ಗೋಧ್ರಾ ಮಾದರಿ ಘಟನೆ ನಡೆಸಲು ಕಾಂಗ್ರೆಸ್ ಹುನ್ನಾರ : ಎನ್. ಮಹೇಶ್ ಆರೋಪ
ಚಾಮರಾಜನಗರ: ಹುಬ್ಬಳ್ಳಿಯಲ್ಲಿ ಬಂಧನಕ್ಕೊಳಗಾದ ಶ್ರೀಕಾಂತ್ ಪೂಜಾರಿಯವರ ಬಿಡುಗಡೆಗೆ ಆಗ್ರಹಿಸಿ, ಹಾಗೂ ರಾಮಭಕ್ತರ ಮೇಲೆ ಪೊಲೀಸ್ ಇಲಾಖೆಯಿಂದ ಆಗುತ್ತಿರುವ ದೌರ್ಜನ್ಯವನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನಾ ಧರಣಿ ನಡೆಸಿದರು.

ನಗರದ ಚಾಮರಾಜೇಶ್ವರ ಮುಂಭಾಗದ ಉದ್ಯಾನವನದ ಮುಂಭಾಗ ಶಾಮಿಯಾನ ಹಾಕಿ ಪ್ರತಿಭಟನಾ ಧರಣಿ ನಡೆಸಿದರು. ಬಳಿಕ ಭುವನೇಶ್ವರಿ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ, ಕಾಂಗ್ರೆಸ್ ಸರ್ಕಾರ, ಸಿಎಂ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಯತೀಂದ್ರ ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸರ್ಕಲ್‍ನಲ್ಲಿ ಟೈರ್‍ಗೆ ಬೆಂಕಿ ಹಾಕಲು ಮುಂದಾದ ಕಾರ್ಯಕರ್ತರನ್ನು ತಡೆದ ಪೊಲೀಸರು ವಿಫಲಗೊಳಿಸಿದರು. ಇದರಿಂದ ಕೆಲಕಾಲ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ, ನುಗ್ಗಾಟ ನಡೆಯಿತು.

ಪ್ರತಿಭಟನೆಯ ನೇತೃತ್ವದ ವಹಿಸಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಮಾತನಾಡಿ, ದೇಶವೇ ಆಯೋಧ್ಯಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಸಜ್ಜಾಗುತ್ತಿದೆ. ವಿಶ್ವದ ಎಲ್ಲಾ ಕಡೆ ಈ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದನ್ನು ಸಹಿಸಿದ ಕಾಂಗ್ರೆಸ್ ರಾಮಭಕ್ತರನ್ನು ಬಂಧಿಸುವ ಮೂಲಕ 1992ರ ಆಯೋಧ್ಯ ನಿರ್ಮಾಣಧಲ್ಲಿ ನಮ್ಮ ವಿರೋಧ ಇತ್ತು. ಈಗಾಲು ವಿರೋಧ ಇದೆ ಎಂಬುವುದು ಸಾಬೀತು ಪಡಿಸುತ್ತಿದೆ.
ಕಾಂಗ್ರೆಸ್ಸಿಗರÀಲ್ಲಿ ಆಯೋಧ್ಯ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದು ಬೇಕಾಗಿಲ್ಲ. ದೇಶದ ಜನರಲ್ಲಿ ಕೋಮು ಭಾವನೆಯನ್ನು ಭಿತ್ತಿ, ಆಶಾಂತಿಯನ್ನು ಉಂಟು ಮಾಡಿ, ಗೋಧ್ರ ಮಾದರಿಯಲ್ಲಿ ಗಲಾಟೆ ಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಇದನ್ನು ಮಾಡುವ ಹುನ್ನಾರ ಕಾಂಗ್ರೆಸ್ಸಿಗರಿಗೆ ಇದೆ. ಈ ಕೂಡಲೇ ಕೇಂದ್ರ ಸರ್ಕಾರ ಬಿ.ಕೆ. ಹರಿಪ್ರಸಾದ್ ಅವರನ್ನು ಬಂಧಿಸಿ, ತನಿಖೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.
ಜ. 22 ರಂದು ಆಯೋಧ್ಯದಲ್ಲಿ ಶ್ರೀರಾಮಮಂದಿರ ಉದ್ಘಾಟನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಜ. 22 ರಂದು ನಡೆಯುವ ಕಾರ್ಯಕ್ರಮವನ್ನು ಕೈಸ್ತರು, ಮುಸ್ಲಿಂ ಹಾಗು ಎಲ್ಲಾ ಧರ್ಮಿಯರು ಸ್ವಾಗತಿಸಿದ್ದಾರೆ. ಈಗ ಕರ ಸೇವಕ ಶ್ರೀಕಾಂತ್‍ಪೂಜಾರಿಯನ್ನು ಬಂಧಿಸುವ ಮೂಲಕ ಆಯೋಧ್ಯ ವಿವಾದವನ್ನು ಇನ್ನು ಜೀವಂತವಾಗಿಡಲು ಪ್ರಯತ್ನ ಮಾಡುತ್ತಿದೆ. ಈಗಾಗಲೇ ರಾಮ ಜನ್ಮ ಭೂಮಿ ಆಯೋಧ್ಯಯಲ್ಲಿಯೇ ರಾಮಮಂದಿರ ನಿರ್ಮಾಣ ಮಾಡುವಂತೆ ತೀರ್ಪು ನೀಡಿದೆ. ಇಷ್ಟಾಗಿ ಕಾಂಗ್ರೆಸ್ಸಿಗರಿಗೆ ಇದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಎಂದು ಎನ್. ಮಹೇಶ್ ಛೇಡಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ರಾಜೇಂದ್ರ, ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಮಾಜಿ ಶಾಸಕರಾದ ಸಿ.ಎಸ್. ನಿರಂಜನ್‍ಕುಮಾರ್, ಎಸ್. ಬಾಲರಾಜು, ನಗರ ಘಟಕದ ಅಧ್ಯಕ್ಷ ರಾಜು, ಮುಖಂಡರಾದ ಡಾ. ಎ.ಆರ್. ಬಾಬು, ನಿಜಗುಣರಾಜು, ಎಸ್. ಮಹದೇವಯ್ಯ, ಕುಲಗಾಣಶಾಂತಮೂರ್ತಿ, ಪಿ. ವೃಷಭೇಂದ್ರಪ್ಪ, ಡಾ. ಪಿ.ಸಿ. ಮೋಹನ್, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಪ್ರಣಯ್, ಜಯಸುಂದರ್, ಶಿವು ವಿರಾಟ್, ಸೂರ್ಯ ಬಾಲರಾಜು, ನಟರಾಜು, ಬಸವಣ್ಣ, ನೂರೆಂದುಶೆಟ್ಟಿ, ಸರಸ್ವತಿ, ದ್ರಾಕ್ಷಾಯಿಣಿ, ಶಿವಣ್ಣ, ಮಂಜುನಾಥ್ ಮೊದಲಾದವರು ಇದ್ದರು.