ಅಪ್ಪು ಕರುನಾಡಿನ ಯುವಜನತೆಯ ಹೃದಯದಲ್ಲೂ ಅಜರಾಮರ : ಚಾ.ಗು.ನಾಗರಾಜ್

ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಕರುನಾಡಿನ ಪ್ರತಿ ಯುವಜನತೆಯ ಹೃದಯದಲ್ಲೂ ಎಂದೆAದಿಗೂ ಅಜರಾಮರರಾಗಿದ್ದಾರೆ ಎಂದು ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜ್ ಹೇಳಿದರು.

ನಗರದ 30 ವಾರ್ಡ್ ಬಾಬುಜಗಜೀವನರಾಂ ಬಡಾವಣೆಯಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 2 ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪುಷ್ಷಾರ್ಚನೆ ಮಾಡಿ ಮಾತನಾಡಿದರು.

ಪುನೀತ್ ರಾಜ್‌ಕುಮಾರ್ ಅನ್ನೋ ಹೆಸರು ಬರೀ ಕನ್ನಡಿಗರ ನೆಲದಲ್ಲಿ ಮಾತ್ರವಲ್ಲ ಇಡೀ ಜಗತ್ತಿಗೆ  ಹಬ್ಬಿಹೋಗಿದೆ. ಕನ್ನಡಿಗರ ಗುಣ, ಕೀರ್ತಿಯ ಸಿರಿಯನ್ನು ಜಗತ್ತಿಗೆ ಪಸರಿಸಲು ಪುನೀತ್ ರಾಜ್‌ಕುಮಾರ್ ಕೊಡುಗೆ ದೊಡ್ಡದಾಗಿದೆ. ತಮ್ಮ ಜೀವನದ ಹಾದಿ ಮುಗಿಸಿ  ಹೋಗಿದ್ದರು. ಅಪ್ಪು ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅಜರಾಮರರಾಗಿದ್ದಾರೆ. ಅವರನ್ನ ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ   ಮಾದಿಗ  ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ್, ಯಜಮಾನರಾದ ಎಚ್.ಲಿಂಗರಾಜು, ಎಂ.ಲಿಂಗಯ್ಯ, ಮಹದೇವಯ್ಯ, ನಿಂಗಯ್ಯ, ಬಾಬುಜಗಜೀವನರಾಂ ಕ್ಷೇಮಾಭಿವೃದ್ದಿ ಟ್ರಸ್ಟ್ ಅಧ್ಯಕ್ಷ  ಶಿವಕುಮಾರ್, ಕಾರ್ಯದರ್ಶಿ ಆರ್.ಎನ್.ಶಿವಣ್ಣ, ದೇವರಾಜು,ಮಹದೇವಸ್ವಾಮಿ,  ಚಿನ್ನಸ್ವಾಮಿ, ಸುಖರಿ, ಸುಂದರ್,   ಗಾಯಕ ರಾಮು, ಸುಬ್ಬು, ರಾಜೇಂದ್ರ, ಇತರರು ಹಾಜರಿದ್ದರು.

Leave a Reply

Your email address will not be published. Required fields are marked *