ಜಿಲ್ಲೆಯು ಎಲ್ಲ ರಂಗದಲ್ಲೂ ಪ್ರಥಮ ಸ್ಥಾನ ಪಡೆಯಲಿ: ಜಿಲ್ಲಾಧಿಕಾರಿ
ಚಾಮರಾಜನಗರ: ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ವತಿಯಿಂದ 68 ನೇ ಕನ್ನಡ ರಾಜ್ಯೋತ್ಸವ ಹಾಗೂ ಡಾ.ಪುನೀತ್ ರಾಜ್ ಕುಮಾರ್ ರವರ 2 ನೇ ವರ್ಷ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಗೇಟ್ ಬಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಗಡಿ ಜಿಲ್ಲೆ ಚಾಮರಾಜನಗರ ಎಲ್ಲದರಲ್ಲೂ ಪ್ರಥಮ ಸ್ಥಾನದಲ್ಲಿರಬೇಕು.ಕರ್ನಾಟಕ ಕನ್ನಡ ರಕ್ಷಣಾ ವೇದಿಕೆಯು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಚೆಂದವಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸುತ್ತಿರುವುದು ಖಷಿಯಾಗುತ್ತಿದೆ. ಗಡಿ ಜಿಲ್ಲೆಗೆ ಒಳ್ಳೆಯದಾಗಿ ಹೆಚ್ಚು ಹೆಚ್ಚು ಬೆಳಯಲಿ, ಪ್ರತಿಯೊಂದು ಕ್ಷೇತ್ರದಲ್ಲೂ ರಾಜ್ಯದ 31 ಜಿಲ್ಲೆಗಳ ಪೈಕಿ ನಮ್ಮ ಜಿಲ್ಲೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆಯಲಿ ಎಂದು ಪ್ರತಿಜ್ಞೆ ಮಾಡಿದರು.
ಅಧ್ಯಕ್ಷತೆ ವಹಿಸಿದ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜ್ ಮಾತನಾಡಿ, ಕರ್ನಾಟಕ ಏಕೀಕರಣ ಹೋರಾಟಗಾರರನ್ನು ಸ್ಮರಿಸಿಕೊಳ್ಳುವುದು ನಮ್ಮ ಆದ್ಯಕರ್ತವ್ಯವಾಗಿದೆ.ಕನ್ನಡ ರಾಜ್ಯೋತ್ಸವ -ನಿತ್ಯೋತ್ಸವ ಆಗಬೇಕು. ಕನ್ನಡವನ್ನು ಉಳಿಸಲು ಬೆಳಸುವಲ್ಲಿ ಕನ್ನಡ ಚಳವಳಿ ಶ್ರಮ ಅಪರವಾಗಿದೆ.
ರಾಜ್ಯದಲ್ಲಿ ಪರಬಾ಼ಷೆಯ ವ್ಯಾಮೋಹದಿಂದ ಅನ್ಯ ಬಾಷೆಯ ನಾಮಫಲಕಗಳು ರಾರಾಜಿಸುತ್ತಿದ್ದು ಇದರಿಂದ ಕನ್ನಡಕ್ಕೆ ಅಪಮಾನವಾದಂತಾಗುತ್ತಿದೆ ಆದ್ದರಿಂದ ರಾಜ್ಯ ಸರ್ಕಾರ ತ್ರಿಭಾಷೆ ನೀತಿ ಅನುಸರಿಸಿ ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯಗೊಳಿಸಬೇಕು ಹಾಗೂ ಕರ್ನಾಟಕ ರಾಜ್ ಸುವರ್ಣ ಮಹೋತ್ಸವ ಪ್ರಯುಕ್ತ ಮನೆಮನೆಗಳಲ್ಲಿ ಕನ್ನಡ ಜ್ಯೋತಿ ಬೆಳಗುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಹೆಚ್ವುವರಿ ಜಿಲ್ಲಾಧಿಕಾರಿ ಗೀತಾಹುಡೇದ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾದಿಕಾರಿ ಚಂದ್ರಪ್ರಕಾಶ ಮೀನಾ, ನಗರಸಭಾ ಸದಸ್ಯ ಮಹದೇವಯ್ಯ,ಮಾಜಿ ಸದಸ್ಯ ಲತಾ ಚಾ.ಗು.ನಾಗರಾಜ್, ಯ.ಹೆಚ್.ಲಿಂಗರಾಜು, ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಕುಮಾರ್, ಗ್ರಾ.ಪಂ.ಮಾಜಿ ಅಧ್ಯಕ್ಷ ಮಹದೇವಯ್ಯ, ಮಾಜಿ ಸದಸ್ಯ ಎಚ್.ಮೂರ್ತಿ, ಎಂ.ಶಿವಕುಮಾರ್, ಆರ್.ಎನ್.ಶಿವಣ್ಣ, ವೇದಿಕೆ ಉಪಾಧ್ಯಕ್ಷ ಬಂಗಾರನಾಯಕ, ಹೆಚ್.ಹೆಚ್.ನಾಗರಾಜ್, ರಾಮು, ಕುಮಾರ್, ಗಿರಿ, ರೇವಣ್ಣ, ಸುಂದರ್ ಇತರರು ಹಾಜರಿದ್ದರು.