ಚಾಮರಾಜನಗರ: ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಜಾರಿಮಾಡಿರುವ ಸೌಲಭ್ಯಗಳ ಬಗ್ಗೆ ಕಾರ್ಮಿಕ ವಿಭಾಗದ ಪದಾಧಿಕಾರಿಗಳು ಮನವರಿಕೆ ಮಾಡಿಕೊಡಬೇಕು ಎಂದು ಕೆಪಿಸಿಸಿ ರಾಜ್ಯ ಕಾರ್ಮಿಕ ವಿಭಾಗದ ಅಧ್ಯಕ್ಷ ಪುಟ್ಟಸ್ವಾಮಿಗೌಡ ಸಲಹೆ ನೀಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಮಿಕ ವಿಭಾಗ ಜಿಲ್ಲಾಘಟಕದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಇಲಾಖೆಯಿಂದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಬಹುತೇಕ ಕಾರ್ಮಿಕರಿಗೆ ಇಲಾಖೆ ಕಾರ್ಯಕ್ರಮದ ಬಗ್ಗೆ ಅರಿವಿರುವುದಿಲ್ಲ. ಇಲಾಖೆಯಲ್ಲಿ 18 ಯೋಜನೆಗಳಿದ್ದು, ತಾವುಗಳು ಅಸಂಘಟಿತ ವಲಯದ ಅರ್ಹ ಕಾರ್ಮಿಕರನ್ನು ಭೇಟಿಮಾಡಿ, ಅವರಿಗೆ ಸ್ಮಾರ್ಟ್‍ಕಾರ್ಡ್ ಸೇರಿದಂತೆ ಇತರೇ ಸೌಲಭ್ಯ ಕೊಡಿಸುವ ಕೆಲಸ ಮಾಡಬೇಕು, ಕಾರ್ಮಿಕರನ್ನು ಮೇಲೆತ್ತುವ ಕೆಲಸಮಾಡುವುದರಿಂದ ಪಕ್ಷದ ಬಲವರ್ಧನೆಯಾಗಲಿದೆ ಎಂದರು.
ಉಪಾದ್ಯಕ್ಷೆ ಹರಿಣಿಗೌಡ, ಕಾರ್ಯದರ್ಶಿ ಪಂಕಜ, ಕಾರ್ಮಿಕವಿಭಾಗದ ಜಿಲ್ಲಾ ಉಸ್ತುವಾರಿ ಕೊಳ್ಳೇಗಾಲ ಕಿರಣ್, ಜಿಲ್ಲಾ ಕಾರ್ಮಿಕ ಸಂಘದ ಅಧ್ಯಕ್ಷ ಎಸ್‍ಮಹೇಶ್, ಕಾರ್ಯಾಧ್ಯಕ್ಷರಾದ ಪಿ,ಕುಮಾರ್‍ನಾಯಕ್, ನಾಗೇಂದ್ರಸ್ವಾಮಿ, ಕೆರೆಹಳ್ಳಿಕುಮಾರ್,ರವಿಗೌಡ, ಮಧುಸೂದನ್,ಜಿಲ್ಲಾ ಉಪಾಧ್ಯಕ್ಷೆ ಬಿಕೆ ರವಿಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ನಾಗರತ್ನ, ನಗರಸಭಾ ಸದಸ್ಯರಾದ ಚಿನ್ನಮ್ಮ, ಸ್ವಾಮಿ,ಬ್ಲಾಕ್, ಟೌನ್ ಗ್ರಾಮಾಂತರ ಮಹಿಳಾ ಅಧ್ಯಕ್ಷೆ ನಾಗಶ್ರೀ, ಬಾಗ್ಯಮ್ಮ, ಗ್ರಾಮಾಂತರ ಮಹಿಳಾ ಅಧ್ಯಕ್ಷೆ ಶಕುಂತಲಾ, ನಸ್ರುಲಾಖಾನ್, ಪಕ್ಷದ ಮುಖಂಡರು ಕಾರ್ಯಕರ್ತರು ಹಾಜರಿದ್ದರು.