, ಪ್ರಭುಸ್ವಾಮಿ, ವಿಷ್ಣುಪ್ರಸಾದ್ ಇತರರು ಹಾಜರಿದ್ದರು.