ಕೊನೆಗೂ ನನ್ನ ಮಗನನ್ನು ಉಳಿಸಿಕೊಟ್ಟಿರಿ ಸರ್’….!

  • ಮಗನ ಮನಃ ಪರಿವರ್ತನೆಯಿಂದ ತಂದೆ ಕಣ್ಣಲ್ಲಿ ಆನಂದ ಭಾಷ್ಪ
  • ಬದುಕು ಬದಲಿಸಿದ ಬಸವಮಾರ್ಗ !

“ಕೊನೆಗೂ ನನ್ನ ಮಗನನ್ನು ಉಳಿಸಿಕೊಟ್ಟು ಬಿಟ್ಟಿರಿ ಸರ್! ನಿಮಗೆ ಕೋಟಿ, ಕೋಟಿ ಧನ್ಯವಾದಗಳು ! ನಮ್ಮಜೀವಇರುವತನಕ ನಿಮ್ಮನ್ನು ಮರೆಯುವುದಿಲ್ಲ.É’ ಎಂದು ವೃದ್ಧರೊಬ್ಬರುಕಣ್ಣೀರುತುಂಬಿಕೊಂಡು ನನ್ನತ್ತಕೈಮುಗಿಯುತ್ತ ಬಂದರು.! ನನಗೆ ಆಶ್ಚರ್ಯವೂಆಯಿತು. ! ಈ ವ್ಯಕ್ತಿಯಾಕೆ ಈ ಮಾತುಗಳನ್ನು ಆಡುತ್ತ, ನನ್ನತ್ತ ಬರುತ್ತಿದ್ದಾರೆಎಂದು. ಅವರು ಮತ್ತುಅವರ ಮಗನನ್ನು ಕೂರಿಸಿ ಮಾತಾಡಿಸಿದಾಗಲೇ ನನಗೆ ತಿಳಿದಿದ್ದು, ನಿಜ ಸತ್ಯ ಏನು ಎಂದು.! ನಿಜಕ್ಕೂ ಆಗ ಅವರಿಗಿಂತ ಹೆಚ್ಚಿನಖುಷಿಯಾದದ್ದು ನನಗೆ !

ಹೌದು… ಬಾಗಲಕೋಟೆಜಿಲ್ಲೆಯ ಬಾದಾಮಿಯರುದ್ರಯ್ಯ ಸ್ವಾಮಿಅವರುಅವರ ಮಗನೊಂದಿಗೆ ಇತ್ತೀಚೆಗಷ್ಟೆ ನಮ್ಮ ಬಸವಮಾರ್ಗಕಚೇರಿಗೆ ಬಂದಿದ್ದರು. ತುಂಬಾ ಹೊತ್ತು ನನ್ನ ಬರುವಿಕೆಗಾಗೇ ಕಾದುಕುಳಿತ್ತಿದ್ದರು ಎಂದು ನಮ್ಮ ಸಿಬ್ಬಂದಿ ಮೂಲಕ ನನಗೆ ತಿಳಿಯಿತು. ಆಗ ನಾನು ಮಾತಾಡಿಸಿದಾಗ ಅವರ ಮತ್ತು ವ್ಯಸನಕ್ಕೆದಾಸನಾಗಿದ್ದಅವರ ಮಗನ ಜೀವನದ ವೃತ್ತಾಂತಗಳನ್ನು ನನ್ನ ಜೊತೆಹಂಚಿಕೊಂಡರು..! ವ್ಯಸನಕ್ಕೆದಾಸನಾದ ಮಗ, ಕುಡಿತಅವರ ಮನೆಯಲ್ಲಿಉಂಟು ಮಾಡಿದಅಶಾಂತಿ, ಅವರು ಪಟ್ಟ ಪಾಡು ಏನು ಅಂತಾ ನೀವು ತಿಳಿದುಕೊಳ್ಳಬೇಕೆ. ಈ ನೈಜ್ಯಕಥೆಯನ್ನುಅವರಿಂದಲೇ ಕೇಳಿ…!

ಬಾದಾಮಿಯಿಂದ ಬೆಂಗಳೂರಿಗೆ ಬಂದಕುಟುಂಬ : “ನನಗೆ ಮೂವರು ಮಕ್ಕಳು ಸಾರ್ ! ಇಬ್ಬರುಗಂಡು, ಒಂದು ಹೆಣ್ಣು. ದೊಡ್ಡ ಮಗನಿಗೆ ಆನಾರೋಗ್ಯ ಕಾಡುತ್ತಿತ್ತು. ನಮ್ಮ ಭಾಗದಲ್ಲಿ ಅವನಿಗೆ ಗುಣಮಟ್ಟದಚಿಕಿತ್ಸೆ ಸಿಗುತ್ತಿರಲಿಲ್ಲ. ಹಲವಾರು ವರ್ಷಗಳ ಕಾಲ ಬೆಂಗಳೂರಿನಲ್ಲಿ ಚಿಕಿತ್ಸೆಕೊಡಿಸುತ್ತಿದ್ದೆ. ಕೊನೆಗೆ ಅಲ್ಲಿಂದಇಲ್ಲಿಗೆ, ಇಲ್ಲಿಂದಅಲ್ಲಿಗೆಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಓಡಾಟದಿಂದ ಮಗ ಅನಾವಶ್ಯಕವಾಗಿ ಸಂಕಷ್ಟ ಎದುರಿಸುತ್ತಿದ್ದ. ಮಗನ ಓಡಾಟಕಡಿಮೆ ಮಾಡಬೇಕು ಮತ್ತುಆತನಿಗೆಉತ್ತಮಚಿಕಿತ್ಸೆಕೊಡಿಸಬೇಕೆಂದೆ ಬಾದಾಮಿಯಿಂದ ಬೆಂಗಳೂರಿಗೆ ಇಡೀಕುಟುಂವನ್ನೆಕರೆದುಕೊಂಡು ಬಂದೆ.

ಹಿರಿಯ ಮಗನನ್ನು ಬಲಿ ಪಡೆದಕ್ಯಾನ್ಸರ್ : ಬೆಂಗಳೂರಿಗೆ ಬಂದುಚಿಕಿತ್ಸೆ ಕೊಡಿಸಿದ ಮೇಲೆ ಮಗ ಹಂತ, ಹಂತವಾಗಿ ಚೇತರಿಸಿಕೊಳ್ಳುತ್ತಿದ್ದ. ಆದರೆದುರ್ವಿಧಿಕ್ಯಾನ್ಸರ್ ನನ್ನ ಮಗನನ್ನು ಕೊನೆಗೂ ಬಲಿ ಪಡಿಯಿತು ಸರ್ ! ಈಗ ಇರುವುದುಇವನೊಬ್ಬನೇ, ಈತಕುಡಿತದದಾಸ್ಯಕ್ಕೆ ಬಲಿಯಾಗಿದ್ದ. ಎರಡು ಪುನರ್ವಸತಿಕೇಂದ್ರದಲ್ಲಿಚಿಕಿತ್ಸೆ ಕೊಡಿಸಿದ್ದೆ. ಆದರೂ ಸಮಸ್ಯೆ ಬಗೆಹರಿದಿರಲಿಲ್ಲ. ಬಸವಮಾರ್ಗದಲ್ಲಿಚಿಕಿತ್ಸೆ ಕೊಡಿಸಿದ ಮೇಲೆ ಮಗ ಈಗ ಬದಲಾಗಿದ್ದಾನೆ. ಕುಡಿಯುವುದನ್ನು ಬಿಟ್ಟಿದ್ದಾನೆ. ಈಹ ಅವನನ್ನು ನೋಡಲು ನಮಗೆ ಖುಷಿಯಾಗುತ್ತದೆ. ಕುಟುಂಬದಲ್ಲಿ ಈಗ ಶಾಂತಿ ನೆಲೆಸಿದೆ. ಇದಕ್ಕೆಲ್ಲಕಾರಣ ಬಸವಮಾರ್ಗ ಸರ್… ಹಾಗಾಗಿ ಕೃತಜ್ಞತೆ ತಿಳಿಸಲು ನಾನು ಮತ್ತು ನನ್ನ ಮಗ ಇಲ್ಲಿಗೆ ಬಂದಿದ್ದೇವೆ ಸರ್‍ಎಂದು ಹೇಳಿದರು. ಕೃತಜ್ಞತೆ ಸಲ್ಲಿಸಲುಅವರು ಬಂದಿರುವುದು ನನಗೆ ಒಂದುರೀತಿಯಲ್ಲಿ ಖುಷಿ ಏನೋ ಆಯಿತು. ಆದರೆಅವರ ಮಗ ತೀರಿಕೊಂಡ ವಿಷಯ ಕೇಳಿದಾಗ ನನಗೂ ನಿಜಕ್ಕೂ ಬೇಸರವಾಯಿತು.!

ಮಗ ಕುಡಿತಕ್ಕೆದಾಸನಾಗಿ ಬಿಟ್ಟಿದ್ದ : ನಾನು ಬ್ಯಾಂಕ್‍ಉದ್ಯೋಗಿಯಾಗಿದ್ದೆ ಸರ್. ಕಾರಣಾಂತರಗಳಿಂದ ಕೆಲಸವನ್ನುತೊರೆಯಬೇಕಾಗಿ ಬಂದಿತ್ತು. ಕೆಲಸ ಬಿಟ್ಟಮೇಲೆಜೀವನ ನಿರ್ವಹಣೆತೊಂದರೆಯಾಗಿತ್ತು. ಆಗ ಮಕ್ಕಳು ಇನ್ನುಚಿಕ್ಕವರು. ಅವರನ್ನು ಓದಿಸುವ, ಬೆಳೆಸುವ ಮತ್ತು 90 ವರ್ಷದಅಮ್ಮನನ್ನು ನೋಡಿಕೊಳ್ಳುವ ಎಲ್ಲಜಬಾಬ್ದಾರಿ ನನ್ನ ಮೇಲೆಯೇಇತ್ತು. ನೀರಿನಕ್ಯಾನ್ ಪೂರೈಕೆ ಮಾಡುವ ಏಜೆಸ್ಸಿ ಪಡೆದು ಮತ್ತೆ ಕೆಲಸ ಪ್ರಾರಂಭಿಸಿದೆ. ಮದುವೆ ಮಂಟಪ ಮತ್ತುಇನ್ನಿತರೆ ಅಂಗಡಿಗಳಿಗೆ ನೀರು ಪೂರೈಕೆ ಮಾಡುತ್ತಿದ್ದೆ. ಇಬ್ಬರು ಮಕ್ಕಳನ್ನು ಡಿಪ್ಲೋಮಾ ಮಾಡಿಸಿದೆ. ಮಗಳಿಗೆ ಮದುವೆ ಮಾಡಿದ್ದೇನೆ. ಹಾಗೋ, ಹೀಗೋ ಜೀವನ ನಡೆಯುತ್ತಿತ್ತು. ಆದರೆಕಿರಿಯ ಮಗ ಹಲವಾರು ವರ್ಷಗಳಿಂದ ಕುಡಿತಕ್ಕೆದಾಸನಾಗಿ ಬಿಟ್ಟಿದ್ದ. ಮುಂದೆ ಹೇಗೋ-ಏನೋ ಎನ್ನುವಆತಂಕಎದುರಾಗಿತ್ತು. ಈಗ ಆ ಆತಂಕಇಲ್ಲ ಸರ್… ಮಗ ಬದಲಾಗಿದ್ದಾನೆ. ಅದಕ್ಕೆಕಾರಣ ನೀವು ಎಂದುಆನಂದ ಭಾಷ್ಪ ಹರಿಸಿದರು.

ಈಗ ಮಗನ ಬದುಕು ಬದಲಾಗಿದೆ : ಬಸವಮಾರ್ಗದಲ್ಲಿ ಮಗ ಚಿಕಿತ್ಸೆ ಪಡೆದು ಬಂದ ಮೇಲೆ ತುಂಬಾಚೆನ್ನಾಗಿದ್ದಾನೆ ಸರ್. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಕುಡಿತ ಬಿಟ್ಟು ಬದಲಾಗಿದ್ದಾನೆ. ಜೀವನದ ಬಗ್ಗೆ ಜಾವಾಬ್ದಾರಿ ಬಂದಿದೆ. ವ್ಯಕ್ತಿತ್ವದಲ್ಲಿ ಬದಲಾವಣೆಆಗಿದೆ. ತಂದೆ-ತಾಯಿಯನ್ನುಗೌರವದಿಂದಕಾಣುತ್ತಾನೆ. ಮಗನ ಪರಿವರ್ತನೆಯಿಂದ ಮನೆಯಲ್ಲಿ ಶಾಂತಿ ನೆಲೆಸಿದೆ ಸರ್‍ಎಂದು ನೆಮ್ಮದಿಯಿಂದ ಹೇಳಿದರು. ಕುಡಿತಕ್ಕೆದಾಸನಾಗಿದ್ದಾಗ ಪರಿಸ್ಥಿತಿ ಹೀಗೆ ಇರಲಿಲ್ಲ ಸರ್. ಜೀವನತುಂಬಾಕಷ್ಟವಾಗಿತ್ತು. ಮಗ ಕುಡಿತದದಾಸ್ಯಕ್ಕೆ ಬಲಿಯಾಗಿದ್ದಾಗ ಮನೆ ಬಾಡಿಗೆಕಟ್ಟುವುದಕ್ಕೂತೊಂದರೆಯಾಗಿತ್ತು ಸರ್‍ಎಂದರು.

ಬದುಕಿಗಾಗಿ ಫುಡ್‍ಡೆಲೆವರಿಮಾಡುತ್ತಿದ್ದೆ :
ಆಗ ನಾನು ಸ್ವಿಗ್ಗಿ, ಜೊಮೊಟೊದಲ್ಲಿ ಕೆಲಸ ಮಾಡುತ್ತಿದ್ದೆ ಸರ್. ಮನೆ, ಮನೆಗೆ ಫುಡ್‍ಡೆಲೆವರಿಕೊಡುತ್ತಿದ್ದೆ. ಬಂದ ಅಷ್ಟೋ, ಇಷ್ಟೋ, ಹಣದಲ್ಲಿ ಹೇಗೋ ಜೀವನ ಸಾಗಿಸುತ್ತಿದ್ದೆ. ಈ ನಡುವೆ ಮಗನ ಕುಡಿತದದಾಸ್ಯ ಬೇರೆ, ಜೀವನದಲ್ಲಿ ನೆಮ್ಮದಿ, ಶಾಂತಿಎಲ್ಲವನ್ನೂ ಕಳೆದುಕೊಂಡಿದ್ದೆ. ಬೆಂಗಳೂರಿನಂತ ಟ್ರಾಫಿಕ್ ಸಿಟಿಯಲ್ಲಿ ಫುಡ್‍ಡೆಲೆವರಿ ಮಾಡುವುದುತುಂಬಾ ಕಷ್ಟ. ಆಗ ಎಷ್ಟೋ ಕಸ್ಟಮರ್‍ಗಳು ಹೇಳುತ್ತಿದ್ದರು. ಈ ವಯಸ್ಸಿನಲ್ಲೂ ಯಾಕೆ ಈ ಕೆಲಸ ಮಾಡುತ್ತಿದ್ದೀರಿ. ವಯಸ್ಸಾಗಿದೆ ಮನೆಯಲ್ಲಿಕೂತು ವಿಶ್ರಾಂತಿ ತೆಗೆದುಕೊಳ್ಳಬಾರದೆ. ಮಕ್ಕಳು ಇಲ್ಲವೆ ?ಅವರು ಏನು ಮಾಡುತ್ತಿದ್ದಾರೆ ? ನಿಮ್ಮನ್ನು ನೋಡಿಕೊಳ್ಳುತ್ತಿಲ್ಲವೇ ?ಎಂದು ನಾನಾ ಪ್ರಶ್ನೆಗಳನ್ನು ಕೇಳುತ್ತಿದ್ದರು ಸರ್. ಅದಕ್ಕೆ ನನ್ನ ಕಡೆಇದ್ದದ್ದು, ಒಂದೇಉತ್ತರ ಸರ್, ಅದು ಬರಿ ಮೌನ….!

ಬದಲಾದ ಮೇಲೆ ಈಗ ಮಗನೆ ದುಡಿಯುತ್ತಾನೆ :
ಈಗ ಪರಿಸ್ಥಿತಿ ಆಗಿಲ್ಲ ಸರ್, ಮಗನೇ ದುಡಿದುತಂದಾಕುತ್ತಾನೆ. ಮನೆಯಲ್ಲಿಆರಾಮಾಗಿದ್ದೇನೆ. ಈ ವಯಸ್ಸಿನಲ್ಲಿ ನೀನು ಸ್ವಿಗ್ಗಿ, ಜೊಮೋಟೊ ಮಾಡುವುದು ಬೇಡ. ನಾನೇ ದುಡಿಯುತ್ತೇನೆ. ಅಮ್ಮ, ಅಜ್ಜಿಯಜೊತೆಗೆಆರಾಮಾಗಿ ಮನೆಯಲ್ಲಿಇರುಎಂದು ಹೇಳುತ್ತಾನೆ. ಅವರ ಈ ಬದಲಾವಣೆಗೆಕಾರಣ ಬಸವಮಾರ್ಗ ಸರ್. ಈ ಮುಂಚೆ ಅವರ ವರ್ತನೆಯಿಂದ ನಾನು ಸಾಕಷ್ಟು ನೊಂದು ಹೋಗಿದ್ದೆ ಸರ್. ಅನಾವಶ್ಯಕಖರ್ಚು, ದುಂದು ವೆಚ್ಚ, ಹಿರಿಯರು-ಕಿರಿಯರುಎನ್ನದೆ ಸೌಜನ್ಯವಿಲ್ಲದೆ ಮಾತಾಡುತ್ತಿದ್ದ. ಈತನಕುಡಿತದದಾಸ್ಯದಿಂದ ನಾನು ಎಲ್ಲಿಯೂತಲೆಎತ್ತಿಕೊಂಡು ಹೋಡಾಡಲು ಸಾಧ್ಯವಾಗುತ್ತಿರಲಿಲ್ಲ ಸರ್.

ಕಾರ್ಯಕ್ರಮಕ್ಕೆ ಹೋದರೆಅವಮಾನವಾಗುತ್ತಿತ್ತು : ಸಂಬಂಧಿಕರ ಮನೆಗೆ, ಮದುವೆಗೆ ಹೋದರೆಎಲ್ಲರೂ ಕೇಳುತ್ತಿದ್ದರು ಸರ್. ಮಗ ಎಲ್ಲಿ, ಮಗ ಯಾಕೆ ಬಂದಿಲ್ಲ. ಅವನನ್ನುಕರೆದುಕೊಂಡು ಬರಬೇಕಲ್ಲಎಂದು. ಆಗ ನಾವು ಏನೋ ಹೇಳಿ ಆ ಪರಿಸ್ಥಿತಿಯಿಂದ ಹೊರ ಬರುತ್ತಿದ್ದೆವು. ಮಗನ ಬಗ್ಗೆ ವಿಷಯಗೊತ್ತಿದ್ದವರು, ನಮ್ಮನ್ನುಕಂಡಕೂಡಲೇ ಗುಸು-ಗುಸು, ಪಿಸು-ಪಿಸು ಎಂದು ಮಾತಾಡಿಕೊಳ್ಳುತ್ತಿದ್ದರು. ಇದರಿಂದಅವರತಾಯಿಗೆ, ನನಗೆ ತೀವ್ರವಾಗಿ ಮುಜುಗರವಾಗುತ್ತಿತ್ತು. ಆದರೂಎಲ್ಲವನ್ನೂ ಸಹಿಸಿಕೊಂಡು ಬರುತ್ತಿದ್ದೇವು. ನಮ್ಮ ಹಣೆಯಲ್ಲಿ ಏನು ಬರೆದಿದೆಯೋಅದುಆಗುತ್ತಿದೆಎಂದು ಸಮಾಧಾನ ಮಾಡಿಕೊಂಡು ಬರುತ್ತಿದ್ದೇವು ಸರ್‍ಎಂದು ಹೇಳುತ್ತಿದ್ದರೆ ನನಗೆ ಅಯ್ಯೋ ಪಾಪಾ ಎನಿಸುತ್ತಿತ್ತು. !

ಹೊಸ ಜೀವನಕೊಟ್ಟ ಬಸವಮಾರ್ಗ :
ಹಾಗೆ ಸಂತೋಷ್‍ನನ್ನು ಮಾತಿಗೆ ಎಳೆದ ನಾನು. ಅವನ ಹತ್ತಿರವೂಒಂದಷ್ಟು ಸಮಯಚರ್ಚೆ ಮಾಡಿದೆ. ಸರ್‍ಜೀವನದಲ್ಲಿ ನಾನು ಈಗ ತುಂಬಾಚೆನ್ನಾಗಿದ್ದೇನೆ ಸರ್. ಹಿಂದಿನ ಸಂತೋಷ್‍ಗೂ, ಹೀಗಿನ ಸಂತೋಷ್‍ಗೂತುಂಬಾ ವ್ಯತ್ಯಾಸಗಳು ಇದೆ. ವ್ಯಸನಕ್ಕೆದಾಸನಾಗಿದ್ದಾಗಕುಡಿತ ಬಿಟ್ಟು ಬೇರೇನೂ ಬೇಕಾಗಿರಲಿಲ್ಲ ಸರ್. ಬೆಳಗ್ಗೆಯಿಂದ ಸಂಜೆಯವರೆಗೆ ಬರಿ ನಶೆಯಲ್ಲೇಇರುತ್ತಿದ್ದೆ. ತಂದೆ ಪಡುತ್ತಿದ್ದಕಷ್ಟವನ್ನೂ ನಾನು ಗಮನಿಸುತ್ತಿರಲಿಲ್ಲ. ಅಮ್ಮಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರು. ಕುಡಿತ ಬಿಟ್ಟು ಬದಲಾಗು ಮಗ ಎಂದು ಬೇಡಿಕೊಳ್ಳುತ್ತಿದ್ದರು. ಆದರೆ ನನ್ನ ಕಿವಿಗಳಿಗೆ ಅದ್ಯಾವ ಮಾತುಗಳು ಕೇಳುತ್ತಿರಲಿಲ್ಲ ಸರ್. ಬಸವಮಾರ್ಗಕ್ಕೆ ನಾನು ಬಂದುಚಿಕಿತ್ಸೆ ಪಡೆಯದಿದ್ದರೆ ನನ್ನ ಮತ್ತು ನನ್ನ ಕುಟುಂಬದ ಪರಿಸ್ಥಿತಿ ಏನಾಗುತ್ತಿತ್ತೋ…! ನೆನೆಪಿಸಿಕೊಂಡರೆ ಈಗಲೂ ಭಯವಾಗುತ್ತದೆ ಸರ್‍ಎಂದು ಮುಜುಗರದಿಂದಲೇತಲೆ ತಗ್ಗಿಸಿಕೊಂಡು ಹೇಳಿದ. ಬಸವಮಾರ್ಗದಲ್ಲಿ ಸಿಕ್ಕಿದ ಚಿಕಿತ್ಸೆ, ಮಾರ್ಗದರ್ಶನ, ಆಲ್ಕೋಹಾಲ್ ಅನಾನಿಮಸ್ ಮೀಟಿಂಗ್, ಸೇವೆಯ ಮಹತ್ವಎಲ್ಲವೂ ನನ್ನನ್ನು ಬದಲಿಸಿದೆ ಸರ್, ಒಂದು ದಿನದ ಮಹತ್ವ, ಸತತ ಮೀಟಿಂಗ್‍ನಿಂದಕುಡಿತದಿಂದದೂರಇದ್ದೇನೆ. ಈ ಬದಲಾವಣೆಗೆ ನೀವು ಮತ್ತು ಬಸವಮಾರ್ಗ ಸಂಸ್ಥೆಗೆ ಕಾರಣಎಂದು ಕೈ ಮುಗಿದ ಸಂತೋಷ್.!

ವಿಶ್ ಯುಗುಡ್ ಲಕ್ ಸಂತೋಷ್ :
ನಿಜಕ್ಕೂ ನನಗೆ ಖುಷಿಯಾಯಿತು. ನಾನು ಮಾಡುತ್ತಿರುವ ವ್ಯಸನಮುಕ್ತ ಸಮಾಜ ನಿರ್ಮಾಣದ ಸೇವೆ ಕೇವಲ ಒಬ್ಬ ವ್ಯಕ್ತಿಯನ್ನಲ್ಲ, ಆತನಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯಕಾಪಾಡುತ್ತದೆಎಂದು ನನಗೆ ನಾನು ಮನದಲ್ಲಿಅಂದುಕೊಂಡುಅವರಿಗೆ ಊಟ ಮಾಡಿಸಿ, ಅವರನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟೆ. ಕೊನೆಯದಾಗಿ ನಾನು ಹೇಳುವುದು ಒಂದೆ, ಕುಡಿತ ಬಿಡಲು ಪ್ರತಿಯೊಬ್ಬ ವ್ಯಸನಿಯೂ ಪ್ರಯತ್ನ ಪಡುತ್ತಾನೆ. ಆದರೆಅದಕ್ಕೆ ಸೂಕ್ತ ವೇದಿಕೆಯನ್ನುಕುಟುಂಬ, ಸಮಾಜ ಕಲ್ಪಿಸಿಕೊಡಬೇಕು. ಆಗ ಸಂತೋಷ್‍ನಂತೆಇತರೆ ವ್ಯಸನಿಗಳೂ ಬದಲಾಗುತ್ತಾರೆ. ಒಳ್ಳೆಯದಾಗಲಿ ಸಂತೋಷ್, ವಿಶ್ ಯುಗುಡ್ ಲಕ್….

ಲೇಖಕರು :

ಎಸ್.ಬಸವರಾಜು
ಸಂಸ್ಥಾಪಕರು
ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ
ಮೈಸೂರು

Leave a Reply

Your email address will not be published. Required fields are marked *