ಕೂಲಿಕಾರನ ಬಾಳಲ್ಲಿ ಹಠಾತ್ ಮುಳ್ಳಾದ ಕಿಡ್ನಿ ವೈಫಲ್ಯ ತೊಂದರೆ

ಚಾಮರಾಜನಗರ 25ನೇ ವಾರ್ಡ್ನಲ್ಲಿ ವಾಸವಿರುವ 32ವರ್ಷದ ಅನುಪ್ ಎಂಬುವವರಿಗೆ ಮೂರು ತಿಂಗಳ ಹಿಂದೆ ಕಿಡ್ನಿ ವೈಫಲ್ಯದ ಮುನ್ಸೂಚನೆ ಕಾಣಿಸಿಕೊಂಡಿದೆ.

ಯಾವುದೇ ದುಶ್ಚಟ ದುರಾಭ್ಯಾಸಗಳಿಲ್ಲದ ಅನುಪ್ ಅವರು ಸಾಧಾರಣ ವಾಂತಿ ಮತ್ತು ದಿನಗೂಲಿತನದ ಆಯಾಸ ಎಂದು ತಿಳಿದು ಬಹುದೊಡ್ಡ ತೊಂದರೆಗೆ ಸಿಲುಕಿಕೊಂಡಿರುವ ಮುಗ್ಧ ಬಡಜೀವ. ಕೂಲಿ ಮಾಡುವ ಇವರ ಬದುಕು ಒಳ್ಳೆಯ ಹೆಂಡತಿ ಎರಡು ಮಕ್ಕಳು, ವೃದ್ಧ ತಂದೆ ತಾಯಿಗಳೊಂದಿಗೆ ಸರಳವಾಗಿ ಸಾಗುತ್ತಿತ್ತು.

ಆದರೆ ಇದೀಗ ಅನುಪ್ ಅವರು ಎರಡೂ ಕಿಡ್ನಿ ವೈಫಲ್ಯಕ್ಕೆ ಒಳಗಾದ ಕಾರಣ ಆ ಕುಟುಂಬದ ಕೀಲಿಕೈ ಮುರಿದಂತಾಗಿದೆ‌. ಇವರ ತಾಯಿ ಕಿಡ್ನಿ ನೀಡಲು ಸಿದ್ಧರಿದ್ದಾರೆ‌ ಆದರೆ ಶಸ್ತ್ರಚಿಕಿತ್ಸೆಗೆ ಸಾಕಷ್ಟು ಹಣ ವಿಲ್ಲದೆ ಸಾವು ಬದುಕಿನ ಹೋರಾಟವನ್ನು ಅನುಪ್ ಬಡ ಕುಟುಂಬ ನಿತ್ಯ ದುಃಖದಲ್ಲಿ ಜರ್ಜರಿತವಾಗಿ ಎದುರಿಸುತ್ತಿದೆ.

ಸದ್ಯಕ್ಕೆ ಈ ರೋಗ ಲಕ್ಷಣಕ್ಕೆ ಸರ್ಕಾರದಿಂದ ಯಾವುದೇ ನೇರ ಸಹಾಯ ಲಭ್ಯವಾಗುತ್ತಿಲ್ಲ. ಜೊತೆಗೆ ಇವರ ಬಳಿ ಯಾವುದೇ ಆರೋಗ್ಯ ವಿಮೆಗಳ ಭದ್ರತೆ ಮತ್ತು ಮುಂಜಾಗ್ರತೆ ಇಲ್ಲದಿರುವುದರಿಂದ ಎಲ್ಲಾ ಕಡೆಯಿಂದಲೂ ಅನುಪ್ ವಿಫಲರಾಗಿ ಪ್ರತಿದಿನ ನಿರಾಸೆಯ, ಭರವಸೆಹೀನ ಸ್ಥಿತಿಯಲ್ಲಿ ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ.

ಹಾಗಾಗಿ ಈ ಬಗ್ಗೆ ತಿಳಿದ ದಾನಿಗಳು ಹಾಗೂ ಎಲ್ಲರೂ ಕರುಣೆ ತೋರಿ ತಮ್ಮ ಕೈಲಾದ ಧನಸಹಾಯ ಮಾಡುವ ಮೂಲಕ ಅನುಪ್ ಅವರ ಬದುಕಿಗೆ ಆಶಾಕಿರಣರಾಗಿ, ಧೈರ್ಯತುಂಬುವವರಾಗಿ, ಬದುಕಿನ ಭರವಸೆ ಮೂಡಿಸುವವರಾಗಿ ಎಂದು ಈ ಮೂಲಕ ವಿನಂತಿ.

ಈ ಕೆಳಗೆ ಅನುಪ್ ಅವರ ಬ್ಯಾಂಕ್ ವಿಳಾಸ, ಖಾತೆ ಸಂಖ್ಯೆ, ಮೊಬೈಲ್ ನಂ. ತಿಳಿಸಲಾಗಿದೆ‌. ಬ್ಯಾಂಕ್ ವಿವರ: ಸ್ಟೇಟ್ ಬ್ಯಾಂಕ್‌ ಅಫ್ ಇಂಡಿಯಾ, ಚಾಮರಾಜನಗರ, ಖಾತೆ ಸಂಖ್ಯೆ: 64158900233, ಐಎಫ್‌ಎಸ್‌ಸಿ: SBIN0040062. ಮೊಬೈಲ್ ಸಂಖ್ಯೆ- 8095689535.(ಗೂಗಲ್ ಪೇ, ಪೋನ್ ಪೇ ಲಭ್ಯವಿದೆ) ದಯವಿಟ್ಟು ಕೈಲಾದಷ್ಟು ಬಡಕುಟುಂಬಕ್ಕೆ ಆಸರೆಯಾಗಿ.

Leave a Reply

Your email address will not be published. Required fields are marked *