ಚಾಮರಾಜನಗರ: ಮನುಷ್ಯನಿಗೆ ನೆಮ್ಮದಿ ಸಿಗಬೇಕಾದರೆ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಶ್ರೀ ಮಲೆ ಮಾದೇಶ್ವರ ಬೆಟ್ಟ ಸಾಲೂರು ಮಠ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ಚಾಮರಾಜನಗರ ರಥದಲ್ಲಿರುವ ಶ್ರೀ ವಿದ್ಯಾಗಣಪತಿ ಮಂಡಳಿ, 61ನೇ ವರ್ಷದ ಶ್ರೀ ಸುದರ್ಶನ ಗಣಪತಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರವಚನ ನೀಡಿ ದಿನನಿತ್ಯ ಕೆಲಸದ ಒತ್ತಡದಲ್ಲಿ ನಾಗರಿಕರು ದೈನಂದಿನ ಜೀವನ ಮಾಡುತ್ತಿದ್ದರೆ ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ದೇವರ ಸ್ಮರಣೆ ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ ಮನುಷ್ಯನಿಗೆ ಸುಖ ಶಾಂತಿ ನೆಮ್ಮದಿ ಸಿಗಲಿದೆ ಎಂದು ತಿಳಿಸಿದರು.
ಶ್ರೀ ವರಸಿದ್ಧಿ ವಿನಾಯಕ ದೇವರು ಯಾವುದೇ ಕೆಲಸಗಳನ್ನು ಪ್ರಾರಂಭ ಮಾಡಬೇಕಾದ್ರೆ ಗಣೇಶನನ್ನು ಪ್ರಾರ್ಥನೆ ಮಾಡಿದರೆ ಎಲ್ಲಾ ಕೆಲಸ ಯಶಸ್ಸು ಸಿಗಲಿದೆ ಎಂದು ತಿಳಿಸಿದರು.
ಗಣಪತಿ ಮಂಡಳಿ ಅಧ್ಯಕ್ಷ ಕೃಷ್ಣ ಮಾತನಾಡಿ ಅಕ್ಟೋಬರ್ 15 ನೇ ತಾರೀಕು ತನಕ ವಿಧಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ 16ನೇ ತಾರೀಕು ಊರಿನ ಪ್ರಮುಖ ಬೀದಿಗಳಲ್ಲಿ ಗಣಪತಿ ಮೆರವಣಿಗೆ ಮಾಡಿ ವಿಸರ್ಜನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯದರ್ಶಿ ವಿರಾಟ್ ಶಿವು ಪ್ರಪ್ರಥಮವಾಗಿ ನಂಜನಗೂಡಿನ ಹೆಸರಾಂತ ಕಲಾವಿದೆ ರಂಜಿತ ಸೋಮಶೇಖರ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರಾಯೋಜನೆ ನೀಡಿದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ ಬಂಗಾರು ಗಣಪತಿ ಮಂಡಳಿಯಿಂದ ಸನ್ಮಾನಿಸಲಾಯಿತು ಎಂದು ತಿಳಿಸಿದರು.
ಗಣಪತಿ ಮಂಡಳಿಯ ಬಾಲಸುಬ್ರಮಣ್ಯಂ. ಸಮಾಜ ಸೇವಕ ಮೂಡಲ ಪುರ ನಂದೀಶ್. ಸುರೇಶ್ ನಾಯಕ ಶಿವಣ್ಣ. ಗಣೇಶ ದೀಕ್ಷಿತ್. ನಗರಸಭೆ ಸದಸ್ಯ ಸುದರ್ಶನ್ ಗೌಡ, ಬಂಗಾರು. ಮಹೇಶ್. ಆನಂದ್ ಭಗೀರಥ, ನವೀನ್, ಸಿದ್ದಲಿಂಗ ಮೂರ್ತಿ. ಮಂಜು ಮಹದೇವ ನಾಯಕ ಸೇರಿದಂತೆ ಗಣಪತಿ ಮಂಡಳಿ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು