ಚಾಮರಾಜನಗರ: ಮಾಜಿ ರಾಜ್ಯಪಾಲರಾದ ದಿ. ಬಿ. ರಾಚಯ್ಯ ನವರ ೧೦೧ನೇ ಜನ್ಮ ದಿನಾಚರಣೆಯನ್ನು ಬಿ. ರಾಚಯ್ಯನವರ ಪ್ರತಿಷ್ಠಾನದಿಂದ ತಾಲೂಕಿನ ಆಲೂರು ಗ್ರಾಮದ ಚಿರಶಾಂತಿ ಧಾಮದಲ್ಲಿ ಪೂಜೆ ಸಲ್ಲಿಸಲಾಯಿತು.
ಬೆಳಗ್ಗೆ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅವರು ರಾಚಯ್ಯ ಅವರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಆಲೂರಿನ ಚಿರಾಶಾಂತಿ ಧಾಮದಲ್ಲಿ ರಾಚಯ್ಯನವರ ಪುತ್ರರಾದ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿ.ಪಂ. ಮಾಜಿ ಸದಸ್ಯ ಆರ್. ಬಾಲರಾಜು ಹಾಗು ಕುಟುಂಬಸ್ಥರು ಪೂಜಾ ಕಾರ್ಯಕ್ರಮವ ನೆರೆವೇರಿಸಿದರು. ಆಲೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿದರು. ಅನ್ನಸಂತರ್ಪನೆ ನಡೆಯಿತು.
ಈ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕ ಆಲೂರು ಪ್ರದೀಪ್, ತಾ.ಪಂ. ಮಾಜಿ ಅಧ್ಯಕ್ಷ ಆರ್. ಮಹದೇವ್, ಮುಖಂಡರಾದ ಕಂದಹಳ್ಳೀ ನಂಜುಂಡಸ್ವಾಮಿ, ಆಲೂರು ಪ್ರವೀಣ್, ಚಿನ್ನಮುತ್ತು, ಗ್ರಾ.ಪಂ. ಮಾಜಿ ಅಧ್ಯಕ್ಷ ಮಹದೇವಯ್ಯ, ಎ.ಎಸ್. ಮಲ್ಲಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತೋಟೇಶ್, ಹೊಂಗನೂರು ಚಂದ್ರು, ಅರಕಲವಾಡಿ ಗುರುಸ್ವಾಮಿ, ಕಮರವಾಡಿ ರೇವಣ್ಣ, ಆಲೂರು ಬಾಬು ಹೊಂಗನೂರು ಪುಟ್ಟಸ್ವಾಮಿ, , ಸಾಹಿತಿಗಳಾದ ಸೋಮಶೇಖರ ಬಿಸಲ್ವಾಡಿ, ಎಸ್. ಲಕ್ಷ್ಮಿನರಸಿಂಹ, ಸಿ. ಮಹದೇವ್, ಮಂಜುಳಾ ಕೃಷ್ಣಮೂರ್ತಿ, ಶ್ರೀವರ್ಧನ್, ಹೊಂಗನೂರು ಚೇತನ್, ಇತರರು ಇದ್ದರು.