ಚಾಮರಾಜನಗರ: ಕರ್ನಾಟಕದ ದಕ್ಷಿಣ ಶಿಕ್ಷಕರ ಮತ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಇಂದು (ನವೆಂಬರ್ 23) ಪ್ರಕಟಿಸಲಾಗಿದೆ.
ಮತದಾರ ನೊಂದಣಿ ಅಧಿಕಾರಿಗಳು/ ಪ್ರಾದೇಶಿಕ ಆಯುಕ್ತರು/ ಸಹಾಯಕ ಮತದಾರರ ನೊಂದಣಿ ಅಧಿಕಾರಿಗಳು/ ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿ ceo.karnataka.gov.in ವೆಬ್ಸೈಟ್ ಮತ್ತು ಸಂಬಂಧಪಟ್ಟ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿ ವೆಬ್ಸೈಟ್ ಗಳಲ್ಲಿ ಪಟ್ಟಿ ಲಭ್ಯವಿದೆ.
ಕರ್ನಾಟಕದ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ನವೆಂಬರ್ 6ರವರೆಗೆ 14,383 ಅರ್ಜಿಗಳು ಸಲ್ಲಿಯಾಗಿದ್ದು, ಈ ಪೈಕಿ 177 ಅರ್ಜಿಗಳು ತಿರಸ್ಕøತಗೊಂಡಿದೆ. ಇದರಲ್ಲಿ 14,206 ಅರ್ಜಿಗಳು ಸ್ವೀಕೃತಗೊಂಡಿವೆ.
ಕರಡು ಮತದಾರ ಪಟ್ಟಿಯಲ್ಲಿ 8,061 ಪುರುಷರು, 6,145 ಮಹಿಳೆಯರು ಸೇರಿದಂತೆ ಒಟ್ಟು 14,206 ಮತದಾರರಿದ್ದಾರೆ.
ನವೆಂಬರ್ 6ರವರೆಗೆ ಅರ್ಜಿಗಳನ್ನು ಸಲ್ಲಿಸಿದ ಎಲ್ಲಾ ಅರ್ಜಿದಾರರು ceo.karnataka.gov.in ನಿಗದಿಪಡಿಸಿದ ಸಂಬಂಧಿತ ಶಿಕ್ಷಕರ ಕ್ಷೇತ್ರದ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಲು ಮತ್ತು ಹಕ್ಕುಗಳು ಮತ್ತು ಆಕ್ಷೇಪಣೆಗಳು ಇದ್ದಲ್ಲಿ ಡಿಸೆಂಬರ್ 9 ರವರೆಗೆ ಸಂಬಂಧಪಟ್ಟ ಚುನಾವಣೆ ನೋಂದಣಿ ಅಧಿಕಾರಿಗಳಿಗೆ ಸಲ್ಲಿಸಬೇಕು. ಅರ್ಹ ಶಿಕ್ಷಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ನಮೂನೆ 18 ಮತ್ತು 19ರಲ್ಲಿ ಡಿಸೆಂಬರ್ 9 ರೊಳಗೆ ಅರ್ಜಿ ಸಲ್ಲಿಸುವಂತೆ ಮತದಾರರ ನೋಂದಣಾಧಿಕಾರಿ ಹಾಗೂ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಡಾ. ಜಿ.ಸಿ ಪ್ರಕಾಶ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.