ಉಪ್ಪಾರ ಸಮುದಾಯ ಶೈಕ್ಷಣಿಕವಾಗಿ ಪ್ರಗತಿ  ಸಾಧಿಸಿದರೆ ಮಾತ್ರ ಅಭಿವೃದ್ದಿ ಸಾಧ್ಯ :  ಸಿ.ಪುಟ್ಟರಂಗಶೆಟ್ಟಿ

ಉಪ್ಪಾರ ಸಮಾಜದ ಎಸ್ಎಸ್ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಚಾಮರಾಜನಗರ: ಉಪ್ಪಾರ ಸಮುದಾಯ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಜೆ.ಹೆಚ್.ಪಟೇಲ್ ಸಭಾಂಗಣ ಜಿಲ್ಲಾ  ಉಪ್ಪಾರ ಸಂಘ, ಜಿಲ್ಲಾ ವ್ಯಾಪ್ತಿಯ ಎಲ್ಲಾ ಗಡಿಮನೆ, ಕಟ್ಟೆಮನೆ,  ಹಾಗೂ  ಎಲ್ಲಾ ಗ್ರಾಮಗಳ ಯಜಮಾನರುಗಳ  ಹಾಗೂ ಕುಲಸ್ಥರು, ಎಲ್ಲ ತಾಲೂಕು ಉಪ್ಪಾರ  ಸಂಘಗಳು, ಜಿಲ್ಲೆಯ  ಎಲ್ಲಾ ಉಪ್ಪಾರ ನೌಕರರ ಸಂಘಗಳ, ಜಿಲ್ಲಾ ವ್ಯಾಪ್ತಿಯ ಎಲ್ಲಾ ಉಪ್ಪಾರ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 2022-23 ನೇ ಸಾಲಿನ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ 20 ವರ್ಷಗಳಿಗೆ  ಹೋಲಿಸಿದರೆ ಸಮುದಾಯದಲ್ಲಿ ಶೈಕ್ಷಣಿಕ ಕ್ರಾಂತಿ‌ನಡೆಯುತ್ತಿದೆ.  ಪ್ರತಿ ವರ್ಷವೂ ಜಿಲ್ಲಾ ಉಪ್ಪಾರ ಸಂಘದ ವತಿಯಿಂದ ನಡೆಯುತ್ತಿರುವ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ  ಸಮಾಜದ ಮಕ್ಕಳು ಹೆಚ್ಚು ಹೆಚ್ಚು ಅಂಕ ಪಡೆದ ಪ್ರತಿಭಾ ಪುರಸ್ಕಾರ ಪಡೆದುಕೊಳ್ಳುತ್ತಿದ್ದಾರೆ.. ಈ ಪ್ರಮಾಣ ಹೆಚ್ಚಾಗಬೇಕು. ಶಿಕ್ಷಣಕ್ಕೆ   ಒತ್ತು ಕೊಡುವ ಮೂಲಕ  ಆಡಳಿತ ವರ್ಗದಲ್ಲಿ ಕೂರುವಂತಾಗಬೇಕು.  ಅ ಮೂಲಕ ಸಮಾಜದ ಅಭಿವೃದ್ದಿ ಶ್ರಮಿಸಬೇಕು ಎಂದರು.

ಕುಲಶಾಸ್ತ್ರ ಅಧ್ಯನಯ ನಡೆಯುತ್ತಿದ್ದು, ಕೆಲವು ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುತ್ತದೆ. ಸಮಾಜದಲ್ಲಿ ಬಾಲ್ಯ ವಿವಾಹಕ್ಕೆ ಕಡಿವಾಣ ಬಿದ್ದಿದೆ. ಈ ಕಾರಣದಿಂದ ಸಮಾಜದ ಹೆಣ್ಣು ಮಕ್ಕಳು  ಹೆಚ್ಚುಹೆಚ್ಚು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ವಸತಿ ಶಾಲೆಗಳ ಅಗತ್ಯ ಇದೆ  ಅದನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು. ಹಾಲಿಯಿರುವ ಹಿಂದುಳಿದ ವರ್ಗಗಳ ವಸತಿ ಶಾಲೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು

ಉಪ್ಪಾರ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ,  ಎಸ್ಎಸ್ ಎಲ್ ಸಿ ಓದಿದ್ದರೆ ಉದ್ಯೋಗಗಳು ಮನೆ ಬಾಗಿಲು ತಟ್ಟುವ ಕಾಲವೊಂದುವಿತ್ತು. ಇಂದು ಎಂಜಿನಿಯರ್, ವೈದ್ಯಕೀಯ ಕ್ಷೇತ್ರದಲ್ಲಿ ವಿಫುಲ ಅವಕಾಶ,ಇದೆ.  ಉಪ್ಪಾರ ಸಮುದಾಯಕ್ಕೆ ವಿದ್ಯೆಯೊಂದೇ ಶಕ್ತಿಯಾಗಿದೆ. ಆಗಾಗಿ ಸಮುದಾಯದವರು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಂಘಟಿತರಾಗಿ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬರಬೇಕಿದೆ ಎಂದರು.

ಜಿ.ಪಂ.ಮಾಜಿ ಸದಸ್ಯ ಯೋಗೇಶ್ ಮಾತನಾಡಿ,  ಸಮುದಾಯದಲ್ಲಿ ಕೊರತೆ ಮೊದಲಿನಿಂದಲ್ಲೂ‌ ಕಾಡುತ್ತಿದೆ. ಶೇ 60 ರಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ. ಶೇ.40 ರಷ್ಟು ಶಿಕ್ಷಣದಿಂದ ವಂಚಿತರಾಗಿದ್ದಾರೆ . ಉಪ್ಪಾರ ಸಮುದಾಯ ಮಕ್ಕಳಿಗೆ ವಸತಿ ಶಾಲೆಗಳು ಆಗಬೇಕು. ಸಮುದಾಯದವರು ಬಾಲ್ಯ ವಿವಾಹ ತ್ಯಜಿಸಬೇಕು ಎಂದರು.

ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಬೂದಿತಿಟ್ಡು ಲಿಂಗರಾಜು ಮಾತನಾಡಿ, ಉಪ್ಪಾರ ಸಮುದಾಯ ಮೀಸಲಾತಿ ಪಟ್ಟಿಗೆ ಸೇರ್ಪಡೆಯಾದಾಗ ಮಾತ್ರ ಅಭಿವೃದ್ದಿ ಸಾಧ್ಯ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು ಪ್ರಾಸ್ತಾವಿಕ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಿಲ್ಲಾ ಉಪ್ಪಾರ ಸಂಘದ ವತಯಿಂದ ಸನುದಾಯ ಮಕ್ಕಳಿಗೆ  ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಾಂಶುಪಾಲ ಸೋಮಣ್ಣ ಮಾತನಾಡಿ,  ಮೈಸೂರಿನಲ್ಲಿರುವ ಉಪ್ಪಾರ ಸಮುದಾಯ ವಿದ್ಯಾರ್ಥಿ ನಿಲಯ ಉತ್ತಮವಾಗಿ ನಡೆಯುತ್ತಿದೆ.  ವಿದ್ಯಾರ್ಥಿನಿಯರ ನಿಲಯವನ್ನು ಸ್ಥಾಪಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.

240 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:  2022-23_ ನೇ ಸಾಲಿನ ಎಸ್ ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 240 ಮಕ್ಕಳಿಗೆ  ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ  ಸಂಘದ ಪ್ರಧಾನ‌ಕಾರ್ಯದರ್ಶಿ ಚಿಕ್ಕಮಹದೇವು,  ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ ಪೆಕ್ಟರ್ ಚಿಕ್ಕರಾಜಶೆಟ್ಟಿ , ಚಾಮರಾಜನಗರ ತಾಲೂಕು ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಸೋಮಣ್ಣ, ರೇಚಣ್ಣ, ಲೋಕೇಶ್, ಮಲ್ಲು, ಮಹೇಶ್, ನಗರಸಬಾ ಸದಸ್ಯ ಬಸವಣ್ಣ,  ಮಂಗಲ ಗಡಿ ಯಜಮಾನ‌ರಾದ  ಕೃಷ್ಣಶೆಟ್ಟಿ, ಜಯಸ್ವಾಮಿ, ಚಿಕ್ಕತಾಂಡಶೆಟ್ಟಿ, ಮರಿಸ್ವಾಮಿ, ರಂಗಸ್ವಾಮಿ, ಮಹೇಶ್, ಮುಖಂಡ  ಕೃಷ್ಣಸ್ವಾಮಿ, ಪ್ರಾಂಶುಪಾಲ   ಪ್ರಿಯಶಂಕರ್,  ಮೂಳ್ಳೂರು ಸಿದ್ದಶೆಟ್ಟಿ, ಕೆನರಾಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ನಂಜುಂಡಸ್ವಾಮಿ,  ಡಿ.ಪಿ.ಗೋವಿಂದ, ಮಹೇಶ್, ರಮೇಶ್,ನಾಗರಾಜು ಉಪ್ಪಾರ್, ಸೋಮಣ್ಣ ಉಪ್ಪಾರ್, ರೇಚಣ್ಣ,  ಪ್ರಾಂಶಪಾಲ ಚನ್ನಶೆಟ್ಟಿ, ರವಿ, ಮಲೆಯೂರು ಮಹೇಂದ್ರ ಕೆಇಬಿ ಲೆಕ್ಕಾಧಿಕಾರಿ ಮಹೇಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗೌಡಹಳ್ಳಿ ಮಹೇಶ್,  ಕಂದಹಳ್ಳಿ ಬಸವಣ್ಣ, ಪಿ.ಗೋವಿಂದರಾಜು, ಮಹದೇವಸ್ವಾಮಿ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *