- ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ
ಚಾಮರಾಜನಗರ : ಮಹಿಳೆಯರ ಶಕ್ತಿ ಈ ಜಗತ್ತಿನ ಶಕ್ತಿ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾನಿರ್ದೇಶಕ ವೆಂಕಟೇಶ್ ಹೇಳಿದರು.
ನಗರದ ವರ್ತಕರ ಭವನದಲ್ಲಿ ಕರ್ನಾಟಕ ಸರ್ಕಾರ ಪ್ರದೇಶ ಮಟ್ಟದ ಒಕ್ಕೂಟಗಳು (ಡೇ-ನಲ್ಮ್) ನಗರಸಭೆ, ಚಾಮರಾಜನಗರ ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಇವರ ಸಹಯೋಗದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿವರ್ಷ ನವೆಂಬರ್ ತಿಂಗಳನ್ನು ಕನ್ನಡ ತಿಂಗಳು ಎಂದು ಇಡೀ ಕನ್ನಡಿಗರೆಲ್ಲ ಮನಮನೆಗಳಲ್ಲಿ ವಿಜೃಂಭಣೆಯಿಂದ ಆಚರಿಸುತ್ತೇವೆ. ಹಾಗೆಯೇ ಮಾರ್ಚ್ ತಿಂಗಳನ್ನು ಮಹಿಳಾ ದಿನಾಚರಣೆಯನ್ನಾಗಿ ಆಚರಿಸುತ್ತೇವೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸುತ್ತೇವೆ, ಏಕೆ ಎಲ್ಲ ಮಹಿಳೆಯರನ್ನು ಒಂದು ಕಡೆ ಸೇರಿ ಮಹಿಳೆಯರನ್ನು ಕುರಿತು ಮಾತನಾಡುತ್ತೇವೆ ಎಂದರೆ ಮಹಿಳೆಯರ ಶಕ್ತಿ ಈ ಜಗತ್ತಿನ ಶಕ್ತಿ. ಎಲ್ಲಿ ಮಹಿಳೆಯರ ಮುಖದಲ್ಲಿ ನಗು, ಸಂತಸ, ಸೋಜಿಗ, ಸಂಭ್ರಮ ಕಾಣತ್ತೋ ಆದಿನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅದು ಇವತ್ತು ಇಲ್ಲಿ ನಮಗೆ ಭಾಸವಾಗುತ್ತಾ ಇದೆ ಎಂದರು.
1910ರಲ್ಲಿ ಅಮೇರಿಕಾ ದೇಶದಲ್ಲಿ ಕಾರ್ಮಿಕ ಒಕ್ಕೂಟದ ಮೂಲಕ ಆರಂಭವಾದ ಮಹಿಳಾ ಚಳವಳಿ ಹೋರಾಟ ನಡೆದು ಮಹಿಳೆಯರ ತ್ಯಾಗ, ಬಲಿದಾನ, ಮಹಿಳಾಸಬಲೀಕರಣಗಳ ಕುರಿತು ಮಾತನಾಡಬೇಕು ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಅಬಲೆಯಲ್ಲ ಸಬಲೆ, ಮಹಿಳೆ ಮನೆಗೆ, ಪುರುಷ ಹೊಲಕ್ಕೆ ಎಂಬ ಮಾತು ಸುಳ್ಳಾಗಬೇಕು, ಮಹಿಳೆಯರ ಸಬಲೀಕರಣ ಆಗಬೇಕು. ಮಹಿಳೆಯರು ಯಾವ ಹಂತದಲ್ಲಿ ದಾಪುಗಾಲು ಇಟ್ಟಿದ್ದಾರೆ ಎಂಬುವುದನ್ನು ಸಾಬೀತುಪಡಿಸಬೇಕು, ಮಹಿಳೆಯರನ್ನು ಗುಣಗಾನ ಮಾಡಬೇಕು ಎಂಬ ವಿಚಾರವನ್ನಿಟ್ಟುಕೊಂಡು 1975ರಲ್ಲಿ ವಿಶ್ವಸಂಸ್ಥೆಯು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜಾರಿಗೆ ತಂದಿದ್ದು, ಅಲ್ಲಿಂದ ಇಲ್ಲಿಯವರಗೆ ಮಾರ್ಚ್ 8 ನ್ನು ಅಂತಾರಾಷ್ಟ್ರೀತಂ ಮಹಿಳಾ ದಿನಾಚರಣೆಯನ್ನಾಗಿ ಆಚರಿಸುತ್ತಾ ಇಡೀ ಮಾರ್ಚ್ ತಿಂಗಳಲ್ಲಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿವೆ ಎಂದರು.
ಇಡೀ ಸಂಸಾರ ಆಧರಿತ ಹೆಣ್ಣಿನಿಂದ : ಬಸವರಾಜೇಂದ್ರ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ. ಶ್ವೇತಾ ಶಶಿಧರ್ ಮಾತನಾಡಿ, ದಿನಾಚರಣೆ ಮಾರ್ಚ್ ಒಂದು ತಿಂಗಳಲ್ಲ, ಪ್ರತಿ ದಿನವು ಮಹಿಳಾ ದಿನಾಚರಣೆ. ಮಹಿಳೆ ಇಲ್ಲದೆ ಬಾಳು ಇಲ್ಲ. ಮಹಿಳೆ ಇದ್ದರೆ ಎಲ್ಲವೂ ಸಾಕಾರವಾಗುತ್ತದೆ. ಇಡೀ ಸಂಸಾರ ಆಧರಿತವಾಗಿರುವುದು ಹೆಣ್ಣಿನಿಂದ. ಹೆಣ್ಣು ಇದ್ದರೆ ಇಡೀ ಸಂಸಾರದ ಕಣ್ಣು ಆಗುತ್ತಾಳೆ. ಹೆಣ್ಣು ಇಲ್ಲದಿದ್ದರೆ ಇಡೀ ಸಂಸಾರವೇ ಅಸ್ತವ್ಯಸ್ತವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರಸಭಾ ಪೌರಾಯುಕ್ತ ಪರಶುರಾಮ್‌ಛಲವಾದಿ ಮಾತನಾಡಿ, ಮಹಿಳೆ ಅಬಲೆಯಲ್ಲ ಸಬಲೆಯಾಗಿದ್ದು ನಾಲ್ಕು ಗೋಡೆಗೆ ಸೀಮಿತವಾಗದೆ ಇಂದು ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ಸಾಧನೆ ಮಾಡುತ್ತಿದ್ದಾರೆ ಎಂದರು.
ಸನ್ಮಾನ: ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಸುರೇಖಾ, ಕಾರ್ಯಪಾಲಕ ಅಭಿಯಂತರಾದ ರೂಪ, ಯೂನಿಯನ್ ಬ್ಯಾಂಕ್ ಕಾವ್ಯಶ್ರೀ,
ಸಿಆರ್ಪಿ ಗಳಾದ ಜ್ಯೋತಿ, ನರ್ಗೀಸ್ ಬಾನು, ರೂಪ ಅವರನ್ನು ಸನ್ಮಾನಿಸಲಾಯಿತು.
ಸಮುದಾಯ ಸಂಘಟನಾ ಅಧಿಕಾರಿ ವೆಂಕಟನಾಯಕ್ ಸ್ವಾಗತ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಇಲಾಖೆ ವಿಜಯ, ಸಹಾಯಕ ನಿರ್ದೇಶಕ ಮಲ್ಲೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರಾದ ರಾಮಚಂದ್ರ, ಶ್ರೀನಿವಾಸ, ರೂಪ,ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಸುರೇಖಾ, ನಗರ ಮಟ್ಟದ ಒಕ್ಕೂಟದ ಅಧ್ಯಕ್ಷರಾದ ರೂಪ, ಕಮಲ ಹಾಗೂ ಅಭಿಯಾನ ವ್ಯವಸ್ಥಾಪಕರು, ಸಮುದಾಯ ಸಂಘಟನಾಧಿಕಾರಿಗಳು, ಮಲ್ಟಿ ಟಾಸ್ಕಿಂಗ್ ಆಫೀಸಿಯಲ್ಸ್ ಮತ್ತು ಒಕ್ಕೂಟಗಳ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.