ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿ : ಮನೋಜ್ ಪಟೇಲ್

ಚಾಮರಾಜನಗರ: ಮಹಿಳೆಯರು ಕೌಶಲ್ಯ ತರಬೇತಿಯನ್ನು ಪಡೆದು ಸ್ವಂತ ಉದ್ಯೋಗವನ್ನು ಕೈಗೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಬೇಕು ಎಂದು ನಗರಸಭಾ ಸದಸ್ಯ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಮನೋಜ್ ಪಟೇಲ್ ತಿಳಿಸಿದರು.
ನಗರದ 10ನೇ ವಾರ್ಡಿನ ಕರಿನಂಜನಪರದಲ್ಲಿ ನಗರೋತ್ಪಾನೆ ಯೋಜನೆಯಡಿ 4ನೇ ಹಂತದ ಆಂದಾಜು ವೆಚ್ಚದಲ್ಲಿ ನಿರುದ್ಯೋಗಿ ಮಹಿಳೆಯರಿಗೆ ಹೊಲಿಗೆ ಯಂತ್ರ ಹಾಗೂ ಲ್ಯಾಪ್‍ಟಾಪ್ ವಿತರಣೆ ಮಾಡಿ ಅವರು ಮಾತನಾಡಿದರು.

ನಗರಸಭೆಯ ವ್ಯಾಪ್ತಿಯ 10ನೇ ವಾರ್ಡಿಗೆ 8 ಹೊಲಿಗೆ ಯಂತ್ರ ಹಾಗೂ 8 ಲ್ಯಾಪ್‍ಟಾಪ್‍ಗಳನ್ನು ನೀಡಲಾಗಿದ್ದು, ಇದರಲ್ಲಿ ಅರ್ಹ ಬಡವರು ಹಾಗೂ ಹೊಲಿಗೆ ಯಂತ್ರ ತರಬೇತಿ ಪಡೆದಿರುವರು ಸ್ವಂತ ಉದ್ಯೋಗವನ್ನು ಹೊಂದಿ ಆರ್ಥಿಕವಾಗಿ ಸಬಲತೆಯನ್ನು ಸಾಧಿಸುವ ನಿಟ್ಟಿನಲ್ಲಿ ಸವಲತ್ತು ವಿತರಣೆ ಮಾಡಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಅರ್ಥಿಕವಾಗಿ ಅಭಿವೃದ್ದಿ ಹೊಂದುವ ಜೊತೆಗೆ ಕುಟುಂಬವನ್ನು ಪ್ರಗತಿಯತ್ತ ಕೊಂಡೊಯ್ಯಬೇಕು ಎಂದು ಮನೋಜ್ ಪಟೇಲ್ ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಕೂಸಪ್ಪ, ವಿರೇಂದ್ರ, ಶಿವು ಇತರರು ಇದ್ದರು.

Leave a Reply

Your email address will not be published. Required fields are marked *