ಕಾವೇರಿ ಕಿಚ್ಚು : ಕರ್ನಾಟಕ ಸೇನಾ ಪಡೆ ಘಂಟೆಯೊಡೆಯುವ ಚಳವಳಿ

ಚಾಮರಾಜನಗರ, ಸೆ. ೨೫- ಕರ್ನಾಟಕ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆಯು ಮುಂದುವರೆದಿದ್ದು ಇಂದು ನಗರದಲ್ಲಿ ಘಂಟೆಯೊಡೆಯುವ ವಿನೂತನ ಚಳವಳಿ ನಡೆಸಿದರು.

ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ  ಸೇನಾಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ್ದ ಪ್ರತಿಭಟನಾನಿತರು ರಾಷ್ಟಿçÃಯ ಹೆದ್ದಾರಿಯಲ್ಲಿ ಗಂಟೆಹೊತ್ತು ಬಾರಿಸುವ ಮೂಲಕ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಚಾ. ರಂ. ಶ್ರೀನಿವಾಸಗೌಡ ಮಾತನಾಡಿ,  ರಾಜ್ಯ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಕ್ರಮವನ್ನು ಖಂಡಿಸಿ ರೈತ, ಕನ್ನಡಪರ ಸಂಘಟನೆಗಳ ಕಳೆದ ೨೨ ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.  ರೈತರು, ಜನರ ಸಮಸ್ಯೆ ಕೇಳಿಸಿಕೊಳ್ಳದಿರುವುದರಿಂದ ಘಂಟೆಯೊಡೆದು ಯಾವುದೇ ಸರ್ಕಾರಗಳಿಗೆ ಕಿವಿ ಇಲ್ಲ. ರಾಜ್ಯಾದ್ಯಂತ ಕಾವೇರಿ ಕಿಚ್ಚು ಸದ್ದು ಮಾಡುತ್ತಿದ್ದರೂ ಕೂಡ ಯಾರು ಅದನ್ನು ಕೇಳಿಸಿಕೊಳ್ಳಲು ಸಿದ್ದ ಇಲ್ಲ ಎಂದು ಘಂಟೆಯೊಡೆಯುವ ವಿನೂತನ ಚಳವಳಿ ಹಮ್ಮಿಕೊಂಡು ರಾಜ್ಯ ಸರ್ಕಾರಗಳಿಗೆ ಎಚ್ಚರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ತಮಿಳುನಾಡಿಗೆ ಬಿಟ್ಟಿರುವ ಕಾವೇರಿ ನೀರನ್ನು ಕೂಡಲೇ ನಿಲ್ಲಿಸಬೇಕು ಇಲ್ಲದಿದ್ದರೆ ಚಾಮರಾಜನಗರ ಬಂದ್ ಮಾಡಬೇಕಾಗುತ್ತದೆ ಎಂದು ಶ್ರೀನಿವಾಸಗೌಡ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಣ್ಯದಹುಂಡಿ ರಾಜು, ಮಹೇಶ್‌ಗೌಡ, ನಿಜಧ್ವನಿಗೋವಿಂದರಾಜು, ಗು.ಪುರುಷೋತ್ತಮ್, ಮಹದೇವನಾಯಕ, ಚಾ.ರಾ.ಕುಮಾರ್, ಲಿಂಗರಾಜು, ನಾಗ, ಮಹೇಶ್, ಮಹೇಂದ್ರ, ನಂಜುಂಡ, ಆಟೋ ನಾಗೇಶ್, ವೀರಭದ್ರ, ಅರುಣ್‌ಕುಮಾರ್‌ಗೌಡ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *