ಚಾಮರಾಜನಗರ: ತಾಲೂಕಿನ ಮಸಗಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ ಡೆಸ್ಕ್, ಛೇರ್, ಕಂಪ್ಯೂಟರ್ನ್ನು ಕೊಡುಗೆ ನೀಡಲಾಯಿತು.
ಶಾಲಾವರಣದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಬಸವಯ್ಯ ಅವರಿಗೆ ಕಂಪನಿಯ ಉಪಪ್ರಧಾನ ವ್ಯವಸ್ಥಾಪಕ ನಿರ್ಮಲ್ಕುಮಾರ್ ವಿತರಿಸಿದರು ನಂತರ ಶಾಲಾ ಮಕ್ಕಳಿಗೆ ನೀರಿನ ಬಾಟಲ್, ನೋಟ್ಪುಸ್ತಕ, ಜಾಮಿಟ್ರಿ, ಲೇಖನ ಸಾಮಾಗ್ರಿಗಳನ್ನು ವಿತರಿಸಿದರು.
ಡೆಸ್ಕ್ ವಿತರಿಸಿದ ಕಂಪನಿಯ ಉಪಪ್ರಧಾನ ವ್ಯವಸ್ಥಾಪಕ ನಿರ್ಮಲ್ಕುಮಾರ್ ಮಾತನಾಡಿ, ನಮ್ಮ ಕಂಪನಿಯ ಸಿಎಸ್ಆರ್ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಸೌಲಭ್ಯ ಕೊರತೆಯಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ ನೆರವು ನೀಡಲಾಗುತ್ತಿದ್ದು ಈ ಬಾರಿ ಮಸಗಾಪುರ ಸರ್ಕಾರಿ ಶಾಲೆಗೆ ಡೆಸ್ಕ್, ಕಂಪ್ಯೂಟರ್, ಕಂಪ್ಯೂಟರ್ ಟೇ¨ಲ್, ಛರ್ಸ್, ಹಾಗೂ ವಿದ್ಯಾರ್ಥಿಗಳಿಗೆ ನೋಟ್ಪುಸ್ತಕ, ಲೇಖನ ಸಾಮಾಗ್ರಿಗಳು, ನೀರಿನ ಬಾಟಲ್ ವಿತರಿಸಲಾಗಿದೆ. ಮಕ್ಕಳು ಚೆನ್ನಾಗಿ ಓದುವ ಮೂಲಕ ಶಾಲೆಗೆ, ಪೋಷಕರಿಗೆ, ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಡಾ. ಪರಮೇಶ್ವರಪ್ಪ, ಉದ್ಯಮಿಗಳಾದ ಸಮೀಉಲ್ಲಾ, ಜಬೀಉಲ್ಲಾ, ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ವೇದಿಕೆಯ ಗೌರವ ಅಧ್ಯಕ್ಷ ಸುರೇಶ್ಗೌಡ, ಅಧ್ಯಕ್ಷ ಶಿವಣ್ಣ, ಎಸ್.ಆದಿಲ್, ಸಮಾಜ ಸೇವಕ ಡಾ. ಪರಮೇಶ್ವರಪ್ಪ, ಸಿಆರ್ಪಿ ಗಂಗಾಂಬಿಕೆ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಿದ್ದರಾಜು, ಗ್ರಾ.ಪಂ.ಸದಸ್ಯರಾದ ಮಂಜು, ತಾಯಮ್ಮ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.