ಕ.ರಾ.ಮು.ವಿ.ವಿ : ಪ್ರವೇಶಾತಿಗೆ ಅರ್ಜಿ ಆಹ್ವಾನ

ಚಾಮರಾಜನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ೨೦೨೩-೨೪ನೇ ಶೈಕ್ಷಣಿಕ ಸಾಲಿನ (ಜುಲೈ ಆವೃತ್ತಿಯ) ಪ್ರಥಮ ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿಎಸ್ಸಿ, ಬಿ.ಎಸ್.ಡಬ್ಲೂ, ಎಂ.ಎ, ಎಂ.ಕಾಂ, ಎಂ.ಎಸ್.ಡಬ್ಲೂ, ಬಿ.ಎಲ್.ಐ.ಎಸ್ಸಿ, ಎಂ.ಎಲ್.ಐ.ಎಸ್ಸಿ, ಎಂ.ಎಸ್ಸಿ, ಎಂ.ಬಿ.ಎ, ಎಂ.ಬಿ.ಎ, ಎಂ.ಸಿ.ಎ, ಪಿಜಿ ಡಿಪ್ಲೋಮಾ, ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ.

ಅರ್ಹ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಚಾಮರಾಜನಗರ ಪ್ರಾದೇಶಿಕ ಕೇಂದ್ರದಲ್ಲಿ ಪ್ರವೇಶಾತಿಯನ್ನು ಪಡೆಯಬಹುದು. ಬಿಪಿಎಲ್ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳಿಗೆ ಭೋದನಾ ಶುಲ್ಕದಲ್ಲಿ ಶೇ ೧೫ರಷ್ಟು, ಆಟೋ, ಕ್ಯಾಬ್ ಚಾಲಕರ ಮಕ್ಕಳಿಗೆ ಭೋದನಾ ಶುಲ್ಕದಲ್ಲಿ ಶೇ. ೩೦ರಷ್ಟು ವಿನಾಯಿತಿ ನೀಡಲಾಗುವುದು. ಕೋವಿಡ್‌ನಿಂದ ನಿಧನ ಹೊಂದಿರುವ ಪೋಷಕರ ಮಕ್ಕಳಿಗೆ ಉಚಿತ ಪ್ರವೇಶಾತಿಗೆ ಅವಕಾಶ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ನಗರದ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಕಚೇರಿ (ಮೊ.ಸಂ: ೯೯೮೬೫೬೪೯೧೩, ೮೪೫೩೧೧೪೪೧೯, ೯೯೦೨೯೯೫೮೭೯, ೭೭೬೦೨೦೦೮೮೫, ೯೭೪೦೭೦೧೧೮೬, ೬೩೬೩೦೫೬೮೦೫, ೭೦೨೨೭೮೭೧೭೦, ೯೬೩೨೩೪೬೬೧೮, ೯೯೪೫೨೪೪೨೭೪, ೮೮೮೪೮೫೮೫೭೩, ೯೬೮೬೯೪೫೬೮೧) ಸಂಪರ್ಕಿಸುವಂತೆ ಮುಕ್ತ ವಿವಿ ಯ ಪ್ರಾದೇಶಿಕ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *