ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ಧಿಮೆಗಳ ಔಪಚಾರಿಕರಣ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಆತ್ಮ ನಿರ್ಭರ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಯೋಜನೆಯಲ್ಲಿ ಕಿರು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ ಮೂಲ ಸೌಲಭ್ಯ, ಬ್ರಾಂಡಿಂಗ್ ಮತ್ತು ಮಾರುಕಟ್ಟೆಗೆ ಬೆಂಬಲ ನೀಡಲಾಗುತ್ತದೆ.
ಅರ್ಹ ರೈತರು, ಉದ್ಧಿಮೆದಾರರು ಗರಿಷ್ಠ ೧೦ ಲಕ್ಷ ಮಿತಿಯೊಂದಿಗೆ ಕೇಂದ್ರ ಸರ್ಕಾರದ ಶೇ.೩೫ರ ಸಹಾಯಧನ ಮತು ಗರಿಷ್ಠ ೫ ಲಕ್ಷ ಮಿತಿಯೊಂದಿಗೆ ರಾಜ್ಯ ಸರ್ಕಾರದ ಶೇ.೧೫ರ ಸಹಾಯಧನ, ಒಟ್ಟು ಶೇ.೫೦ರಷ್ಟು ಸಾಲ ಸಂಪರ್ಕಿತ ಬಂಡವಾಳದ ಸಹಾಯಧನವನ್ನು ಪಡೆದುಕೊಳ್ಳಬಹುದು.
ಜಿಲ್ಲೆಯಲ್ಲಿ ಅರಿಶಿಣ ಪುಡಿ, ಆಹಾರ ಧಾನ್ಯಗಳನ್ನು (ಅಕ್ಕಿ, ರಾಗಿ, ಗೋಧಿ, ಸಾಂಬಾರ ಪದಾರ್ಥಗಳು) ಹಿಟ್ಟು ಮಾಡುವುದು, ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ, ಹಾಲಿನ ಉತ್ಪನ್ನಗಳು, ಗಾಣದಿಂದ ಖಾದ್ಯ ಎಣ್ಣೆ ತಯಾರಿಕೆ, ಸಿರಿಧಾನ್ಯಗಳ ಹಿಟ್ಟುಮಾಡಿ ಮಿಶ್ರಣ ಮಾಡುವುದು, ಹಪ್ಪಳ, ಉಪ್ಪಿನಕಾಯಿ, ಕುರುಕಲು ತಿಂಡಿಗಳ ತಯಾರಿಕೆ ಇನ್ನಿತರೆ ಕಿರು ಆಹಾರ ಸಂಸ್ಕರಣಾ ಘಟಕಗಳಿಗೆ ಹೆಚ್ಚಿನ ಬೇಡಿಕೆ ಇದ್ದು ರೈತರು, ಉದ್ಧಿಮೆದಾರರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಯೋಜನೆಯ ನೋಡಲ್ ಅಧಿಕಾರಿ ಹೆಚ್.ಜೆ. ಸಂತೋಷ್ ಕುಮಾರ್, ಸಹಾಯಕ ಕೃಷಿ ನಿರ್ದೇಶಕರು (ಮೊ.ಸಂ ೮೪೯೫೯೮೮೧೩೩), ಸಂಪನ್ಮೂಲ ವ್ಯಕ್ತಿಗಳಾದ ಶ್ರೀನಾಥ್ರಾವ್ (ಮೊ.ಸಂ. ೯೮೪೫೭೯೩೪೧೧), ಮನೋಜ್ (ಮೊ.ಸಂ. ೯೯೧೬೮೪೯೬೫೨), ಮಹೇಶ್ (ಮೊ.ಸಂ. ೬೩೬೩೧೭೦೭೧೧), ಬಿ.ಎಸ್. ನಂದಿನಿ (ಮೊ.ಸಂ. ೮೦೯೫೮೪೩೬೮೦), ಸಿ. ನಂದಿನಿ (ಮೊ.ಸಂ. ೯೯೬೪೫೧೫೭೦೫), ಕೆ.ಜಿ. ನಂದಿನಿ (ಮೊ.ಸಂ. ೮೪೯೬೯೦೪೯೨೫) ಹಾಗೂ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.