ಸಂತ ಜೋಸೆಫರ ಮಹಿಳಾ ಕಾಲೇಜಿನಲ್ಲಿ ಸಡಗರ ಸಂಭ್ರಮದ ಮಹಿಳಾ ದಿನಾಚರಣೆ

ಮೈಸೂರು: ರಮ್ಮನಹಳ್ಳಿಯ ಸಂತ ಜೋಸೆಫರ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಸಂಸ್ಥೆಯ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಅತ್ಯಂತ ಸಂಭ್ರಮ ಸಡಗರದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಪೃಥ್ವಿ ಎಸ್ ಶಿರಹಟ್ಟಿ, ಪ್ರಾಂಶುಪಾಲ ಇವರು ವಹಿಸಿದ್ದರು.

ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸೋನಿಯಾ ಅವರು ಮಾತನಾಡಿ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ವ್ಯಾಪಕ ಥೀಮ್ “ಮಹಿಳೆಯರಲ್ಲಿ ಹೂಡಿಕೆ ಮಾಡಿ: ಪ್ರಗತಿಯನ್ನು ವೇಗಗೊಳಿಸಿ.” ಈ ಥೀಮ್ ಮಹಿಳಾ ನಾಯಕತ್ವದ ಬೆಳವಣಿಗೆ, ಶಿಕ್ಷಣ, ಆರ್ಥಿಕ ಸಬಲೀಕರಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡುವ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ. ಸಮಾನತೆಗಾಗಿ ಮಹಿಳೆಯರ ಹೋರಾಟದ ಕಥೆಯು ಒಂದೇ ಸ್ತ್ರೀವಾದಿ ಅಥವಾ ಯಾವುದೇ ಒಂದು ಸಂಘಟನೆಗೆ ಸೇರಿಲ್ಲ ಆದರೆ ಮಾನವ ಹಕ್ಕುಗಳ ಬಗ್ಗೆ ಕಾಳಜಿ ವಹಿಸುವ ಎಲ್ಲರ ಸಾಮೂಹಿಕ ಪ್ರಯತ್ನಗಳಿಗೆ ಸೇರಿದೆ ಎಂದು ತಿಳಿಸಿದರು.

ಮಹಿಳಾ ದಿನದ ಅಂಗವಾಗಿ ಎಲ್ಲ ಮಹಿಳಾ ಅಧ್ಯಾಪಕರು ಮತ್ತು ಅದ್ಯಾಪಕೇತರರಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬಲೂನ್‍ನಲ್ಲಿ ಕಪ್ಪನ್ನು ಬ್ಯಾಲೆನ್ಸ್ ಮಾಡುವ ಸ್ಪರ್ಧೆಯಲ್ಲಿ ಸಹಾಯಕ ಅಧ್ಯಾಪಕರಾದ ಕುಮಾರಿ ಸಿಂಧು,ಆರ್ ಅವರು ಮೊದಲ ಬಹುಮಾನ, ಸಹಾಯಕ ಅಧ್ಯಾಪಕರಾದ ಶ್ರೀಮತಿ ಶೋಭಾ ಡಿ ದ್ವಿತೀಯ ಬಹುಮಾನ, ಅದ್ಯಾಪಕೇತರ ವರ್ಗದ ಶ್ರೀಮತಿ ಸುಶೀಲಾ ಪ್ರಥಮ, ಶ್ರೀಮತಿ ರುಕ್ಮಿಣಿ ದ್ವಿತೀಯ ಪ್ರಶಸ್ತಿಯನ್ನು ಗಳಿಸಿದ್ದಾರೆ.

ಪೇಪರ್ ಕಪ್ಪುಗಳನ್ನು ಜೋಡಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ನಗ್ಮ ಸುಲ್ತಾನ, ದ್ವಿತೀಯ ಬಹುಮಾನವನ್ನು ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಪುಷ್ಪಾ, ಅಧ್ಯಾಪಕೇತರ ವರ್ಗದಲ್ಲಿ ಪ್ರಥಮ ಬಹುಮಾನವನ್ನು ಶ್ರೀಮತಿ ಸುಶೀಲ, ದ್ವಿತೀಯ ಬಹುಮಾನವನ್ನು ಶ್ರೀಮತಿ ರುಕ್ಮಿಣಿ ಪಡೆದುಕೊಂಡಿದ್ದಾರೆ.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಪ್ರಾಂಶುಪಾಲರಾದ ಡಾ. ಪೃಥ್ವಿ ಎಸ್ ಶಿರಹಟ್ಟಿ ರವರು ಮಾತನಾಡಿ, ಜಗತ್ತು ಇಂದು ತಂತ್ರಜ್ಞಾನ ಮತ್ತು ಬಾಹ್ಯಕಾಶ ರಂಗದಲ್ಲಿ ಎತ್ತರೆತ್ತರಕ್ಕೆ ಏರಿದ್ದರೂ ಕೂಡ ಹೆಣ್ಣು ಮಕ್ಕಳಿಗೆ ಇಂದಿಗೂ ಕೂಡ ಎಲ್ಲ ರಂಗಗಳಲ್ಲಿ ಮುಕ್ತವಾಗಿ ಭಾಗವಹಿಸಿ ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳುವಷ್ಟು ಅವಕಾಶಗಳನ್ನು ಈ ಸಮಾಜ ಇಂದಿಗೂ ಕೊಟ್ಟಿಲ್ಲ. ಆದರೆ ಸಿಕ್ಕಷ್ಟೇ ಅವಕಾಶಗಳಲ್ಲಿ ಹೆಣ್ಣು ತನ್ನನ್ನು ತಾನು ಸಾಭೀತು ಪಡಿಸಿಕೊಳ್ಳುತ್ತಲೇ ಬರುತ್ತಿದ್ದಾಳೆ. ಇಂದು ಪುರುಷರನ್ನು ಹಿಂದಿಕ್ಕಿ ಮುಂದೆ ಸಾಗುತ್ತಿರುವ ಮತ್ತು ತಮ್ಮ ಇರುವಿಕೆಯನ್ನು ಸಾಕ್ಷಿಕರಿಸಿಕೊಳ್ಳುತ್ತಲೇ ಬರುತ್ತಿರುವುದು ನಿಜಕ್ಕೂ ಪ್ರಶಂಸನೀಯ ಸಂಗತಿಯೇ ಸರಿ ಎಂದರು.

ಈ ಸಂದರ್ಭದಲ್ಲಿ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಅವಂತಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪುಷ್ಪಾ, ಭಾಷಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಹಾದಿಯ, ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ರೆಚಾಲ್ ರೆಸ್ಲಿನಾ, ಶ್ರೀಮತಿ ಪುಷ್ಪಾ, ಸೇರಿದಂತೆ ಎಲ್ಲ ವಿಭಾಗಗಳ ಅಧ್ಯಾಪಕ ವರ್ಗದವರು ಹಾಜರಿದ್ದರು.

Leave a Reply

Your email address will not be published. Required fields are marked *