
ಚಾಮರಾಜನಗರ: ವಿಧಾನಸೌಧದ ಮೊಗಸಾಲೆಯಲ್ಲಿ ನಾಸೀರ್ ಹುಸೇನ ಪರ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿ ದೇಶ ದ್ರೋಹ ಕೆಲಸ ಮಾಡಿದ್ದು, ಆರೋಪಿಗಳನ್ನು ಬಂಧಿಸದೇ ರಾಜ್ಯ ಸರ್ಕಾರ ರಕ್ಷಣೆ ಮಾಡುವಲ್ಲಿ ಮುಂದಾಗಿದೆ ಎಂದು ಆರೋಪಿಸಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಮುಖಂಡರ ಭಾವಚಿತ್ರ ಸುಡಲು ಮುಂದಾಗುತ್ತಿದ್ದಂತೆ 100ಕ್ಕು ಹೆಚ್ಚು ಪ್ರತಿಭಟನಾಕಾರನ್ನು ಪೋಲಿಸರು ಬಂಧನಕ್ಕೊಳಪಡಿಸಿದ ಘಟನೆ ಬುಧವಾರ ನಡೆಯಿತು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂದೆ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸೂರ್ಯ ಬಾಲರಾಜ್ ನೇತೃತ್ವದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕತರ್Àರು ಹಾಗೂ ಮುಖಂಡರು ಬಿಜೆಪಿ ಬಾವುಟ ಹಾಗೂ ರಾಷ್ಟ್ರ ಧ್ವಜ ಹಿಡಿದು ಪ್ರತಿಭಟನೆ ನಡೆಸಿದರು. ಅಲ್ಲಿಂದ ಹೊರಟು ಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ಪ್ರತಿಭಟನಾ ಧರಣಿ ನಡೆಸಿ, ಸತ್ತಿ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಇದಕ್ಕು ಮುನ್ನಾ ವೃತ್ತದಲ್ಲಿ ರಾಷ್ಟ್ರ ದ್ರೋಹಿ ನಾಸೀರ್ ಹುಸೇನ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಸಂಸದ ಸುರೇಶ್ ಭಾವಚಿತ್ರವನ್ನು ಪ್ರದರ್ಶಿಸಿ ಸುಡಲು ಮುಂದಾದರು. ಪೊಲೀಸರು ಮಧ್ಯೆ ಪ್ರವೇಶ ಮಾಡಿ, ಭಾವಚಿತ್ರಗಳನ್ನು ಕಿತ್ತುಕೊಂಡರು. ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾ ನಿರತರನ್ನು ಪೊಲೀಸರು ಬಂಧನಕ್ಕೊಳಪಡಿಸಿ, ನಂತರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯ ಬಾಲರಾಜ್, ಕಾಂಗ್ರೆಸ್ ಪಕ್ಷದ ಹಿಂದಿನಿಂದಲು ಸಹ ಶತ್ರು ರಾಷ್ಟ್ರ ಪಾಕಿಸ್ತಾನದ ಬಗ್ಗೆ ಹಾಗೂ ಪಾಕ್ ಪ್ರೇಮಿಗಳ ಬಗ್ಗೆ ಮೃದು ಧೋರಣೆಯನ್ನು ಹೊಂದಿದೆ. ನಿನ್ನೆ ವಿಧಾನಸೌದ ಮೊಗಸಾಲೆಯಲ್ಲಿ ರಾಜ್ಯ ಸಭೆಗೆ ಆಯ್ಕೆಯಾದ ನಾಸೀರ್ ಹುಸೇನ್ ಅಭಿನಂದಿಸಲು ಬಂದ ದೇಶದ್ರೋಹಿಗಳು ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿಗಳ ಮುಂದೆಯೇ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದು ದೇಶ ದ್ರೋಹದ ಕೆಲಸವಾಗಿದೆ. ಇನ್ನು ಸಹ ಆರೋಪಿಗಳನ್ನು ಬಂಧಿಸದ ಕಾಂಗ್ರೆಸ್ ಸರ್ಕಾರ, ರಕ್ಷಣೆ ನೀಡಲು ಮುಂದಾಗಿದೆ ಎಂದು ಆರೋಪಿಸಿದರು.
ಭಾರತ ನೆಲದಲ್ಲಿದ್ದು, ಕಾವೇರಿ ನೀರು ಕುಡಿದು ಬದುಕುತ್ತಿರುವ ದೇಶ ದ್ರೋಹಿಗಳು ಪಾಕಿಸ್ತಾನದ ಬರ ಘೋಷಣೆ ಕೂಗುವ ಮೂಲಕ ರಾಷ್ಟ್ರ ಹಾಗೂ ರಾಜ್ಯಕ್ಕೆ ಅಪಮಾನ ಮಾಡಿದ್ದಾರೆ. ಇಂಥವರ ರಕ್ಷಣೆಗೆ ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಈ ದೇಶದ ನೆಲದಲ್ಲಿ ಹುಟ್ಟಿಲ್ಲವೇ? ಕಾವೇರಿ ನೀರು ಕುಡಿಯುತ್ತಿಲ್ಲವೇ? ಇಂಥ ದೇಶದ್ರೋಹಿಗಳನ್ನು ಹೀಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ಕರುನಾಡಿಗೆ ಕಂಟಕ ಗ್ಯಾರಂಟಿ. ಇಂಥ ದೇಶ ದ್ರೋಹಿಗಳನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಿ ಎಂದು ಆಗ್ರಹಿಸಿದರು.
ಕನ್ನಡ ಪರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳು ರಾಷ್ಟ್ರದ್ರೋಹಿಗಳ ವಿರುದ್ದ ಧ್ವನಿಯೆತ್ತಬೇಕು. ಇಂಥ ದುಷ್ಟ ಶಕ್ತಿಗಳಿಗೆ ಬೆಂಬಲ ನೀಡಿದರೆ, ತಾಯಿ ಭಾರತಾಂಬೆÉ ಹಾಗೂ ತಾಯಿ ಭುವನೇಶ್ವರಿಗೆ ಅಪಮಾನ ಮಾಡಿದಂತೆ ಆಗುತ್ತದೆ. ರಾಷ್ಟ್ರ ದ್ರೋಹಿಗಳನ್ನು ಬಂಧಿಸಿ, ಕ್ರಮಕೈಗೊಳ್ಳುವವರೆಗೆ ಬಿಜೆಪಿ ಯುವ ಮೋರ್ಚಾ ನಿರಂತರ ಹೋರಾಟ ಮಾಡಲಿದೆ ಎಂದು ಸೂರ್ಯ ಬಾಲರಾಜ್ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ನಗರ ಮಂಡಲದ ಅಧ್ಯಕ್ಷ ಶಿವರಾಜ್, ಮುಖಂಡರಾದ ನಿಜಗುಣರಾಜು, ಎಸ್. ಬಾಲಸುಬ್ರಮಣ್ಯ, ಬಿ.ಪಿ. ಶಾಂತಮೂರ್ತಿ, ಜಿಲ್ಲಾ ಕಾರ್ಯದರ್ಶಿ ವಿರಾಟ್ ಶಿವು, ಎಚ್.ಎಂ. ಪ್ರಣಯ್, ಆನಂದ್ ಭಗೀರಥ್, ಜಿಲ್ಲಾ ಕಾರ್ಯದರ್ಶಿ ನಟರಾಜು, ಎಪಿಎಂಸಿ ಅಧ್ಯಕ್ಷ ಮನೋಜ್ ಪಟೇಲ್,ಚಂದ್ರಶೇಖರನಾಯಕ್, ಚಂದ್ರು ನಾಯಕ್, ಮಹದೇವಸ್ವಾಮಿ, ಕೂಸಣ್ಣ, ಮೂಡುಗೂರು ಸುನಿಲ್, ನಾಗರಾಜು, ನಾಗೇಂದ್ರ, ಮಹೇಶ್, ಮರಿಯಾಲ ಮಹೇಶ್, ಮಾರ್ಕೇಟ್ ಕುಮಾರ್ ಮೊದಲಾದವರು ಇದ್ದರು.